ದೆಹಲಿಯಲ್ಲಿ ಪ್ರತಿಭಟಿಸ್ತಿರೋರು ರೈತರಲ್ಲ, ದೇಶದ್ರೋಹಿಗಳು: ಅನಂತ್‌ ಕುಮಾರ್‌ ಹೆಗಡೆ

Public TV
1 Min Read

ಕಾರವಾರ: ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ದೇಶದ್ರೋಹಿಗಳು, ರೈತರೇ (Delhi Chalo) ಅಲ್ಲ ಎಂದು ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ (Ananth Kumar Hegde) ಕಿಡಿಕಾರಿದ್ದಾರೆ.

ಜಿಲ್ಲೆಯ ಮುಂಡಗೋಡಿನಲ್ಲಿ ಮಾತನಾಡಿದ ಅವರು, ಅಲ್ಲಿ ಪ್ರತಿಭಟನೆಗೆ ಬರುವವರು ದೊಡ್ಡ ದೊಡ್ಡ ಗಾಡಿ ತೆಗೆದುಕೊಂಡು ಟೊಯೋಟಾ ಕಾರಲ್ಲಿ ಬರುತ್ತಾರೆ, ರೈತರ ಬಳಿ ಅಷ್ಟೆಲ್ಲಾ ದುಡ್ಡಿದೆಯಾ…? ಪ್ರತಿಭಟನೆ ಮಾಡುತ್ತಿರುವವರು ರೈತರೇ ಅಲ್ಲ, ಇದು ರೈತರ ಹೋರಾಟ ಅಲ್ಲ ದೇಶದ್ರೋಹಿಗಳ ಹೋರಾಟ. ಖಲಿಸ್ತಾನಿಗಳ ಹೋರಾಟ, ರೈತರ ಹೆಸರಿಟ್ಟುಕೊಂಡಿದ್ದಾರೆ. ಅಷ್ಟೇ ಅವರಿಗೆ ಬೇರೆ ದೇಶದವರು ಹಣ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಹೋರಾಟಕ್ಕೆ ಬರುವ ರೈತರು ಅನ್ಯಾಯ ಆಗಿದೆ ಅಂತ ಅವರು ಬೆಂಜ್ ಗಾಡಿಯಲ್ಲಿ, ಹೊಸ ಟ್ಯಾಕ್ಟರ್ ತಗೊಂಡು ಬರುವುದು. ಇದು ರೈತರ ಹೋರಾಟ ಅಲ್ಲ ದೇಶದ್ರೋಹಿಗಳ ಹೋರಾಟ. ಹೊಟ್ಟೆಕಿಚ್ಚಿನ ಮಂದಿ ಬಿಡುಗಡೆಗಾಗಿ ಕಾದು ಕುಳಿತಿದ್ದಾರೆ ಎಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ದ ಕಿಡಿಕಾರಿದರು. ಇದನ್ನೂ ಓದಿ: ಕಾಶ್ಮೀರ ಸುರಕ್ಷಿತವಾಗಿದೆ, ನಾನು ಸ್ವತಂತ್ರಳಾಗಿದ್ದೇನೆ – ಬ್ರಿಟನ್ ಸಂಸತ್‌ನಲ್ಲಿ ಕಾಶ್ಮೀರದ ಪತ್ರಕರ್ತೆ ಶ್ಲಾಘನೆ

Share This Article