ಬಸ್ ಟೈಯರ್ ಸ್ಫೋಟಗೊಂಡು ಬೈಕ್‌ಗೆ ಡಿಕ್ಕಿ – ಗಣೇಶ ಹಬ್ಬದಂದೇ ಅತ್ತೆ, ಅಳಿಯ ಸಾವು

Public TV
1 Min Read

ರಾಮನಗರ: ಚಲಿಸುತ್ತಿದ್ದ ಖಾಸಗಿ ಬಸ್‌ನ ಟೈಯರ್ ಸ್ಫೋಟಗೊಂಡು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಾಗಡಿ ತಾಲೂಕಿನ ಜುಟ್ಟನಹಳ್ಳಿ ಗೇಟ್ ಬಳಿ ನಡೆದಿದೆ.

ಮಾಗಡಿ ತಾಲೂಕಿನ ಅರಳಕುಪ್ಪೆ ಗ್ರಾಮದ ಗಂಗಮ್ಮ(58), ಶಿವಣ್ಣ(45) ಮೃತ ಬೈಕ್ ಸವಾರರು. ಗಣೇಶನ ಹಬ್ಬಕ್ಕೆ ಅತ್ತೆ ಗಂಗಮ್ಮರನ್ನ ಅಳಿಯ ಶಿವಣ್ಣ ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಪಕ್ಕದಲ್ಲಿ ಬರುತ್ತಿದ್ದ ಖಾಸಗಿ ಬಸ್‌ನ ಟೈಯರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಬಾರ್‌ ಬಳಿ ಯುವಕನಿಂದ ಹಲ್ಲೆ – ಒಂದೇ ಏಟಿಗೆ ಕುಸಿದು ಬಿದ್ದ ವ್ಯಕ್ತಿ

ಸ್ಟೋಟದ ರಭಸಕ್ಕೆ ಬಸ್‌ನಿಂದ ಟೈಯರ್ ಬೇರ್ಪಟ್ಟು ಬೈಕ್‌ಗೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮಾಗಡಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನಾ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article