ಬಶೀರ್ ಸಾವಿನ ಕುರಿತು ಸಂಸದ ಪ್ರತಾಪ್ ಸಿಂಹ ಹೀಗಂದ್ರು

Public TV
2 Min Read

ಮೈಸೂರು: ನಗರದ ಸುರತ್ಕಲ್ ಸಮೀಪದ ಕಾಟಿಪಳ್ಳ ಎಂಬಲ್ಲಿ ನಡೆದ ದೀಪಕ್ ರಾವ್ ಹತ್ಯೆಯಂದೇ ದುಷ್ಕರ್ಮಿಗಳ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಬಶೀರ್ ಇಂದು ಮೃತಪಟ್ಟಿದ್ದು, ಇದೀಗ ಬಶೀರ್ ಸಾವನ್ನು ಸಂಸದ ಪ್ರತಾಪ್ ಸಿಂಹ ಖಂಡಿಸಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಟ್ವೀಟ್ ಮಾಡಿದ ಅವರು, `ಕಣ್ಣಿಗೆ ಕಣ್ಣು ಎಂದರೆ ಇಡೀ ಪ್ರಪಂಚವೇ ಅಂಧಕಾರದಲ್ಲಿ ಮುಳುಗಲಿದೆ’. ಬಶೀರ್ ಕೊಲೆ ದೀಪಕ್ ರಾವ್ ಕಗ್ಗೊಲೆಗೆ ಉತ್ತರವಲ್ಲ. ಹಿಂದೂ-ಮುಸ್ಲಿಂ ಶಾಂತಿ ಸಭೆ ನಡೆಸುವ ಸಮಯ ಈಗ ಬಂದಿದೆ. ಅದ್ಯಾಕೋ ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಶಾಂತಿ ನೆಲೆಸುವ ಬಗ್ಗೆ ಲಕ್ಷ್ಯವಹಿಸಿಲ್ಲ ಅಂತ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಬಶೀರ್ ಸಾವು

ಜ.3ರಂದು ಮಧ್ಯಾಹ್ನ 1.30ರ ವೇಳೆಗೆ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ದೀಪಕ್ ರಾವ್ ಅವರನ್ನು ಅಡ್ಡಗಟ್ಟಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ದೀಪಕ್ ಸ್ಥಳದಲ್ಲೇ ಮೃತಪಟ್ಟಿದ್ದರು. ಅಂದೇ ರಾತ್ರಿ 11.30ರ ಸುಮಾರಿಗೆ ಫಾಸ್ಟ್ ಫುಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬಶೀರ್(47) ತನ್ನ ಮನೆಯತ್ತ ತೆರಳುತ್ತಿದ್ದರು. ಈ ವೇಳೆ 3 ಬೈಕ್‍ನಲ್ಲಿ ಬಂದ 7 ಜನರ ತಂಡ ಏಕಾಏಕಿ ಬಶೀರ್ ಮೇಲೆ ತಲ್ವಾರ್ ದಾಳಿ ನಡೆಸಿ ಪರಾರಿಯಾಗಿದ್ದರು. ಈ ದಾಳಿ ಭಯಾನಕವಾಗಿದ್ದು ಅಂಬುಲೆನ್ಸ್ ಚಾಲಕ ಶೇಖರ್ ಎಂಬವರು ಬಶೀರ್ ಅವರನ್ನು ರಕ್ಷಣೆ ಮಾಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಇದನ್ನೂ ಒದಿ: ದುಷ್ಕರ್ಮಿಗಳ ದಾಳಿಗೆ ತುತ್ತಾಗಿದ್ದ ಬಶೀರ್ ಸ್ಥಿತಿ ಚಿಂತಾಜನಕ- ಆಸ್ಪತ್ರೆಗೆ ಸಚಿವ ಯುಟಿ ಖಾದರ್ ಭೇಟಿ

ಈ ವಿಚಾರದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಶೇಖರ್, ರಾತ್ರಿ ನಾನು ಕೆಲಸ ಮುಗಿಸಿ ಮನೆಗೆ ಬರುತ್ತಿದ್ದೆ. ಈ ವೇಳೆ ದಾರಿ ಮಧ್ಯೆ ವ್ಯಕ್ತಿ ಒಬ್ಬರು ಬಿದ್ದಿದ್ದರು. ಅಪಘಾತವಾಗಿ ರಸ್ತೆಗೆ ಬಿದ್ದಿರಬಹುದು ಎಂದು ಭಾವಿಸಿ ಅವರನ್ನು ಅಂಬುಲೆನ್ಸ್ ಹಾಕಿ ಆಸ್ಪತ್ರೆಗೆ ದಾಖಲಿಸಿದೆ. 5, 10 ನಿಮಿಷ ತಡವಾಗಿದ್ದರೂ ಅವರು ಬದುಕಿ ಉಳಿಯುವುದು ಕಷ್ಟವಾಗಿತ್ತು. ನಾನು ನನ್ನ ಕರ್ತವ್ಯ ಮಾಡಿದ್ದೇನೆ ಎಂದು ತಿಳಿಸಿದ್ದರು. ಇದನ್ನೂ ಓದಿ: ದೀಪಕ್ ಹತ್ಯೆ ನಡೆದ ರಾತ್ರಿ ಮಂಗ್ಳೂರಿನಲ್ಲಿ ವ್ಯಾಪಾರಿಯ ಮೇಲೆ ಮಾರಣಾಂತಿಕ ಹಲ್ಲೆ: ಸಿಸಿಟಿವಿಯಲ್ಲಿ ಸೆರೆ

ಗಂಭಿರ ಗಾಯಗೊಂಡು ನಗರದ ಎಜೆ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಬಶೀರ್ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *