ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಿ- ಸಿಎಂಗೆ ಪ್ರತಾಪ್ ಸಿಂಹ ಸಲಹೆ

Public TV
1 Min Read

ಮಡಿಕೇರಿ: ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಿ ಅಂತ ಸಿಎಂ ಸಿದ್ದರಾಮಯ್ಯ (Siddaramaiah) ರಿಗೆ ಸಂಸದ ಪ್ರತಾಪ್ ಸಿಂಹ ಸಲಹೆ ನೀಡಿದ್ದಾರೆ.

ಕೊಡಗಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅನ್ನಭಾಗ್ಯ ಯೋಜನೆ (AnnaBhagya Scheme) ಯಲ್ಲಿ 5 ಕೆ.ಜಿ ಅಕ್ಕಿ, ಉಳಿದ 5 ಕೆಜಿ ಅಕ್ಕಿಯ ಬದಲು ಹಣ ನೀಡುವ ರಾಜ್ಯ ಸರ್ಕಾರದ ನಿರ್ಧಾರ ವಿಚಾರ ಸಂಬಂಧ ಸಂಸದರು ಪ್ರತಿಕ್ರಿಯಿಸಿದರು. ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಿ ಅಂತ ಸಲಹೆ ನೀಡಿದರು.

ನೀವು ಗ್ಯಾರಂಟಿಯಲ್ಲಿ ಕೊಡುತ್ತೀವಿ ಅಂದಿದ್ದು 10 ಕೆ.ಜಿ, ಈಗ ಯಾಕೆ 5 ಕೆಜಿ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. 5 ಕೆ.ಜಿ ಅಕ್ಕಿ (Rice) ಕೇಂದ್ರ ಕೊಡುತ್ತಿರುವುದು ತಾನೇ, ನೀವು ನುಡಿದಂತೆ 10 ಕೆ.ಜಿಗೆ 34 ರೂ. ಹಾಗೆ ಹಣ ಕೊಡಿ ಎಂದರು. ಇದನ್ನೂ ಓದಿ: 5 ಕೆಜಿ ಅಕ್ಕಿಯ ಬದಲು ಖಾತೆಗೆ ಹಣ ಹಾಕಲು ಸರ್ಕಾರ ನಿರ್ಧಾರ: ಮುನಿಯಪ್ಪ

ಗ್ಯಾರಂಟಿ ಘೋಷಿಸುವಾಗ ಕೇಂದ್ರದ ಮೊದೀಜಿ ((Narendra Modi) ನೇತೃತ್ವದ ಸರ್ಕಾರ ಕೊಡುತ್ತಿದ್ದದ್ದು ಸೇರಿಸಿ ಹೇಳಿದ್ರಾ..?. ಮೋದಿ ನೇತೃತ್ವದ ಕೇಂದ್ರ ಕೊಡುತ್ತಿರುವುದಕ್ಕೆ ಅನ್ನಭಾಗ್ಯ ಲೇಬಲ್ ಹಾಕಿದ್ರಿ, ಈಗ ಸತ್ಯ ಒಪ್ಪಿಕೊಂಡಿದ್ದೀರಿ. ಕೆಂದ್ರದ ಅಕ್ಕಿಯ ಪಾಲಿನ ಬಗ್ಗೆ ಸತ್ಯ ಒಪ್ಪಿಕೊಂಡಿರುವುದಕ್ಕೆ ಸಿಎಂಗೆ ಧನ್ಯವಾದಗಳನ್ನು ತಿಳಿಸಲು ಬಯುತ್ತೇನೆ. ವಾಜಪೇಯಿ (Atal Bihari Vajpayee) ಅವರು ಅಂತ್ಯೋದಯ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿರುವುದು. ಅದು ನಿಮ್ಮ ಕಾಂಗ್ರೆಸ್ ಸರ್ಕಾರದ ಕೊಡುಗೆ ಅಲ್ಲ ಎಂದು ಇದೇ ವೇಳೆ ಪ್ರತಾಪ್ ಸಿಂಹ (Pratap Simha) ವಾಗ್ದಾಳಿ ನಡೆಸಿದರು.

ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಗೆ ಕಿಡಿಕಾರಿದ ಸಂಸದರು, ನಮ್ಮನ್ನ 40% ಸರ್ಕಾರ ಅಂತ ತಮಟೆ ಹೊಡೆದುಕೊಂಡು ಬಂದ್ರಿ. ಈಗ ನಿಮ್ಮದೇನು ಪೊಸ್ಟಿಂಗ್ ಸರ್ಕಾರನಾ ಎಂದು ಪ್ರಶ್ನಿಸಿದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್