4 ಲಕ್ಷಕ್ಕೆ 21 ದಿನದ ಹೆಣ್ಣು ಶಿಶುವನ್ನು ಮಾರಿದ ತಾಯಿ!

Public TV
2 Min Read

ಕೋಲ್ಕತ್ತಾ: ಇತ್ತೀಚಿನ ದಿನಗಳಲ್ಲಿ ಹಣಕ್ಕಾಗಿ ಜನ ಏನು ಮಾಡಲು ತಯಾರು ಇರುತ್ತಾರೆ. ಅಂತೆಯೇ ಇಲ್ಲೊಬ್ಬ ನಿರ್ದಯಿ ತಾಯಿ ತನ್ನ 21 ದಿನದ ಹೆಣ್ಣು ಮಗುವನ್ನು 4 ಲಕ್ಷಕ್ಕೆ ಮಾರಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

ಮಹಿಳೆಯನ್ನು ರೂಪಾಲಿ ಮೊಂಡಲ್ ಎಂದು ಗುರುತಿಸಲಾಗಿದೆ. ಈಕೆ ಇನ್ನೊಬ್ಬ ಮಹಿಳೆಗೆ 4 ಲಕ್ಷಕ್ಕೆ ತನ್ನ ಮಗಳನ್ನು ಮಾರಾಟ ಮಾಡಿದ್ದಾಳೆ. ರೂಪಾಲಿ ಮಗು ಮಾರಾಟ ಮಾಡಿದ ವಿಚಾರದ ಸಂಬಂಧ ಆನಂದಪುರ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ಈ ಸಂಬಂಧ ತನಿಖೆ ನಡೆಸಿದಾಗ ಸತ್ಯ ವಿಚಾರ ಬಯಲಿಗೆ ಬಂದಿದೆ.

ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ಪೊಲೀಸರು ರೂಪಾಲಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಕೆ ಸ್ಪಷ್ಟ ಕಾರಣ ಕೊಡುವಲ್ಲಿ ಎಡವಿದ್ದಾಳೆ. ಈ ಹಿನ್ನೆಲೆಯಲ್ಲಿ ಆಕೆಯ ಮೇಲೆ ಅನುಮಾನಗೊಂಡ ಪೊಲೀಸರು ರೂಪಾಲಿಯನ್ನು ಬಂಧಿಸಿದ್ದಾರೆ. ಬಳಿಕ ತನಿಕೆಗೆ ಒಳಪಡಿಸಿದಾಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಈಕೆಯ ಜೊತೆ ರೂಪ ದಾಸ್ ಹಾಗೂ ಸ್ವಪ್ನಾ ಸರ್ದಾರ್ ಎಂಬ ಇನ್ನಿಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಟೊಮೆಟೋ ಕಳ್ಳತನದ ವೇಳೆ ರೈತನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳ

ರೂಪಾಲಿ ಅವರ ಪಕ್ಕದ ಮನೆಯವರಾದ ಪ್ರತಿಮಾ ಭುವಿನ್ಯಾ ಅವರ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಾಗಿದೆ. ಆರೋಪಿಗಳ ಮೇಲೆ 317 (ಮಗುವನ್ನು ತ್ಯಜಿಸುವುದು), 370 (ಖರೀದಿ- ಮಾರಾಟ), 372 (ಅಪ್ರಾಪ್ತರ ಮಾರಾಟ) ಮತ್ತು 120 ಬಿ (ಕ್ರಿಮಿನಲ್ ಪಿತೂರಿ) ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇಬ್ಬರೂ ಆರೋಪಿಗಳ ತೀವ್ರ ವಿಚಾರಣೆಯ ನಂತರ, ಅವರು ಮಿಡ್ನಾಪುರದ ಕಲ್ಯಾಣಿ ಗುಹಾ ಹೆಸರನ್ನು ಹೇಳಿದ್ದಾರೆ. ಹೀಗಾಗಿ ಪರ್ನಶ್ರ್ರೀ ಪೊಲೀಸ್ ಠಾಣೆಯ ಅಧಿಕಾರಿಗಳು ಗುಹಾನನ್ನು ಕೂಡ ಬಂಧಿಸಿದ್ದಾರೆ. ಇತ್ತ ಶಿಶುವನ್ನು ರಕ್ಷಣೆ ಮಾಡಿದ್ದು, ಶಿಶುಪಾಲನಾ ಘಟಕಕ್ಕೆ ಹಸ್ತಾಂತರಿಸಲಾಗಿದೆ. ಕಲ್ಯಾಣಿ ಗುಹಾಗೆ ಮದುವೆಯಾಗಿ 15 ವರ್ಷಗಳಾಗಿದ್ದು, ಮಕ್ಕಳಿಲ್ಲ. ಹೀಗಾಗಿ ಕಲ್ಯಾಣಿ ಮಗುವನ್ನು 4 ಲಕ್ಷ ಕೊಟ್ಟು ತೆಗೆದುಕೊಂಡಿದ್ದಾಳೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್