ಗಂಡನೊಂದಿಗೆ ಗಲಾಟೆ – ಕೋಪದಲ್ಲಿ ಮಗನನ್ನು ಮೊಸಳೆಗಳಿದ್ದ ನಾಲೆಗೆ ಎಸೆದ ತಾಯಿ

Public TV
1 Min Read

ಕಾರವಾರ: ಗಂಡನ (Wife) ಮೇಲಿನ ಸಿಟ್ಟಿಗೆ ಆರು ವರ್ಷದ ಮಗುವನ್ನು ಮೊಸಳೆಗಳಿದ್ದ (Crocodile) ನಾಲೆಗೆ ತಾಯಿಯೇ ಎಸೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ (Dandeli) ತಾಲೂಕಿನ ಹಾಲಮಡ್ಡಿಯಲ್ಲಿ ನಡೆದಿದೆ.

ಸಾವಿತ್ರಿ ನಾಲೆಗೆ ಎಸೆದ ಪಾಪಿ ತಾಯಿಯಾಗಿದ್ದು, ವಿನೋದ್ (6) ಮೊಸಳೆ ಬಾಯಿಗೆ ಸಿಲುಕಿ ಮೃತಪಟ್ಟಿದ್ದಾನೆ. ಇದನ್ನೂ ಓದಿ: ರೇವಣ್ಣ ಅರೆಸ್ಟ್‌ ಬೆನ್ನಲ್ಲೇ ಭವಾನಿಗೂ ಸಂಕಷ್ಟ?

ಗಂಡ ರವಿಕುಮಾರ್ ಮೇಲಿನ ಕ್ಷುಲ್ಲಕ ಕಾರಣಕ್ಕೆ ಕೋಪಿಸಿಕೊಂಡು ಜಗಳ ತೆಗೆದಿದ್ದ ಸಾವಿತ್ರಿ ಕೋಪದಲ್ಲಿ ಮಗುವನ್ನು ಮನೆಯ ಬಳಿ ಇದ್ದ ಮೊಸಳೆಗಳಿದ್ದ ನಾಲೆಗೆ ಎಸೆದಿದ್ದಾಳೆ. ನಂತರ ಪಶ್ಚಾತ್ತಾಪದಿಂದ ತನ್ನ ತಪ್ಪಿನ ಅರಿವಾಗಿ ತಾನು ಮಾಡಿದ ಕೃತ್ಯವನ್ನು ತಿಳಿಸಿದ್ದಾಳೆ. ಇದನ್ನೂ ಓದಿ: ಕೋವಿಡ್ ಲಸಿಕೆ ಪಡೆದ ಯುವಜನರು ಹೃದಯಾಘಾತದಿಂದ ಸಾಯುತ್ತಿದ್ದಾರೆ: ಪ್ರಿಯಾಂಕಾ ಆತಂಕ

ನಂತರ ಬಾಲಕನಿಗಾಗಿ ಶೋಧ ನಡೆಸಿದ್ದು ಈ ವೇಳೆ ಮೊಸಳೆ ಬಾಯಲ್ಲಿ ಸಾವಿಗೀಡಾದ ಮಗುವಿನ ಶವ ಪತ್ತೆಯಾಗಿದೆ. ಈ ಸಂಬಂಧ ದಾಂಡೇಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share This Article