ಕೊನೆಗೂ ನನಸಾಯ್ತು ಅಮ್ಮ, ಮಗಳ ಕನಸು – ಒಂದೇ ವಿಮಾನಕ್ಕೆ ಇಬ್ಬರೂ ಪೈಲಟ್

Public TV
1 Min Read

ವಾಷಿಂಗ್ಟನ್: ಕನಸು ನನಸಾದ್ರೆ ಸ್ವರ್ಗವೇ ಸಿಕ್ಕಂತೆ ಆಗುತ್ತೆ. ಅದರಂತೆ ತಾಯಿ-ಮಗಳ ಜೋಡಿಯೊಂದು ತಮ್ಮ ಕನಸನ್ನು ನನಸು ಮಾಡಿಕೊಂಡಿರುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

ತಾಯಿ ಮತ್ತು ಮಗಳು ಜೋಡಿಯು ಸೌತ್‍ವೆಸ್ಟ್ ಏರ್‌ಲೈನ್‍ನ ಪೈಲಟ್‍ನಲ್ಲಿ ಸೇರಿಕೊಂಡಿದ್ದು, ಈ ಹೃದಯಸ್ಪರ್ಶಿ ಕ್ಷಣದ  ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕ್ಯಾಪ್ಟನ್ ಹಾಲಿ ಪೆಟಿಟ್ ಮತ್ತು ಫಸ್ಟ್ ಆಫೀಸರ್ ಕೀಲಿ ಪೆಟಿಟ್ ಸೌತ್‍ವೆಸ್ಟ್ ಏರ್‌ಲೈನ್ಸ್‍ನ ಮೊದಲ ಜೋಡಿ ತಾಯಿ-ಮಗಳು ಪೈಲಟ್ ಆಗಿದ್ದಾರೆ. ಇದನ್ನೂ ಓದಿ: ಸಚಿವರಾಗಿ ಒಂದು ವರ್ಷ – ಆಂಜನೇಯನ ದರ್ಶನ ಪಡೆದ ಆರಗ

 

View this post on Instagram

 

A post shared by Southwest Airlines (@southwestair)

ಏರ್‌ಲೈನ್ಸ್ ಸೋಶಿಯಲ್ ಮೀಡಿಯಾ ಈ ವಿಶೇಷ ವೀಡಿಯೋ ಶೇರ್ ಮಾಡಿಕೊಂಡಿದೆ. ವೀಡಿಯೋ ನೋಡಿದ ನೆಟ್ಟಿಗರು ಫುಲ್ ಖುಷ್ ಆಗಿದ್ದು, ಅಭಿನಂದಿಸಿದ್ದಾರೆ. ಕ್ಯಾಪ್ಟನ್ ಹಾಲಿ ತನ್ನ ಮಗಳನ್ನು ವಿಮಾನದಲ್ಲಿ ಪ್ರಯಾಣಿಕರಿಗೆ ಪರಿಚಯಿಸಿದ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವೀಡಿಯೋದಲ್ಲಿ ಏನಿದೆ?
ತಾಯಿ-ಮಗಳ ಜೋಡಿ ಫ್ಲೈಟ್‍ನೊಳಗೆ ಫೋಟೋ ಫ್ರೇಮ್ ಹಿಡಿದುಕೊಂಡು ನಿಂತಿರುತ್ತಾರೆ. ಈ ಫೋಟೋ ಮೂಲಕ ಇವರ ಇಡೀ ಕುಟುಂಬ ಫ್ಲೈಟ್‍ನ ಪೈಲಟ್ ಆಗಿರುವುದು ತಿಳಿದುಬರುತ್ತೆ. ಇಬ್ಬರು ಫ್ಲೈಟ್ ಓಡಿಸುವುದನ್ನು ನೋಡಬಹುದು.

ಈ ಕುರಿತು ಬರೆದುಕೊಂಡ ಹಾಲಿ(ತಾಯಿ), ಇಂದು ನನಗೆ ವಿಶೇಷ ದಿನ. ನೈಋತ್ಯ ಪೈಲಟ್‍ಗಳ ತಂಡದ ಹೊಚ್ಚ ಹೊಸ ಸದಸ್ಯೆ ಮತ್ತು ನನ್ನ ಮಗಳು ಕೀಲಿಯನ್ನು ನಾನು ನಿಮಗೆ ಪರಿಚಯಿಸಲು ಬಯಸುತ್ತೇನೆ ಎಂದು ಬರೆದು ವೀಡಿಯೋ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಸಿಮ್ ಕಾರ್ಡ್ ಇಲ್ಲದ ಮೊಬೈಲ್, ಖಾಲಿ ಹಾಳೆ ಕೈಗಿತ್ತು ಹೆತ್ತಮ್ಮನನ್ನೇ ಬಿಟ್ಟು ಹೋದ

ಇಂದು ಕನಸು ನನಸಾಗಿದೆ. ಮೊದಲು, ನಾನು ಈ ವೃತ್ತಿಯನ್ನು ಕಂಡುಕೊಂಡು ಅದನ್ನು ಪ್ರೀತಿಸುತ್ತಿದ್ದೆ. ಆದರೆ ಇಗ ನನ್ನ ಮಗಳು ಈ ವೃತ್ತಿಯನ್ನು ಪ್ರೀತಿಸಿ ಇದೇ ವೃತ್ತಿಗೆ ಬರುತ್ತಿದ್ದಾಳೆ. ಇದು ಅತಿವಾಸ್ತವಿಕವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *