ಮೊಬೈಲಿನಲ್ಲಿ ಮಾತನಾಡುತ್ತಾ ಮಗುವನ್ನು ಆಟೋದಲ್ಲೇ ಮರೆತ ತಾಯಿ: ವಿಡಿಯೋ

Public TV
1 Min Read

ಮೊಬೈಲಿನಲ್ಲಿ ಮಾತನಾಡುತ್ತಾ ತಾಯೊಯೊಬ್ಬಳು ತನ್ನ ಮಗುವನ್ನು ಆಟೋದಲ್ಲಿ ಮರೆತು ಹೋದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಶುಕ್ರವಾರದಿಂದ ಟ್ವಿಟ್ಟರಿನಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. 25 ಸೆಕೆಂಡ್ ಇರುವ ಈ ವಿಡಿಯೋ ಶುಕ್ರವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಟ್ವೀಟ್ ಮಾಡಲಾಗಿತ್ತು. ಈ ವಿಡಿಯೋ ಹಾಕಿದ ಒಂದು ಗಂಟೆಯಲ್ಲೇ ಒಂದು ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ವಿಡಿಯೋದಲ್ಲಿ ಮಹಿಳೆ ಮೊಬೈಲಿನಲ್ಲಿ ಮಾತನಾಡುತ್ತಾ ಮುಂದೆ ಹೋಗುತ್ತಿರುತ್ತಾಳೆ. ಹಿಂದೆ ಆಟೋ ಚಾಲಕ ಮಗುವನ್ನು ಎತ್ತಿಕೊಂಡು ಮಹಿಳೆಯನ್ನು ಕರೆಯುತ್ತಿರುತ್ತಾರೆ. ಚಾಲಕ ಕರೆಯುತ್ತಿರುವುದನ್ನು ಕೇಳಿದ ಮಹಿಳೆ ತಕ್ಷಣ ನಿಂತು ಹಿಂದೆ ತಿರುಗಿದ್ದಾಳೆ. ಈ ವೇಳೆ ಚಾಲಕ ಇದು ನಿಮ್ಮ ಮಗು ತಾನೇ ಎಂದು ಮಹಿಳೆಯನ್ನು ಪ್ರಶ್ನಿಸಿದ್ದಾರೆ. ಆಗ ಮಹಿಳೆ ಹೌದು ಎಂದು ಉತ್ತರಿಸಿದ್ದಾಳೆ.

ಅಮಿತ್ ಸ್ಮೈಲಿಂಗ್ ಎಂಬವರು ಈ ವಿಡಿಯೋವನ್ನು ಮೊದಲು ಟ್ವೀಟ್ ಮಾಡಿ ಅದಕ್ಕೆ, “ಸಾಮಾನ್ಯವಾಗಿ ಜನರು ಆಟೋದಲ್ಲಿ ತಮ್ಮ ಜೊತೆಯಲ್ಲಿ ಇರುವ ಕೊಡೆ ಅಥವಾ ಬ್ಯಾಗ್ ಮರೆತು ಹೋಗುತ್ತಾರೆ. ಆದರೆ ಈ ಮೆಡೆಮ್ ತಮ್ಮ ಮಗುವನ್ನೇ ಮರೆತು ಹೋಗಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

ಈ ಘಟನೆ ಎಲ್ಲಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ವಿಡಿಯೋ ಚಿತ್ರದ ಅಥವಾ ಜಾಹೀರಾತಿನ ಚಿತ್ರೀಕರಣನಾ ಎಂಬುದರ ಬಗ್ಗೆಯೂ ಸ್ಪಷ್ಟವಾಗಿಲ್ಲ. ಆದರೆ ಟ್ವಿಟ್ಟರಿನಲ್ಲಿ ಈ ವಿಡಿಯೋ ನೋಡಿ ಕೆಲವರು, “ಇದು ಜಾಹೀರಾತಿನ ಶೂಟಿಂಗ್” ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, “ಇದು ಫೇಕ್ ವಿಡಿಯೋ” ಎಂದು ಕಮೆಂಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *