ಏಳು.. ಎದ್ದೇಳು ಕಂದ, ಹೋಗೋಣ ನಡೆ- ಅಪಘಾತದಲ್ಲಿ ಸಾವನ್ನಪ್ಪಿದ ಮರಿಗಾಗಿ ತಾಯಿ ನಾಯಿಯ ಆಕ್ರಂದನ

Public TV
1 Min Read

ಬೆಂಗಳೂರು: ರಸ್ತೆಯಲ್ಲಿ ಅಪಘಾತಕ್ಕೀಡಾಗಿ ಸತ್ತು ಬಿದ್ದಿದ್ದ ಮರಿ ನಾಯಿಯ ಬಳಿ, ತಾಯಿ ನಾಯಿಯೊಂದು ತನ್ನ ರೋಧನೆ ವ್ಯಕ್ತಪಡಿಸುತ್ತಿದ್ದ ಮನಕಲುಕುವ ಘಟನೆಯೊಂದು ನಡೆದಿದೆ.

ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಜ್ಯೋತಿ ನಗರದಲ್ಲಿ ಈ ಘಟನೆ ನಡೆದಿದ್ದು, ಅಪರಿಚಿತ ವಾಹನವೊಂದು ನಾಯಿ ಮರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದೆ. ಈ ಘಟನೆಯ ನಂತರ ತಾಯಿ ನಾಯಿ, ಮೃತ ಪಟ್ಟಿದ್ದ ತನ್ನ ಮರಿಯನ್ನು ಕಂಡು ರೋಧನೆ ವ್ಯಕ್ತಪಡಿಸಿದೆ.

ಮುಂಜಾನೆಯ ನಸುಕಿನಲ್ಲಿ ಈ ಘಟನೆ ನಡೆದಿದ್ದು, ಅಪಘಾತವಾದ ಒಂದು ಗಂಟೆಯಾದರೂ ತಾಯಿ ಮರಿ ನಾಯಿಯ ಬಳಿ ಅತ್ತು ಕರೆದು ತನ್ನ ಆಕ್ರಂದನ ವ್ಯಕ್ತಪಡಿಸಿದೆ. ಮನಿಷ್ಯನಿಗಿಲ್ಲದ ಮಾನವೀಯತೆ ನಾಯಿಯಲ್ಲಿ ಕಂಡು, ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದು, ಈ ಮನಕಲುಕುವ ಘಟನೆಗೆ ಸ್ಥಳೀಯರು ಮರುಕ ವ್ಯಕ್ತಪಡಿಸಿದ್ದಾರೆ.

https://www.youtube.com/watch?v=S3LFHi-iT-4

Share This Article
Leave a Comment

Leave a Reply

Your email address will not be published. Required fields are marked *