ಮಾಧುರಿ ಆನೆಯನ್ನು ಮಠಕ್ಕೆ, ಸರ್ಕಾರಿ ಮೃಗಾಲಯಕ್ಕೆ ಸ್ಥಳಾಂತರಿಸಿ – ಜೈನ ಸಮುದಾಯ ಒತ್ತಾಯ

Public TV
1 Min Read

ಮುಂಬೈ: ಕೊಲ್ಲಾಪುರದ ನಂದನಿ ಮಠದಿಂದ ಮಾಧುರಿ ಆನೆಯನ್ನು ಅನಂತ್ ಅಂಬಾನಿಯವರ ವಂತಾರ ಪ್ರಾಣಿ ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಿರುವುದಕ್ಕೆ ಮಹಾರಾಷ್ಟ್ರ ಮತ್ತು ಕರ್ನಾಟಕದ ಜೈನ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದೆ.ಇದನ್ನೂ ಓದಿ: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ – ಪ್ರಮುಖ ಆರೋಪಿಯ ಬ್ಯಾಂಕ್ ಖಾತೆ ಸೀಜ್

ಜು.16ರಂದು ಮುಂಬೈ ಹೈಕೋರ್ಟ್, ಪೆಟಾ-ಇಂಡಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಆನೆಯನ್ನು ವಂತಾರ ಮೃಗಾಲಯಕ್ಕೆ ಸ್ಥಳಾಂತರಿಸುವಂತೆ ಸೂಚಿಸಿತ್ತು. 36 ವರ್ಷದ ಮಾಧುರಿ ಆನೆಯು 3 ದಶಕಗಳಿಗೂ ಹೆಚ್ಚು ಕಾಲ ನಂದನಿಯಲ್ಲಿರುವ ಶ್ರೀ ಜಿನ್ಸೇನ್ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಯವರ ಜೈನ ಮಠದಲ್ಲಿತ್ತು. ಹೈಕೋರ್ಟ್ ತೀರ್ಪಿನ ಬಳಿಕ ಮಾಧುರಿಯನ್ನು ಗುಜರಾತ್‌ನ ವಂತಾರ ಪ್ರಾಣಿ ರಕ್ಷಣಾ ಕೇಂದ್ರದಲ್ಲಿರುವ ರಾಧೆ ಕೃಷ್ಣ ದೇವಾಲಯ ಆನೆ ಕಲ್ಯಾಣ ಟ್ರಸ್ಟ್ಗೆ ಸ್ಥಳಾಂತರಿಸಲಾಗಿತ್ತು. ಅದಾದ ನಂತರ ಜು.25ರಂದು ಸುಪ್ರೀಂ ಕೋರ್ಟ್, ಹೈಕೋರ್ಟ್ನ ಆದೇಶವನ್ನು ಎತ್ತಿಹಿಡಿದಿತ್ತು.

ಅನೇಕ ಜೈನರು, ಆನೆಯನ್ನು ಅನಂತ್ ಅಂಬಾನಿಯ ಖಾಸಗಿ ಉದ್ಯಮವಾಗಿರುವ ವಂತಾರ ಕೇಂದ್ರದಲ್ಲಿ ಇರಿಸುವ ಬದಲು ಮಠಕ್ಕೆ ಹಿಂತಿರುಗಿಸಬೇಕು ಅಥವಾ ಸರ್ಕಾರಿ ಮೃಗಾಯಲಕ್ಕೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ.ಇದನ್ನೂ ಓದಿ: ಧರ್ಮಸ್ಥಳ ಕೇಸ್; 2 ಗುಂಪುಗಳ ನಡುವೆ ಮಾರಾಮಾರಿ – ವರದಿಗೆ ಹೋದ ಖಾಸಗಿ ವಾಹಿನಿ ವರದಿಗಾರ, ಕ್ಯಾಮೆರಾಮ್ಯಾನ್ ಮೇಲೆ ಹಲ್ಲೆ

Share This Article