244 ಮಂದಿಯಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ- ತುರ್ತು ಭೂಸ್ಪರ್ಶ

By
1 Min Read

ಗಾಂಧಿನಗರ: ಮಾಸ್ಕೋದಿಂದ ಗೋವಾಕ್ಕೆ (Moscow-Goa Flight) ತೆರಳುತ್ತಿದ್ದ ವಿಮಾನವನ್ನು ಜಾಮ್‍ನಗರ (Jamnagar) ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ವಿಮಾನದಲ್ಲಿ ಬಾಂಬ್ (Bomb Threat) ಇದೆ ಎಂದು ಭಯೋತ್ಪಾದನಾ ನಿಗ್ರಹ ದಳ ( ATS) ಗೆ ಬೆದರಿಕೆ ಮೇಲ್ ಬಂದಿರುವ ಹಿನ್ನೆಲೆ ತುರ್ತು ಭೂಸ್ಪರ್ಶ ಮಾಡಲಾಗಿದೆ.

ಬಾಂಬ್ ಇರುವುದರ ಬಗ್ಗೆ ಮಾಹಿತಿ ತಿಳಿದ ಸಿಬ್ಬಂದಿ ತಕ್ಷಣವೇ ಪೈಲಟ್‍ಗೆ ಮಾಹಿತಿ ತಿಳಿಸಿದ್ದಾರೆ. ಆ ಬಳಿಕ ಗೋವಾಕ್ಕೆ ತೆರಳುತ್ತಿದ ವಿಮಾನವನ್ನು ಗುಜರಾತ್‍ನ ಜಾಮ್‍ನಗರದ ವಿಮಾನ ನಿಲ್ದಾಣದಲ್ಲಿ ಫ್ಲೈಟ್ (Flight Land) ಲ್ಯಾಂಡ್ ಮಾಡಲಾಗಿತ್ತು. ಇದನ್ನೂ ಓದಿ: ಜೋಶಿಮಠ ಮುಳುಗುವ ಆತಂಕ – ಪರಿಸ್ಥಿತಿ ಅವಲೋಕಿಸಲು ತಜ್ಞರ ತಂಡಕ್ಕೆ ಸೂಚನೆ

ಸದ್ಯ ಪೊಲೀಸ್ ಹಿರಿಯ ಅಧಿಕಾರಿಯೊಂದಿಗೆ ಬಾಂಬ್ ನಿಷ್ಕ್ರಿಯ ದಳ ಕೂಡಾ ಜಾಮ್‍ನಗರದ ವಿಮಾನ ನಿಲ್ದಾಣಕ್ಕೆ ತಲುಪಿ, ವಿಮಾನವನ್ನು ಪರೀಶೋಧನೆ ಮಾಡಿ, 244 ‌ ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಬೆದರಿಕೆಯ ಮೇಲ್ ಬಗ್ಗೆ ಸತ್ಯಾಸತ್ಯತೆ ತಿಳಿಯಲು ತನಿಖೆ ಮುಂದುವರೆದಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *