ಜೈಲಿನಲ್ಲಿರುವ ದರ್ಶನ್‌ಗೆ ಬೆನ್ನುನೋವು – ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನ್‌

Public TV
1 Min Read

– ಅಭಿಮಾನಿಗಳನ್ನು ಕಂಡು ದರ್ಶನ್‌ ಫುಲ್‌ ಖುಷ್‌

ಬಳ್ಳಾರಿ: ವಿಪರೀತ ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್‌ಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನ್ ಮಾಡಿಸಲಾಯಿತು.

ಕೊಲೆ ಆರೋಪಿ ದರ್ಶನ್ ಬೆಂಗಳೂರಿನಲ್ಲೇ ಎಂಆರ್‌ಐ ಸ್ಕ್ಯಾನ್‌ಗೆ ಹಠ ಹಿಡಿದಿದ್ದರು. ಅದರೆ, ಸಂಜೆ ವೇಳೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನವೂಲಿಕೆ ಬಳಿಕ ರಾತ್ರಿ ವೇಳೆ ವಿಮ್ಸ್‌ನಲ್ಲೇ ಎಂಆರ್‌ಐ ಮಾಡಿಸಿಕೊಂಡು ಜೈಲಿಗೆ ಮರಳಿದರು. ಈ ದರ್ಶನ್ ನೋಡಲಿ ಅಭಿಮಾನಿಗಳು ಮುಗಿಬಿದ್ದರು. ಅಭಿಮಾನಿಗಳನ್ನ ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಜಾಮೀನು ಅರ್ಜಿ ವಜಾವಾದ ಬಳಿಕ ಬೆನ್ನುನೋವಿನಿಂದ ಬಳಲುತ್ತಿದ್ದ ಆರೋಪಿ ದರ್ಶನ್ ಎಂಆರ್‌ಐ ಸ್ಕ್ಯಾನ್ ನೆಪದಲ್ಲಾದರೂ ಬಳ್ಳಾರಿ ಜೈಲಿನಿಂದ ಬೆಂಗಳೂರು ಜೈಲಿಗೆ ಶಿಫ್ಟ್ ಅಗುವ ಪ್ಲ್ಯಾನ್‌ನಲ್ಲಿದ್ದರು. ಅದರೆ, ವಿಮ್ಸ್‌ನಲ್ಲೇ ಎಂಆರ್‌ಐ ಸ್ಕ್ಯಾನ್ ಮಾಡಲಾಯಿತು.

ಎಂಆರ್‌ಐ ಸ್ಕ್ಯಾನ್‌ಗೂ ಮುನ್ನ ಆಸ್ಪತ್ರೆಯಲ್ಲಿ ದರ್ಶನ್‌ಗೆ ವೈದ್ಯಕೀಯ ತಪಾಸಣೆ ಮಾಡಲಾಯಿತು. ಬಳಿಕ ಜೈಲಿನಿಂದ ವಿಮ್ಸ್ ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನ್‌ ಮಾಡಲಾಯಿತು. ಬಳಿಕ ಮತ್ತೆ ನಟನನ್ನು ಜೈಲಿಗೆ ಕರೆತರಲಾಯಿತು. ಈ ವೇಳೆ ಜೈಲಿನ ಬಳಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ನೆಚ್ಚಿನ ನಟನನ್ನು ಕಂಡು ಶಿಳ್ಳೆ, ಕೇಕೆ ಹಾಕಿದರು.

Share This Article