ಇನಾಮ್ದಾರ್ ‘ಚೆಂದಾನೆ ಚೆಂದ’ ಗೀತೆಗೆ ಮನಸೋತರು ಸಿನಿಮಾ ಪ್ರೇಮಿಗಳು

Public TV
2 Min Read

ಚಂದನವನದಲ್ಲಿ ಇನಾಮ್ದಾರ್ (Inamdar) ಹವಾ ಹೇಗಿದೆ ಎಂಬುದು ನಿಮಗೀಗಾಗಲೇ ಗೊತ್ತಿದೆ. ಸೆಟ್ಟೇರಿದಾಗಿನಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಾ, ಸಿನಿದುನಿಯಾದಲ್ಲಿ ಸದ್ದು ಮಾಡುತ್ತಿರುವ ಸಂದೇಶ್ ಶೆಟ್ಟಿ ಆಜ್ರಿ  (Sandesh Shetty Aj) ನಿರ್ದೇಶನದ ಇನಾಮ್ದಾರ್ ಚಿತ್ರವೀಗ ‘ ಚೆಂದಾನೇ ಚೆಂದ’ ಹಾಡಿನ (Song) ಮೂಲಕ ಚಿತ್ರಪ್ರೇಮಿಗಳ ಮನಸೂರೆಗೊಳ್ಳುತ್ತಿದೆ. ವಿಶೇಷ ಅಂದರೆ ವೀರ ಬಾಲು (Veera Balu) ( ರಂಜನ್ ಛತ್ರಪತಿ)  ಹಾಗೂ ಭುವಿ (ಚಿರಶ್ರೀ ಅಂಚನ್) ಜೋಡಿ ಕಾಂತಾರ ಚಿತ್ರದ ಶಿವಲೀಲಾರನ್ನ ನೆನಪಿಸುವಂತಿದೆ.

ಇಂಟ್ರೆಸ್ಟಿಂಗ್ ಅಂದರೆ  ‘ಸಿಂಗಾರ ಸಿರಿಯೇ’ ಸಾಂಗ್ ರಚಿಸಿ ಶಿವಲೀಲಾ ಜೋಡಿನಾ ಒಂದು ಮಾಡಿದ್ದ ಖ್ಯಾತ ಲಿರಿಸಿಸ್ಟ್ ಪ್ರಮೋದ್ ಮರವಂತೆ, ರಂಜನ್ ಹಾಗೂ ಚಿರಶ್ರೀ ಜೋಡಿಗೆ ‘ ಚೆಂದಾನೇ ಚೆಂದ’ ಹಾಡು ಕಟ್ಟಿದ್ದಾರೆ. ‘ ಜೀವಕ್ಕೆ ಜೀವ ಒಂದಾದ ಭಾವ…ಪ್ರೀತಿಯ ನೀಡೋ ಜೀವಾನೇ ದೈವ’ ಎಂದು ಸಾಗುವ ಈ ಸೊಗಸಾದ ಗೀತೆಗೆ ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿದ್ದಾರೆ.

ರಮ್ಯಾ ಭಟ್ ಜೊತೆ ಸೇರಿ ಕಂಠ ಕುಣಿಸಿ ಕಲಾರಸಿಕರ ಹೃದಯ ತಟ್ಟುವಂತೆ ಮಾಡಿದ್ದಾರೆ. ನಿನ್ನೆಯಷ್ಟೇ ಕುಂದಾನಗರಿಯಲ್ಲಿ ಅದ್ದೂರಿಯಾಗಿ ಬಿಡುಗಡೆಗೊಂಡ ಈ ಸುಮಧುರ ಸಾಂಗ್, ಬೆಳಗಾವಿಯ ಕುಂದಾದಷ್ಟೇ ರುಚಿ ಎನಿಸಿದೆ. ಕಿವಿಗೆ ಅಷ್ಟೇ ಹಿತವಾಗಿ, ಕಣ್ಣಿಗೆ ಹಬ್ಬದಷ್ಟೇ ಮುದ ನೀಡಿದೆ.

ಇನ್ನೂ ‘ಚೆಂದಾನೇ ಚೆಂದ’ ಗೀತೆ ಇಷ್ಟೊಂದು ಅಂದವಾಗಿ ಕಾಣುವುದಕ್ಕೆ ಎನ್ ಮುರುಳೀಧರ್ ಕ್ಯಾಮರಾ ಕೈಚಳಕವೂ ಕೂಡ ಕಾರಣವಾಗಿದೆ.ಗೀತಾ ಸಾಯಿ ನೃತ್ಯ ಸಂಯೋಜನೆ ಈ ಹಾಡಿಗಿದ್ದು ನ್ಯಾಚುರಲ್ ಆಗಿ ಮೂಡಿಬಂದಿದೆ. ಈ ಹಿಂದೆ ‘ ಸಿಲ್ಕು ಮಿಲ್ಕು’ ಹಾಡಿನ ಮೂಲಕ ಪಡ್ಡೆಹೈಕ್ಳ ಮೈ ಚಳಿ ಬಿಡಿಸಿದ್ದ ಇನಾಮ್ದಾರ್ ಚಿತ್ರ ಇದೀಗ ‘ ಚೆಂದಾನೇ ಚೆಂದ’ ಸಾಂಗ್ ಮೂಲಕ ಸಮಸ್ತ ಸಿನಿಮಾ ಪ್ರೇಮಿಗಳ ಗಮನ ಸೆಳೆಯುತ್ತಿದೆ.

ಚಿತ್ರದಲ್ಲಿ ನಟಿ ಚಿರಶ್ರೀ ಅಂಚನ್ ಕರಾವಳಿ ಸೀಮೆಯ ಬುಡಕಟ್ಟು ಜನಾಂಗದ ಹೆಣ್ಣುಮಗಳಾಗಿ ಮಿಂಚಿದರೆ, ಉತ್ತರ ಕರ್ನಾಟಕದ ಪ್ರತಿಭೆ ರಂಜನ್ ಛತ್ರಪತಿ ‘ ಇನಾಮ್ದಾರ್’ ಕುಟುಂಬದ ಮಗನ ಪಾತ್ರ ನಿರ್ವಹಿಸಿದ್ದಾರೆ. ಹಿರಿಯ ನಟ ಅವಿನಾಶ್, ಶರತ್ ಲೋಹಿತಾಶ್ವ, ಥ್ರಿಲ್ಲರ್ ಮಂಜು, ಎಂ.ಕೆ. ಮಠ, ಪ್ರಮೋದ್ ಶೆಟ್ಟಿ, ಸಂದೇಶ್ ಶೆಟ್ಟಿ ಆಜ್ರಿ, ಪ್ರಶಾಂತ್ ಸಿದ್ದಿ, ಎಸ್ತರ್ ನರೋನ್ಹಾ ಸೇರಿದಂತೆ ಹಲವರು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಕಪ್ಪು ಸುಂದರಿಯ ಸುತ್ತ ಎನ್ನುವ ಟ್ಯಾಗ್ ಲೈನ್ ಹೊತ್ತು ಬರುತ್ತಿರುವ ‘ ಇನಾಮ್ದಾರ್’ ಚಿತ್ರ,  ಶಿವಾಜಿ ಆರಾಧಕರು ಮತ್ತು ಶಿವನ ಆರಾಧಕರ ನಡುವೆ ಹೊತ್ತಿಕೊಳ್ಳುವ ವರ್ಣ ಸಂಘರ್ಷದ ಕಥನವನ್ನೊಳಗೊಂಡಿದೆ. ಈಗಾಗಲೇ ಹೊರಬಿದ್ದಿರುವ ಟೀಸರ್, ಟ್ರೇಲರ್, ಹಾಡುಗಳು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿವೆ. ನಿರಂಜನ್ ಶೆಟ್ಟಿ ತಲ್ಲೂರ್ ಬಂಡವಾಳದಲ್ಲಿ  ತಸ್ಮೈ ಪ್ರೊಡಕ್ಷನ್ ಅಂಡ್ ಶ್ರೀ ಕುಂತಿಯಮ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಅದ್ದೂರಿಯಾಗಿ ಸಿನಿಮಾ ಮೂಡಿಬಂದಿದೆ. ಇದೇ ಅಕ್ಟೋಬರ್ 27 ರಂದು ಇನಾಮ್ದಾರ್ ಚಿತ್ರ ಬೆಳ್ಳಿತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಡಲಿದೆ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್