ಬಿಗ್ ಬಾಸ್ ಮನೆ ಕಂಡ ಅಚ್ಚರಿಯ ಕ್ಷಣಗಳು

Public TV
2 Min Read

ಸಿನಿಪ್ರಿಯರ ಅಚ್ಚುಮೆಚ್ಚಿನ ಶೋ ಬಿಗ್ ಬಾಸ್ ಒಟಿಟಿಯಲ್ಲಿ (Bigg Boss Ott) ಪ್ರಸಾರವಾಗುತ್ತಿದ್ದು, ಮನೆಯೊಳಗಿರುವ ಸ್ಪರ್ಧಿಗಳು ಕೆಲವೊಂದು ಅವಿಸ್ಮರಣೀಯ ಕ್ಷಣಗಳನ್ನು ಅತ್ಯಂತ ಸಂತಸದಿಂದ ಆಚರಿಸಿಕೊಂಡಿದ್ದಾರೆ. ಇನ್ನೇನು ಫೈನಲ್‌ಗೆ ಕೆಲವೇ ದಿನಗಳು ಬಾಕಿಯಿದೆ. ಮನೆಯಲ್ಲಿ ಆಚರಿಸಲಾಗಿರುವ ಕೆಲವು ಸುಂದರ ಕ್ಷಣಗಳ ಝಲಕ್ ಇಲ್ಲಿದೆ.

  1. ಜಶ್ವಂತ್‌ ಬೋಪಣ್ಣ ಹುಟ್ಟುಹಬ್ಬ

ಬಿಗ್ ಬಾಸ್ ಒಟಿಟಿ ಕನ್ನಡ ಜರ್ನಿಯು ಜಶ್ವಂತ್ ಅವರ ಹುಟ್ಟುಹಬ್ಬದೊಂದಿಗೆ ಆರಂಭವಾಯಿತು. ಇದು ಮನೆಯ ಅತಿ ದೊಡ್ಡ ಕಾರ್ಯಕ್ರಮವಾಗಿದ್ದು, ಈ ಸೀಸನ್ ಅತ್ಯಂತ ವಿಜೃಂಭಣೆಯಿಂದ ಆರಂಭವಾಯಿತು. ಅಲ್ಲದೇ, ಕಾರ್ಯಕ್ರಮವನ್ನು ಒಂದು ಪರಿಪೂರ್ಣವಾದ ಐಸ್ ಬ್ರೇಕಿಂಗ್ ಸೆಶನ್ ಆಗಿ ಪರಿವರ್ತನೆಯಾಗಿತ್ತು.

2. ಸ್ವಾತಂತ್ರ್ಯ ದಿನಾಚರಣೆ

ಸ್ಪರ್ಧಿ ರೂಪೇಶ್ ಅವರ ಹುಟ್ಟುಹಬ್ಬದ ನಂತರ ಸ್ಪರ್ಧಿಗಳೆಲ್ಲರೂ ಸ್ವಾತಂತ್ರ‍್ಯ ದಿನವನ್ನು ಅತ್ಯಂತ ಸಂತಸದಿಂದ ಆಚರಿಸಿದರು. ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ದೇಶಕ್ಕೆ ಗೌರವ ಸಲ್ಲಿಸಿದರು. ಇದು ಸ್ಪರ್ಧಿಗಳು ಎಂದಿಗೂ ಮರೆಯಲಾಗದಂತಹ ಮತ್ತೊಂದು ಅವಿಸ್ಮರಣೀಯ ಕ್ಷಣವಾಗಿತ್ತು. ಇದನ್ನೂ ಓದಿ:‘ಹನಿಮೂನ್’ ಗೂ ಮುನ್ನ ಮನೆದೇವರ ಆಶೀರ್ವಾದ ಪಡೆದ ನಟಿ ಮಹಾಲಕ್ಷ್ಮಿ ಹಾಗೂ ರವೀಂದರ್

3. ಗೌರಿ-ಗಣೇಶ ಹಬ್ಬದ ಸಂಭ್ರಮ

ಎಲ್ಲರೂ ಅತ್ಯಂತ ಕಾತುರದಿಂದ ಕಾಯುವ ಹಬ್ಬವೆಂದರೆ ಗೌರಿ-ಗಣೇಶ ಹಬ್ಬ. ಎಲ್ಲರೂ ಸೇರಿ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬ ಇದಾಗಿದೆ. ಈ ಹಬ್ಬದ ದಿನದಂದು ಬಿಬಿಕೆ ಒಟಿಟಿ ಮನೆಯಲ್ಲಿ ಸಂಭ್ರಮ ಮನೆಮಾಡಿತ್ತು. ಎಲ್ಲರೂ ಸಾಂಪ್ರದಾಯಿಕವಾಗಿ ಹೊಸ ಬಟ್ಟೆ ತೊಟ್ಟು ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಭಕ್ತಿ ಭಾವದಿಂದ ನಮಿಸಿದರು. ಪ್ರತಿದಿನ ಸ್ಪರ್ಧೆಯ ಹೆಸರಿನಲ್ಲಿ ಪರಸ್ಪರ ಹೋರಾಟ, ಕಿತ್ತಾಟಗಳಲ್ಲಿ ಮುಳುಗಿಹೋಗಿದ್ದ ಸ್ಪರ್ಧಿಗಳಿಗೆ ಹಬ್ಬದ ಸಂದರ್ಭದಲ್ಲಿ ಬಿಡುವು ದೊರೆತು ಎಲ್ಲರೂ ಒಟ್ಟಾಗಿ ಸೇರಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.

4.ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಅಚ್ಚರಿ ತಂದ ಕುಟುಂಬ ಸದಸ್ಯರ ವೀಡಿಯೋ ಮೆಸೇಜ್‌ಗಳು

ಯಾವಾಗಲೂ ಬಿಗ್ ಬಾಸ್ ನಲ್ಲಿ ಆಶ್ಚರ್ಯಗಳ ಮೇಲೆ ಆಶ್ಚರ್ಯಗಳು ಉಂಟಾಗುತ್ತವೆ. ಮೊದಲನೆ ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ ನಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಗೆ ದೊಡ್ಡ ಆಶ್ಚರ್ಯವನ್ನು ನೀಡಿತು. ಹಬ್ಬದ ಹಿನ್ನೆಲೆಯಲ್ಲಿ ಸ್ಪರ್ಧಿಗಳಿಗೆ ಅವರ ಕುಟುಂಬ ಸದಸ್ಯರು ಶುಭ ಕೋರುವ ವಿಶೇಷ ವಿಡಿಯೋ ಮೆಸೇಜ್ ಗಳನ್ನು ಸಿದ್ಧಪಡಿಸಿ ಮನೆಯಲ್ಲಿ ತೋರಿಸಿದ್ದು ವಿಶೇಷವಾಗಿತ್ತು. ಈ ಮೂಲಕ ಸ್ಪರ್ಧಿಗಳು ತಮ್ಮ ನೆಚ್ಚಿನ ಕುಟುಂಬ ಸದಸ್ಯರನ್ನು ನೋಡುವ ಅವಕಾಶವನ್ನು ಪಡೆದರು.

5. ರೂಪೇಶ್‌ ಶೆಟ್ಟಿಯಿಂದ ಕಿಚ್ಚ ಸುದೀಪ್‌ಗೆ ಹಾಡು ಅರ್ಪಣೆ

ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಅಂಗವಾಗಿ ವಿಶೇಷವಾಗಿ ಹಾಡನ್ನ ಸಂಯೋಜಿಸಿ ಹಾಡಿದ್ದು, ಶೋನ ಹೈಲೈಟ್ ಆಗಿತ್ತು. ಹೀಗೆ ಸಾಕಷ್ಟು ಸುಂದರ ಕ್ಷಣಗಳು ಪ್ರೇಕ್ಷಕರ ಮನಮುಟ್ಟಿತ್ತು. ಇನ್ನೂ ಬಿಗ್ ಬಾಸ್ ಓಟಿಟಿ ಮುಕ್ತಾಯವಾಗಲು ಕೆಲವೇ ದಿನಗಳು ಬಾಕಿಯಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *