ಮಗಳನ್ನು ಮಾಡೆಲ್ ಮಾಡುವ ಆಸೆಗೆ ಬಿದ್ದು 3.74 ಲಕ್ಷ ರೂ. ಕಳೆದುಕೊಂಡ ತಾಯಿ

Public TV
1 Min Read

ಬೆಂಗಳೂರು: ಮಗಳನ್ನ ಮಾಡೆಲ್ (Model) ಮಾಡಲು ಹೋಗಿ ತಾಯಿ 3.74 ಲಕ್ಷ ರೂ. ಹಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ಬೆಳಕಿಗೆ ಬಂದಿದೆ.

ಚಿಕ್ಕ ವಯಸ್ಸಿನಲ್ಲೇ ಮಗಳನ್ನ ಮಾಡೆಲಿಂಗ್ ಮಾಡುವ ಆಸೆಗೆ ಬಿದ್ದು ಸುಮಾ ಎಂಬ ಮಹಿಳೆ 3.74 ಲಕ್ಷ ಹಣ ಕಳೆದುಕೊಂಡಿದ್ದಾರೆ. ಸುಮಾ ಸಾಮಾಜಿಕ ಜಾಲತಾಣದಲ್ಲಿ ಚೈಲ್ಡ್ ಮಾಡೆಲ್ ಆಡ್ ನೋಡಿದ್ದರು. ಲಿಟ್ಲ್ ನೆಸ್ಟ್ ಎಂಬ ಚೈಲ್ಡ್ ಮಾಡೆಲಿಂಗ್ ಲಿಂಕ್ ಫೇಸ್ ಬುಕ್‌ಪೇಜ್‌ನಲ್ಲಿ ಬಂದಿತ್ತು. ಕ್ಲಿಕ್ ಮಾಡಿದ್ದಾಗ ಲಿಂಕ್ ಮೂಲಕವೇ ಮಗುವಿನ ದಾಖಲಾತಿಗಳನ್ನ ಪಡೆದುಕೊಂಡಿದ್ದ ವಂಚಕರು ಬಳಿಕ ಟೆಲಿಗ್ರಾಂ ಗ್ರೂಪ್‌ಗೆ ಸೇರಿಕೊಳ್ಳಿ ಎಂದು ಮತ್ತೊಂದು ಲಿಂಕ್ ಸೆಂಡ್ ಮಾಡಿದ್ದರು. ಇದನ್ನೂ ಓದಿ: ರಾಮನಗರ ಆಯ್ತು, ಈಗ ಬೆಂಗಳೂರು ದಕ್ಷಿಣ ಜಿಲ್ಲೆಗೆ ಕುಣಿಗಲ್ ವಿಲೀನ?

ಕೆಲವೊಂದು ಟಾಸ್ಕ್ ನೀಡಿ 11,000 ರೂ. ಕಳಿಸಿ ಎಂದಿದ್ದ ಅಡ್ಮಿನ್ ನಂತರ ಹೂಡಿಕೆ ಮಾಡಿದ ಬಳಿಕ 19 ಸಾವಿರ ವಾಪಾಸ್ ನೀಡಿದ್ದ. ಬಳಿಕ ಸೈಬರ್ ಚೋರರು (Cyber Crime) ಹಂತ ಹಂತವಾಗಿ ಮೂರು ಮುಕ್ಕಾಲು ಲಕ್ಷ ಹಣ ದೋಚಿದ್ದಾರೆ. ಸದ್ಯ ಮೋಸ ಹೋಗಿರುವುದು ತಿಳಿದ ಮಹಿಳೆ ವಿದ್ಯಾರಣ್ಯಪುರ (Vidyaranyapura) ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಇದನ್ನೂ ಓದಿ: Bidar | ಹುಮನಾಬಾದ್ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಸಾವು

Share This Article