ಅಪಘಾತದಲ್ಲಿ ಮೃತಪಟ್ಟ ಮಗನ ನೆನಪಿಗಾಗಿ ಗೋಶಾಲೆ ನಿರ್ಮಿಸಿದ ತಾಯಿ

Public TV
1 Min Read

ಹಾವೇರಿ: ಅಪಘಾತದಲ್ಲಿ ಮೃತಪಟ್ಟ ಮಗನ ಹೆಸರಿನಲ್ಲಿ ತಾಯಿಯೊಬ್ಬಳು (Mother) ಗೋಶಾಲೆ (Goshale) ನಿರ್ಮಿಸಿ ಅವನ ಜನ್ಮದಿನದಂದೇ ಲೋಕಾರ್ಪಣೆ ಮಾಡಿ ಸುದ್ದಿಯಾಗಿದ್ದಾರೆ.

ಸಂಗೀತಾ ಎಂಬವರ ಒಬ್ಬನೇ ಪುತ್ರ ಸಂದೇಶ ಎಂಬಾತ ಹುಬ್ಬಳ್ಳಿಯಲ್ಲಿ (Hubballi) ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ. ನಾಲ್ಕು ತಿಂಗಳ ಹಿಂದೆ ಬೆಳಗಾವಿಗೆ ಹೋಗಿದ್ದಾಗ ಆತ ಅಪಘಾತದಲ್ಲಿ ಮೃತಪಟ್ಟಿದ್ದ. ಇದರಿಂದ ಕಂಗೆಟ್ಟಿದ್ದ ತಾಯಿ ನಿರಂತರ ದುಃಖದಲ್ಲಿ ಕಾಲ ಕಳೆಯುತ್ತಿದ್ದಳು. ಇದೀಗ ಗಾಂಧಿಪುರ ಗ್ರಾಮದಲ್ಲಿ ಒಂದು ಎಕರೆ ಜಾಗ ಖರೀದಿ ಮಾಡಿ ಮಗನ ಹೆಸರಿನಲ್ಲಿ ಗೋಶಾಲೆ ನಿರ್ಮಿಸಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ದ್ವೇಷ, ಅಸೂಯೆಯಿಂದ ಮಾತನಾಡುತ್ತಿದ್ದಾರೆ: ಸಿದ್ದರಾಮಯ್ಯ

ಗೋಶಾಲೆಗೆ ಸುಮಾರು 50 ಲಕ್ಷ ರೂ. ಖರ್ಚಾಗಿದೆ. ರೈತರ ಜಾನುವಾರುಗಳು, ಬೀಡಾಡಿ ಜಾನುವಾರುಗಳು, ಬಂಜೆತನ ಹೊಂದಿರುವ ಹಸುಗಳನ್ನು ಸಾಕಲು ಮೇವಿನ ಕೊರತೆ ಎದುರಿಸುತ್ತಿರುವವರಿಗಾಗಿ ಈ ಗೋಶಾಲೆ ನಿರ್ಮಿಸಿದ್ದಾಗಿ ಸಂಗೀತಾ ಹೇಳಿಕೊಂಡಿದ್ದಾರೆ. ಹುಕ್ಕೇರಿ ಮಠದ ಸದಾಶಿವ ಶ್ರೀಗಳು ಈ ಗೋಶಾಲೆಯನ್ನು ಉದ್ಘಾಟನೆ ಮಾಡಿದ್ದಾರೆ. ಇದನ್ನೂ ಓದಿ: ಪೊಲೀಸರ ಮೇಲಿನ ಐನೂರು ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸಿದ್ದೇನೆ: ಪರಮೇಶ್ವರ್‌

Share This Article