ಕಲ್ಲು ಹಿಡಿದು ಗೂಂಡಾಗಳ ಬೆನ್ನಟ್ಟಿ ಮಗನನ್ನು ಪ್ರಾಣಾಪಾಯದಿಂದ ರಕ್ಷಿಸಿದ ತಾಯಿ

Public TV
1 Min Read

ಮುಂಬೈ: ಕತ್ತಿ ದಾಳಿಯಿಂದ ತನ್ನ ಮಗನನ್ನು ರಕ್ಷಿಸಿಲು ತಾಯಿ ಕಲ್ಲು ಹಿಡಿದು ಗೂಂಡಾಗಳ ಬೆನ್ನಟ್ಟಿ ಪ್ರಾಣಾಪಾಯದಿಂದ ರಕ್ಷಿಸಿದ ಘಟನೆಯೊಂದು ಮಹಾರಾಷ್ಟ್ರದ (Maharashtra) ಕೊಲ್ಲಾಪುರದಲ್ಲಿ (Kolhapur) ನಡೆದಿದೆ.

ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತಿದೆ. ತನ್ನ ಜೀವವನ್ನು ಲೆಕ್ಕಿಸದೇ ಮಗನನ್ನು ಪ್ರಾಣಾಪಾಯದಿಂದ ಪಾರು ಮಾಡಿದ ತಾಯಿಯ ಧೈರ್ಯವು ಈ ವಿಡಿಯೋದಲ್ಲಿ ಸೆರೆಯಾಗಿದೆ.ಇದನ್ನೂ ಓದಿ: ಚುರುಕು ಪಡೆದ ಮುಡಾ ಹಗರಣದ ತನಿಖೆ – ಮೂರು ಪಕ್ಷದ ನಾಯಕರಿಗೆ ಈಗ ಭಯ

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಜೈಸಿಂಗ್‌ಪುರದ ನಂದಿನಿ ನಾಕಾ ರೋಡ್ (Nandini Naka Road) ಬಳಿ ಯುವಕನೊಬ್ಬ ಕತ್ತಿಯಿಂದ (Sword) ಹಲ್ಲೆ ನಡೆಸಿದ್ದಾನೆ. ರಸ್ತೆಯ ಸಿಸಿಟಿವಿಯಲ್ಲಿ (CCTV) ಹಲ್ಲೆ ನಡೆಸಿರುವ ಹಾಗೂ ತಾಯಿ ಬಂದು ಮಗನನ್ನು ರಕ್ಷಿಸಿರುವ ದೃಶ್ಯಾವಳಿಗಳು ಸೆರೆಯಾಗಿವೆ.

ಕತ್ತಿಯಿಂದ ಮಗನನ್ನು ದಾಳಿ ಮಾಡಲು ಬಂದ ಗೂಂಡಾಗಳನ್ನು ಮಹಿಳೆ ಕಲ್ಲನ್ನು ಹಿಡಿದು ಬೆನ್ನಟ್ಟಿಕೊಂಡು ಹೋಗಿದ್ದಾಳೆ. ದಾಳಿ ಮಾಡಿದವರನ್ನು ಕಲ್ಲಿನಿಂದ ಅಟ್ಟಿಸಿಕೊಂಡು ಹೋಗಿ ಸೇಡು ತೀರಿಸಿಕೊಂಡಿದ್ದಾಳೆ. ಈ ಘಟನೆ ಸೋಮವಾರ (ಆ.19ರ) ಮಧ್ಯಾಹ್ನ 1.20ರ ಸುಮಾರಿಗೆ ಜಯಸಿಂಗ್‌ಪುರದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ.ಇದನ್ನೂ ಓದಿ: ಬೆಂಗಳೂರಿನಲ್ಲಿ ವ್ಹೀಲಿಂಗ್ ಪುಂಡರ ವಿರುದ್ಧ ಪೊಲೀಸರ ಸೈಲೆಂಟ್ ಸಮರ

Share This Article