ಮಡಿಕೇರಿ: ಪ್ರವಾಹಕ್ಕೆ ಸಿಲುಕಿ ತಾಯಿ ಮತ್ತು ಮಗ ನೀರಿನಲ್ಲಿ ಕೊಚ್ಚಿ ಹೋದ ಹೃದಯ ವಿದ್ರಾವಕ ಘಟನೆ ತಾಲೂಕಿನ ಎಮ್ಮೆತಾಳು ಗ್ರಾಮದಲ್ಲಿ ನಡೆದಿದೆ.
ಎಮ್ಮೆತಾಳು ಗ್ರಾಮದ ಉಮೇಶ್ (26) ಹಾಗೂ ಚಂದ್ರವತಿ (66) ಮೃತ ದುರ್ದೈವಿಗಳಾಗಿದ್ದಾರೆ. ಈ ಕುಟುಂಬವು ಒಂದೇ ಒಂದು ದಿನ ಕಳೆದಿದ್ದರೆ, ಊರನ್ನೇ ಬಿಟ್ಟು ಹೋಗುತ್ತಿದ್ದರು, ಆದರೆ ಮಳೆರಾಯನ ಮುನಿಸು ಅವರಿಬ್ಬರನ್ನು ಮಸಣ ಸೇರುವಂತೆ ಮಾಡಿದೆ.
ಹೌದು. ಆಗಸ್ಟ್ 16ರಂದು ಸುರಿದ ಭೀಕರ ಮಳೆಯಲ್ಲಿ ಉಮೇಶ್ ಮತ್ತು ಚಂದ್ರವತಿ ಕೊಚ್ಚಿ ಹೋಗಿದ್ದಾರೆ. ಸುರಿಯುತ್ತಿರುವ ಭಾರೀ ಮಳೆಯಿಂದ ಒಂದೇ ಮನೆಯಲ್ಲಿ ಇದ್ದ ತಾಯಿ, ಮಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಹೊರಡಲು ಸಿದ್ಧರಾಗಿದ್ದರು. ಆದರೆ ಮಂಗಳೂರು-ಮಡಿಕೇರಿ ರಸ್ತೆ ಕುಸಿದಿದ್ದರಿಂದ ಒಂದು ದಿನ ಬಿಟ್ಟು ಹೋಗುವುದಾಗಿ ನಿಂತಿದ್ದರು. ಆದರೆ ಅಂದು ತಡರಾತ್ರಿ ಸುರಿದ ಭಾರೀ ಮಳೆಗೆ ಅವರು ವಾಸವಿದ್ದ ಮನೆ ಸಂಪೂರ್ಣವಾಗಿ ಕುಸಿದು ಬಿದ್ದು, ಇಬ್ಬರು ನದಿಯಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದಾರೆ.
ತಾಯಿ, ಮಗ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುವ ಕುರಿತು ಸಂಬಂಧಿಕರು ರಕ್ಷಣಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತ ದೇಹಗಳನ್ನು ಹುಡುಕಲು ರಕ್ಷಣಾ ಪಡೆಗಳು ಶೋಧ ಕಾರ್ಯ ಪ್ರಾರಂಭಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv