ಮೀಸಲು ಅರಣ್ಯದಲ್ಲಿ 60ಕ್ಕೂ ಹೆಚ್ಚು ಫೈರಿಂಗ್ ಕಾಟ್ರೇಜ್ ಪತ್ತೆ, ತನಿಖೆಗೆ ಇಳಿದ ಅರಣ್ಯ ಇಲಾಖೆ

Public TV
1 Min Read

ಚಿಕ್ಕಮಗಳೂರು: ಸುಮಾರು 60ಕ್ಕೂ ಹೆಚ್ಚು ಬಂದೂಕಿನ (Gun) ಖಾಲಿ ಕಾಟ್ರೇಜ್‍ಗಳು ಮೂಡಿಗೆರೆ (Mudigere) ತಾಲೂಕಿನ ಸಾರಗೋಡು-ತತ್ಕೊಳ ಮೀಸಲು ಅರಣ್ಯ ಪ್ರದೇಶದಲ್ಲಿ (Reserve Forest) ಪತ್ತೆಯಾಗಿವೆ.

ವಗೇರ್‌ನಿಂದ ಕನ್ನಹಳ್ಳಿಗೆ ಸಂಪರ್ಕ ಕಲ್ಪಿಸುವ ಅರಣ್ಯ ಪ್ರದೇಶದ ರಸ್ತೆಯಲ್ಲಿ ಕಾಟ್ರೇಜ್‍ಗಳು ಕಂಡು ಬಂದಿವೆ. ಮಲೆನಾಡಿನ ಕಾಫಿ ಬೆಳೆಗಾರರು ಕಾಡುಪ್ರಾಣಿಗಳು ಹಾಗೂ ಕಳ್ಳರಿಂದ ಬೆಳೆ ಹಾಗೂ ಆತ್ಮರಕ್ಷಣೆಗೆ ಅಕ್ರಮ-ಸಕ್ರಮವಾಗಿ ಬಂದೂಕಗಳನ್ನ ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ಬಂದೂಕುಗಳನ್ನ ಪ್ರಾಣಿ ಬೇಟೆಗೂ ಬಳಸುತ್ತಾರೆ. ಆದರೆ ಮೀಸಲು ಅರಣ್ಯ ಪ್ರದೇಶದಲ್ಲಿ ಈ ಪ್ರಮಾಣದ ಕಾಟ್ರೇಜ್‍ಗಳು (Cartridge) ಪತ್ತೆಯಾಗಿದ್ದು, ಬೇಟೆಗೆ ಬಳಕೆಯಾಗಿರುವ ಶಂಕೆ ಮೂಡಿದೆ. ಇದನ್ನೂ ಓದಿ:  ಮಾ.9ರ ಕರ್ನಾಟಕ ಬಂದ್‌ ವಾಪಸ್ ಪಡೆದ ಕಾಂಗ್ರೆಸ್

CRIME 2

ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿರುವ ಅರಣ್ಯ ಇಲಾಖೆ ಅಧಿಕಾರಿಗಳು (Forest Department) ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಇಷ್ಟೊಂದು ಪ್ರಮಾಣದ ಕಾಟ್ರೇಜ್‍ಗಳು ಇಲ್ಲಿಗೆ ಹೇಗೆ ಬಂತು. ಯಾರು ತಂದು ಹಾಕಿದ್ದು. ಬೇರೆ ಕಡೆ ಬಳಸಿ ಇಲ್ಲಿಗೆ ತಂದು ಎಸೆದಿದ್ದಾರಾ ಅಥವಾ ಇಲ್ಲಿಯೇ ಬಳಕೆ ಮಾಡಿದ್ದಾ? ಏಕೆ ಬಳಸಿದ್ದಾರೆ ಎಂಬೆಲ್ಲಾ ದೃಷ್ಠಿಕೋನದಲ್ಲಿ ತನಿಖೆ ಕೈಗೊಂಡಿದ್ದಾರೆ.

ಮಲೆನಾಡಲ್ಲಿ 12 ಸಾವಿರಕ್ಕೂ ಅಧಿಕ ಸಕ್ರಮ ಬಂದೂಕಗಳಿದ್ರೆ, ಅದರ ಅರ್ಧದಷ್ಟು ಅಕ್ರಮ ಬಂದೂಕುಗಳು ಇವೆ ಎಂಬ ಮಾಹಿತಿ ಇದೆ. ಆದ್ರೆ ಬಂದೂಕುಗಳು ಬೆಳೆ-ಪ್ರಾಣ ಉಳಿಸಿಕೊಳ್ಳುವುದರ ಜೊತೆ ಶಿಕಾರಿ ಹಾಗೂ ಸಮಾಜದಲ್ಲಿ ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಬಳಕೆಯಾಗಿದ್ದೂ ಇದೆ. ಆದರೆ ಅರಣ್ಯ ಪ್ರದೇಶದಲ್ಲಿ ಇಷ್ಟೊಂದು ಕಾಟ್ರೇಜ್‍ಗಳು ಪತ್ತೆಯಾಗಿರೋದು ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಸಿಂಗಾಪುರದಲ್ಲಿ ಮಹಿಳೆಯರಿಗೆ ಕಿರುಕುಳ ಆರೋಪ- ಭಾರತ ಮೂಲದ ಯೋಗಾ ಶಿಕ್ಷಕನ ವಿಚಾರಣೆ

Share This Article
Leave a Comment

Leave a Reply

Your email address will not be published. Required fields are marked *