ಕರ್ನಾಟಕ ಬಿಜೆಪಿಯಲ್ಲಿ ಕೆಲವರಿಗೆ ದುರಹಂಕಾರ ಬಂದಿದೆ: ರೇಣುಕಾಚಾರ್ಯ

Public TV
1 Min Read

ಬೆಂಗಳೂರು: ಕರ್ನಾಟಕದ ಬಿಜೆಪಿಯಲ್ಲಿ (Karnataka BJP) ಕೆಲವರಿಗೆ ದುರಹಂಕಾರ ಬಂದಿದೆ. ಈ ಕೆಲವರ ದುರಹಂಕಾರದಿಂದ ಬಹಳ ಜನ ಬೇಸತ್ತು ಹೋಗಿದ್ದಾರೆ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (MP Renukacharya) ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಮ್ಮ ಪಕ್ಷದವರ ವಿರುದ್ಧವೇ ಹರಿಹಾಯ್ದರು. ಪಕ್ಷ ಸೋತ ನಂತರ ಎಲ್ಲರನ್ನೂ ಕರೆದು ಮಾತಾಡಿಸಬೇಕು. ಯಡಿಯೂರಪ್ಪ ಹಿಂದೆಲ್ಲ ಆ ಕೆಲಸ ಮಾಡಿದ್ರು. ಆದರೆ ಬಿಜೆಪಿಯಲ್ಲಿ ಕೆಲವರ ದುರಹಂಕಾರದಿಂದ ಬಹಳ ಜನ ಬೇಸತ್ತು ಹೋಗಿದ್ದಾರೆ ಎಂದು ಕಿಡಿಕಾರಿದರು.

ಬೇಸತ್ತು ಹೋಗಿರುವವರು ಮುಂದೆ ಪಕ್ಷ ಬಿಡಬಹುದು. ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗಿದೆ ಅಂತ ಜನ ಮಾತಾಡ್ತಿದ್ದಾರೆ. ನಾನು ಹೇಳ್ತಿಲ್ಲ, ಜನ ಹಾಗೆ ಹೇಳ್ತಿದ್ದಾರೆ. ಹಲವರು ಪಕ್ಷದಲ್ಲಿ ಮಾತಾಡಲು ಭಯಪಡುತ್ತಿದ್ದಾರೆ. ಬಿಜೆಪಿಗೆ ಮಧ್ಯದಲ್ಲಿ ಯಾರು ಬಂದಿದ್ದಾರೋ ಅವರ ಆಟವೇ ಜಾಸ್ತಿ ಆಗ್ತಿದೆ ಎಂದರು. ಇದನ್ನೂ ಓದಿ: 20 ಕೋಟಿ ಕೊಡಿ, ಇಲ್ಲದಿದ್ದರೆ ಕೊಲೆ ಮಾಡ್ತೀವಿ: ಮುಕೇಶ್ ಅಂಬಾನಿಗೆ ಬೆದರಿಕೆ

ರಾಜಕೀಯದಲ್ಲಿ ಗಾಡ್ ಫಾದರ್ ಬೇಕು. ಯಡಿಯೂರಪ್ಪ ಅವರಿಗೆ ಆ ಸಾಮರ್ಥ್ಯ ಇತ್ತು. ಯಡಿಯೂರಪ್ಪ (BS Yediyurappa) ಅವರ ನಾಯಕತ್ವ ಪಕ್ಷ ಗಟ್ಟಿಗೊಳಿಸಿದೆ. ಈಗಿನ ಪರಿಸ್ಥಿತಿಗೆ ಈಗಾಗಲೇ ಕೆಲವರು ಪಕ್ಷದಿಂದ ಹೊರಗೆ ಹೋಗಿದ್ದಾರೆ. ಅಭದ್ರತೆಯಿಂದ ಯಾರು ಬೇಕಾದರೂ ಪಕ್ಷ ಬಿಟ್ ಹೋಗಬಹುದು. ಮೋದಿಯವ್ರು ಯಡಿಯೂರಪ್ಪ ಅವರನ್ನು ಕಡೆಗಣಿಸಿಲ್ಲ. ಮಧ್ಯದಲ್ಲಿ ಇರೋರು ಕೆಲವರು ಯಡಿಯೂರಪ್ಪ ಅವರನ್ನು ಕಡೆಗಣಿಸ್ತಿದ್ದಾರೆ ಎಂದರು.

ನಾನು ಯಡಿಯೂರಪ್ಪ ಗರಡಿಯಲ್ಲಿ ಬೆಳೆದವನು. ಬಿಜೆಪಿ ಬಿಡ್ತೇನೆ ಅಂತ ಎಲ್ಲೂ ಹೇಳಿಲ್ಲ. ಕಾಂಗ್ರೆಸ್ ಸೇರುತ್ತೇನೆ ಅಂತ ಹೇಳಿಲ್ಲ. ಪಕ್ಷ ಕಟ್ಟೋಣ ಅಂತ ಯಡಿಯೂರಪ್ಪ ಹೇಳಿದ್ದಾರೆ. ನಾವು ಕಾದು ನೋಡುತ್ತೇವೆ. ಆದರೆ ಪಕ್ಷ ಬಿಡುವ ಬಗ್ಗೆ ಕೆಲವರು ಅಪಪ್ರಚಾರ ಮಾಡ್ತಿದ್ದಾರೆ ಎಂದು ಗರಂ ಆದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್