– ಕೇಂದ್ರ ಹಣಕಾಸು ಸಚಿವೆ ಭೇಟಿಯಾದ ಶಿವಮೊಗ್ಗ ಸಂಸದ
– ನಬಾರ್ಡ್ ಸಹಾಯಧನ ಬಾಕಿ ಉಳಿದ ಹಣ ಶೀಘ್ರ ಬಿಡುಗಡೆಗೆ ಮನವಿ
ನವದೆಹಲಿ: ಪ್ರಸಾದ್ ಯೋಜನೆಯಡಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವನ್ನು (Kollur Mookambika Temple) ಸೇರಿಸುವಂತೆ ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ ಸಂಸದ ಬಿ.ವೈ.ರಾಘವೇಂದ್ರ (B.Y.Raghavendra) ಮನವಿ ಮಾಡಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರನ್ನು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಭೇಟಿಯಾಗಿದ್ದಾರೆ. ಈ ವೇಳೆ ಹಲವಾರು ಬೇಡಿಕೆಗಳನ್ನು ಸಚಿವರ ಮುಂದಿಟ್ಟಿದ್ದಾರೆ. ಇದನ್ನೂ ಓದಿ: ಜನೌಷಧಿ ಕೇಂದ್ರಗಳನ್ನು ಮುಚ್ಚಿಸಿಲ್ಲ, ಸರ್ಕಾರಿ ಆಸ್ಪತ್ರೆ ಆವರಣಗಳಲ್ಲಿ ಮಾತ್ರ ನಿರ್ಬಂಧಿಸಲು ನಿರ್ಧಾರ: ದಿನೇಶ್ ಗುಂಡೂರಾವ್
ಕೊಲ್ಲೂರು ಮೂಕಾಂಬಿಕಾ ದೇವಾಲಯವು ಧಾರ್ಮಿಕ ಮತ್ತು ಪ್ರಕೃತಿ ಸೌಂದರ್ಯದಿಂದ ಕೂಡಿದ್ದು, ಪ್ರವಾಸೋದ್ಯಮಕ್ಕೆ ಉತ್ತಮ ಸ್ಥಳವಾಗಿದೆ. ಪ್ರವಾಸಿಗರ ಆಕರ್ಷಣೆಯಿಂದ ಹೆಚ್ಚಿನ ಹೂಡಿಕೆ ಸಾಧ್ಯವಾಗಲಿದೆ. ಶಿವಮೊಗ್ಗ, ಮಂಗಳೂರು ಹಾಗೂ ಉಡುಪಿ CGHS ಕ್ಷೇಮ ಕೇಂದ್ರಗಳಿಗೆ ಹುದ್ದೆಗಳ ಮಂಜೂರಾತಿ ಹಾಗೂ ಅನುದಾನ ಬಿಡುಗಡೆಗೆ ಆದಷ್ಟು ಬೇಗ ಅನುಮೋದನೆ ನೀಡಬೇಕೆಂದು ಕೇಳಿಕೊಂಡಿದ್ದಾರೆ.
ನಬಾರ್ಡ್ ಸಹಾಯಧನ ಬಾಕಿ ಉಳಿದ ಹಣವನ್ನು ಶೀಘ್ರ ಬಿಡುಗಡೆ ಮಾಡಿ. ಈ ಯೋಜನೆಯಿಂದ ರಾಜ್ಯದ ಅಡಿಕೆ ಬೆಳೆಗಾರರಿಗೆ ಮೂಲಸೌಕರ್ಯ ಹಾಗೂ ಮೌಲ್ಯವರ್ಧನೆಯ ಲಾಭ ಸಿಗಲಿದೆ ಎಂದು ಸಚಿವರಿಗೆ ಮನವರಿಕೆ ಮಾಡಿದ್ದಾರೆ. ಇದನ್ನೂ ಓದಿ: ಉಕ್ಕು ವಲಯ ಅಭಿವೃದ್ಧಿ – ಒಡಿಶಾ ಮುಖ್ಯಮಂತ್ರಿ ಜೊತೆ ಹೆಚ್‌ಡಿಕೆ ಚರ್ಚೆ