ಬೆಂಗ್ಳೂರಿನಲ್ಲಿ RSS ಮುಖಂಡನ ಹತ್ಯೆ; ಮೋಸ್ಟ್‌ ವಾಂಟೆಡ್‌ ಗ್ಯಾಂಗ್‌ಸ್ಟರ್‌ ದಕ್ಷಿಣ ಆಫ್ರಿಕಾದಲ್ಲಿ ಅರೆಸ್ಟ್‌

By
1 Min Read

– ಬರೋಬ್ಬರಿ 8 ವರ್ಷಗಳ ಬಳಿಕ ಆರೋಪಿ ಬಂಧನ

ನವದೆಹಲಿ/ಕೇಪ್‌ಟೌನ್‌: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಷ್ಟ್ರೀಯ ತನಿಖಾ ದಳ (NIA) ಮೋಸ್ಟ್‌ ವಾಂಟೆಡ್‌ ದರೋಡೆಕೋರರಲ್ಲಿ ಒಬ್ಬನಾದ ಮೊಹಮ್ಮದ್‌ ಗೌಸ್‌ ನಿಯಾಜಿನನ್ನ (Mohammed Gaus Niyazi) ದಕ್ಷಿಣ ಆಫ್ರಿಕಾದಲ್ಲಿ ಯಶಸ್ವಿಯಾಗಿ ಬಂಧಿಸಿದೆ. ಎನ್‌ಐಎ ಏಜೆನ್ಸಿಯು ನಿಯಾಜಿಯ ಪತ್ತೆಗಾಗಿ 5 ಲಕ್ಷ ರೂ.ಗಳ ಬಹುಮಾನ ಘೋಷಣೆ ಮಾಡಿತ್ತು ಎಂದು ಉನ್ನತ ಮೂಲಗಳು ತಿಳಿಸಿವೆ.

ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (PFI) ನಾಯಕ ಮೊಹಮ್ಮದ್ ಗೌಸ್ ನಿಯಾಜಿ, 2016ರಲ್ಲಿ ಬೆಂಗಳೂರಿನಲ್ಲಿ ಆರ್‌ಎಸ್‌ಎಸ್‌ ಮುಖಂಡ ರುದ್ರೇಶ್‌ ಎಂಬಾತನನ್ನ ಹತ್ಯೆಗೈದಿದ್ದ. ಘಟನೆ ನಂತರ ದೇಶದಿಂದ ಪಲಾಯನ ಮಾಡಿದ್ದ ನಿಯಾಜಿ, ವಿವಿಧ ದೇಶಗಳಲ್ಲಿ ತಲೆ ಮರೆಸಿಕೊಂಡಿದ್ದ ಎಂದು ಎನ್‌ಎಐ ಮೂಲಗಳು ಹೇಳಿವೆ. ಇದನ್ನೂ ಓದಿ: ರಾಜಕೀಯ ಕರ್ತವ್ಯದಿಂದ ನನ್ನನ್ನು ಮುಕ್ತಗೊಳಿಸಿ – ರಾಜಕೀಯ ನಿವೃತ್ತಿ ಸುಳಿವು ನೀಡಿದ ಗಂಭೀರ್‌

ರುದ್ರೇಶ್‌ನನ್ನ ಹತ್ಯೆಗೈದಿದ್ದ ನಿಯಾಜಿ ವಿವಿಧ ದೇಶಗಳಲ್ಲಿ ತಲೆ ಮರೆಸಿಕೊಂಡಿದ್ದ. ತನಿಖೆಯ ಮುಂದಾಳತ್ವ ವಹಿಸಿದ್ದ ಗುಜರಾತ್‌ ಭಯೋತ್ಪಾದನಾ ನಿಗ್ರಹ ದಳ (ATS)‌ ನಿಯಾಜಿಯ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ಕೊನೆಗೆ ಆತ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿರುವ ಬಗ್ಗೆ ಸುಳಿವು ಸಿಕ್ಕಿತು. ಕೂಡಲೇ ಈ ಮಾಹಿತಿಯನ್ನು ಕೇಂದ್ರದ ಭದ್ರತಾ ಏಜೆನ್ಸಿಗೆ ರವಾನಿಸಿತು. ನಂತರ ಎನ್‌ಐಎ ದಕ್ಷಿಣ ಆಫ್ರಿಕಾದ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: ಪಾಕ್‌ ವಶದಲ್ಲಿದ್ದ ‘ಸಿಂಗಂ’ ವಿಂಗ್‌ ಕಮಾಂಡರ್‌ ತಾಯ್ನಾಡಿಗೆ ವಾಪಸ್‌ – ಭಾರತದ ಗೆಲುವಿಗೆ 5ರ ಸಂಭ್ರಮ

ಆರೋಪಿ ನಿಯಾಜಿನನ್ನ ದಕ್ಷಿಣ ಆಫ್ರಿಕಾದಲ್ಲಿ ಬಂಧಿಸಿದ ನಂತರ ತ್ವರಿತವಾಗಿ ಹಸ್ತಾಂತರ ಪ್ರಕ್ರಿಯೆ ಪ್ರಾರಂಭಿಸಲಾಯಿತು. ಸದ್ಯ ಆರೋಪಿಯನ್ನು ಮುಂಬೈಗೆ ಕರೆತರಲಾಗುತ್ತಿದ್ದು, ಮುಂಬೈನಲ್ಲೇ ವಿಚಾರಣೆ ನಡೆಸಲಾಗುತ್ತದೆ ಎಂದು ಎನ್‌ಐಎ ಅಧಿಕಾರಿ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: CAA ಉಲ್ಲೇಖವಿರೋ ಅಮಿತ್ ಶಾ, ರಾಜನಾಥ್ ಸಿಂಗ್ ಕಾರಿನ ನಂಬರ್ ಪ್ಲೇಟ್ ವೈರಲ್

Share This Article