ಚಿಕ್ಕಮಗಳೂರು: ಮುದ್ದೆಯಲ್ಲಿ ನಿದ್ರೆ ಮಾತ್ರೆ ಹಾಕಿ ಅತ್ತೆಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೂತಿದ್ದ ಶವವನ್ನು ಪೊಲೀಸರು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಅಜ್ಜಂಪುರ ತಹಶೀಲ್ದಾರ್ ವಿನಾಯಕ್ ನೇತೃತ್ವದಲ್ಲಿ, ಹೂತಿದ್ದ ಶವವನ್ನು ಹೊರಕ್ಕೆ ತೆಗೆದು ಪರೀಕ್ಷೆ ನಡೆಸಲಾಗಿದೆ. ಆ.10ರಂದು ಅಜ್ಜಂಪುರ ತಾಲೂಕಿನ ತಡಗ ಗ್ರಾಮದಲ್ಲಿ ಈ ಕೊಲೆ ನಡೆದಿತ್ತು. ಸಹಜ ಸಾವು ಎಂದು ಅಂತ್ಯಕ್ರಿಯೆ ಕುಟುಂಬಸ್ಥರು ಶವಸಂಸ್ಕಾರ ಮಾಡಿದ್ದರು. ಇದನ್ನೂ ಓದಿ: ಮುದ್ದೆಯಲ್ಲಿ ನಿದ್ರೆ ಮಾತ್ರೆ ಹಾಕಿ ಅತ್ತೆಯ ಕೊಲೆ – ಕಿಲಾಡಿ ಸೊಸೆ, ಪ್ರಿಯಕರ ಅರೆಸ್ಟ್
ಮನೆಯ ಚಿನ್ನ ಹಾಗೂ ಹಣ ನಾಪತ್ತೆಯಾಗಿದ್ದರಿಂದ ಕುಟುಂಬಸ್ಥರು ಅಜ್ಜಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ, ಈ ಸಂಬಂದ ಎಫ್‌ಐಆರ್ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು, ಸೊಸೆ, ಅಶ್ವಿನಿ ಹಾಗೂ ಆತನ ಪ್ರಿಯಕರ ಅಂಜನೇಯ ಸೇರಿ ಕೊಲೆ ಮಾಡಿದ್ದು ಬಯಲಾಗಿತ್ತು. ಬಳಿಕ ಆರೋಪಿಗಳನ್ನು ಬಂಧಿಸಲಾಗಿತ್ತು.
ಬಂಧಿತರಿಂದ 20 ಲಕ್ಷ ರೂ. ಚಿನ್ನಾಭರಣ ಹಾಗೂ 16 ಲಕ್ಷ ರೂ. ಮೌಲ್ಯದ ಟಿಟಿ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಮಂಡ್ಯ | ಅಪ್ರಾಪ್ತೆ ಪ್ರೀತಿಸಿದ್ದ ಯುವಕ ಅನುಮಾನಸ್ಪದ ಸಾವು