ಮಗಳ ಪ್ರಿಯಕರನ ಮುಖಕ್ಕೆ ಮೆಣಸಿನ ಪುಡಿ ಎರಚಿ ರಾಡ್‍ನಿಂದ ಹಲ್ಲೆ ನಡೆಸಿದ ಮಹಿಳೆ

Public TV
1 Min Read

ಮುಂಬೈ: ಮಗಳನ್ನು(Daughter) ಪ್ರೀತಿಸುತ್ತಿದ್ದ ಪ್ರಿಯಕರನ (Lover) ಮುಖಕ್ಕೆ ಮೆಣಸಿನ ಪುಡಿ (Chilli Powder) ಎರಚಿ ರಾಡ್‍ನಿಂದ ಹಲ್ಲೆ ನಡೆಸಿದ ಆರೋಪದಡಿ ಮಹಿಳೆ ಮತ್ತು ಆಕೆಯ ಪುತ್ರನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.

ಸೆಪ್ಟೆಂಬರ್ 13 ರಂದು ಚಿಂಚ್‍ವಾಡ್ ಪ್ರದೇಶದ ಪಾಶ್ ಸೊಸೈಟಿ ಬಳಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ವಿಶಾಲ್ ಕಸ್ಬೆ(Vishal Kasbe) ಎಂದು ಗುರುತಿಸಲಾಗಿದ್ದು, ಕಳೆದ ಆರು ವರ್ಷಗಳಿಂದ ಯುವಕ ಹಾಗೂ ಮಹಿಳೆಯ ಪುತ್ರಿ ಪರಸ್ಪರ ಪ್ರೀತಿಸುತ್ತಿದ್ದರು. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಯುವತಿಯನ್ನು ಭೇಟಿಯಾಗಲು ಯುವಕ ಬಂದಿದ್ದನು. ಆದರೆ ಆತ ತನ್ನ ಗೆಳತಿಯನ್ನು (Girlfriend) ಭೇಟಿಯಾಗುವ ಮುನ್ನವೇ ಆಕೆಯ ತಾಯಿ ಮತ್ತು ಇಬ್ಬರು ಅಪ್ರಾಪ್ತ ಸಹೋದರರು ಮನೆಯಿಂದ ಹೊರಬಂದು ಯುವಕನನ್ನು ವಿಚಾರಿಸಲು ಆರಂಭಿಸಿದ್ದಾರೆ. ಈ ವೇಳೆ ಮಾತು ಜಗಳಕ್ಕೆ ತಿರುಗಿದೆ.

ನಂತರ ಯುವಕನ ಮುಖಕ್ಕೆ ಮಹಿಳೆ ಮೆಣಸಿನ ಪುಡಿ ಎರಚಿದ್ದಾಳೆ. ಇದರಿಂದ ಅಸಹಾಯಕನಾದ ಯುವಕನಿಗೆ ಮಹಿಳೆಯ ಪುತ್ರರು ರಾಡ್‍ನಿಂದ(Rod) ಹಲ್ಲೆ ನಡೆಸಿ ಅಮಾನುಷವಾಗಿ ಥಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಸ್ಥಳೀಯರು(Residents) ಯುವಕನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದೀಗ ಪ್ರಿಯಕರ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ(Treatment) ಪಡೆಯುತ್ತಿದ್ದಾನೆ ಮತ್ತು ಆತನ ತಲೆಗೆ ಹಲವಾರು ಗಾಯಗಳಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಭೀಕರ ರಸ್ತೆ ಅಪಘಾತ – ಡಿಕ್ಕಿ ಹೊಡೆದು, ಬೈಕ್ ಸವಾರನ ಎಳೆದೊಯ್ದ ಲಾರಿ

ಸದ್ಯ ಗೆಳತಿಯ ತಾಯಿ ಹಾಗೂ ಆಕೆಯ ಇಬ್ಬರು ಪುತ್ರರನ್ನು ಪೊಲೀಸರು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ದೇಣಿಗೆ ಬೆದರಿಕೆ ಪ್ರಕರಣ – ಮೂವರು ಕಾಂಗ್ರೆಸ್ ಕಾರ್ಯಕರ್ತರು ಅಮಾನತು

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *