ಒಟ್ಟಿಗೆ ಎಸ್‍ಎಸ್‍ಎಲ್‍ಸಿ ಪಾಸ್ ಮಾಡಿದ ತಾಯಿ, ಮಗ!

Public TV
0 Min Read

ಹಾಸನ: ಇಲ್ಲಿನ ಸಕಲೇಶಪುರದಲ್ಲಿ ಎಸ್‍ಎಸ್‍ಎಲ್‍ಸಿ (SSLC) ಪರೀಕ್ಷೆ ಬರೆದಿದ್ದ ತಾಯಿ ಹಾಗೂ ಮಗ ಇಬ್ಬರೂ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಸಕಲೇಶಪುರ (Sakaleshpur) ತಾಲ್ಲೂಕಿನ ಚಿನ್ನಳ್ಳಿ ಗ್ರಾಮದ ಜ್ಯೋತಿ.ಪಿ.ಆರ್ (38) ಎರಡನೇ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿದ್ದರು. ಅವರ ಮಗ ನಿತಿನ್.ಸಿ.ಬಿ ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿದ್ದ. ಇದೀಗ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ತಾಯಿ ಹಾಗೂ ಮಗ ಇಬ್ಬರೂ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಜ್ಯೋತಿಯವರು 250 ಅಂಕ ಪಡೆದು ತೇರ್ಗಡೆಯಾಗಿದ್ದು, ಅವರ ಪುತ್ರ 582 ಅಂಕ ಪಡೆದಿದ್ದಾನೆ.

Share This Article