ಅಳಿಯ-ಮಗಳ ಜಗಳದಲ್ಲಿ ಹತ್ಯೆಯಾದ ಅತ್ತೆ

Public TV
1 Min Read

ತುಮಕೂರು: ಅಳಿಯ-ಮಗಳ ಜಗಳದಲ್ಲಿ ಅತ್ತೆ ಹತ್ಯೆಯಾದ ಘಟನೆ ಮಧುಗಿರಿಯ (Madhugiri) ಕೊಡಿಗೇನಹಳ್ಳಿಯಲ್ಲಿ ನಡೆದಿದೆ.

ಹತ್ಯೆಯಾದ ಮಹಿಳೆಯನ್ನು ಅಶ್ವಿತ್ ಉನ್ನಿಸಾ (58) ಎಂದು ಗುರುತಿಸಲಾಗಿದೆ. ಹತ್ಯೆಯಾದ ಮಹಿಳೆಯ ಮಗಳು ಹಾಗೂ ಅಳಿಯನ ನಡುವೆ ಜಗಳ ನಡೆಯುತ್ತಿತ್ತು. ಈ ವೇಳೆ ಜಗಳ ಬಿಡಿಸಲು ಯತ್ನಿಸಿದ ಮಹಿಳೆಯ ತಲೆಗೆ ಅಳಿಯ ದೊಣ್ಣೆಯಿಂದ ಹೊಡೆದ ಪರಿಣಾಮ ಆಕೆ ಸಾವಿಗೀಡಾಗಿದ್ದಾಳೆ. ಇದನ್ನೂ ಓದಿ: ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮುಳುಗಿ ಯುವಕ ಸಾವು

ಹತ್ಯೆಯಾದ ಅಶ್ವಿತ್ ಉನ್ನಿಸಾಳ ಮಗಳನ್ನು ಕೊಡಿಗೇನಹಳ್ಳಿಯ ಸೈಯದ್ ಸುಹೇಲ್‍ನೊಂದಿಗೆ ಮದುವೆ ಮಾಡಲಾಗಿತ್ತು. ಮದುವೆಯ ಬಳಿಕ ಅವರಿಬ್ಬರ ನಡುವೆ ನಿರಂತರ ಜಗಳ ನಡೆಯುತ್ತಿತ್ತು. ಎಂದಿನಂತೆ ಜಗಳ ವಿಕೋಪಕ್ಕೆ ತಿರುಗಿದ ಹಿನ್ನೆಲೆ ತವರು ಮನೆಯಲ್ಲಿದ್ದ ತಾಯಿಯನ್ನು ಫೋನ್ ಮಾಡಿ ಮಗಳು ಕರೆಸಿಕೊಂಡಿದ್ದಳು. ಈ ವೇಳೆ ಜಗಳ ಬಿಡಿಸಲು ಮುಂದಾದ ಮಹಿಳೆಯ ತಲೆಗೆ ಅಳಿಯ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಅಶ್ವಿತ್ ಉನ್ನಿಸಾಳನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ.

ಈ ಸಂಬಂಧ ಕೊಡಿಗೇನಹಳ್ಳಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ʻಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿʼ – ಪ್ರಚೋದನಕಾರಿ ಹೇಳಿಕೆ ನೀಡಿದ್ದ ಈಶ್ವರಪ್ಪ ವಿರುದ್ಧ ಕೇಸ್‌

Share This Article