ಹೋರಿಯ ಹುಟ್ಟುಹಬ್ಬಕ್ಕೆ 50ಕ್ಕೂ ಹೆಚ್ಚು ಅಭಿಮಾನಿಗಳಿಂದ ರಕ್ತದಾನ

Public TV
1 Min Read

ಹಾವೇರಿ: ರಕ್ತದಾನ (Blood Donate) ಶಿಬಿರ ಆಯೋಜಿಸಿ 50ಕ್ಕೂ ಹೆಚ್ಚು ಜನ ರಕ್ತದಾನ ಮಾಡುವ ಮೂಲಕ ಹೋರಿಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಘಟನೆ ಹಾವೇರಿಯ (Haveri) ಕೆರಿಮತ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸಿದ್ದಲಿಂಗೇಶ ವಾಲಿ ಎಂಬವರಿಗೆ ಸೇರಿದ ಹೋರಿ ಇದಾಗಿದೆ. ಸುಮಾರು ಎಂಟು ವರ್ಷಗಳ ಹಿಂದೆ ಈ ಹೋರಿಯನ್ನು ಒಂದು ಲಕ್ಷ ರೂ. ಕೊಟ್ಟು ತಮಿಳುನಾಡಿನಿಂದ ತಂದಿದ್ದರು. ಬಳಿಕ ಹೋರಿಗೆ ರಾಕ್ಷಸ 220 ಎಂದು ಹೆಸರು ಇಟ್ಟಿದ್ದರು. ಹೋರಿ ಹಬ್ಬದಲ್ಲಿ (Hori Habba) ಕೊಬ್ಬರಿ ಕಟ್ಟಿ ಓಡಿಸುವ ಸಲುವಾಗಿಯೇ ಇದನ್ನು ತಂದಿದ್ದರು. ಅಂತೆಯೇ ಹೋರಿ ಹಬ್ಬದಲ್ಲಿಯೂ ಒಳ್ಳೆಯ ಹೆಸರು ಮಾಡಿತ್ತು. ಇದನ್ನೂ ಓದಿ: ಹೊಸ ಮದ್ಯದಂಗಡಿಗಳಿಗೆ ಲೈಸೆನ್ಸ್ ನೀಡಲ್ಲ ಅಂತಿದ್ದಾರೆ ಸಿಎಂ-ಉದ್ಯೋಗ ಸೃಷ್ಟಿಯ ಚಿಂತನೆಯಿದೆ ಅಂತಿದ್ದಾರೆ ಡಿಸಿಎಂ

ಹೋರಿ ಹಬ್ಬದಲ್ಲಿ ಅಲಂಕಾರದಲ್ಲಿ ರಾಕ್ಷಸನ ಅವತಾರ ತಾಳಿದಂತೆ ಅಖಾಡದಲ್ಲಿ ಧೂಳೆಬ್ಬಿಸಿ ಓಡಿ ಜನರ ಮನೆ ಮಾತಾಗಿದೆ. ಅಖಾಡದಿಂದ ಹೊರಗೆ ಬಂದರೆ ಅತ್ಯಂತ ಮೃದು ಸ್ವಭಾವ ಹೊಂದಿದೆ. ಹೀಗಾಗಿ ಹೋರಿಗೆ ಹೋರಿ ಮಾಲೀಕರು ಹಾಗೂ ಹೋರಿ ಅಭಿಮಾನಿಗಳು ರಾಕ್ಷಸ ಎಂದು ಹೆಸರು ನಾಮಕರಣ ಮಾಡಿದ್ದರು. ಅಖಾಡದಲ್ಲಿ ಶರವೇಗದ ಓಟ ಓಡಿ ಸಾಕಷ್ಟು ಬಹುಮಾನಗಳನ್ನು ಇದು ಪಡೆದುಕೊಂಡಿದೆ.

ಹೀಗಾಗಿ ಹೋರಿಗೆ ಪ್ರತಿವರ್ಷ ಹುಟ್ಟುಹಬ್ಬ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಮೂರು ವರ್ಷಗಳಿಂದ ಹೋರಿ ಹುಟ್ಟುಹಬ್ಬಕ್ಕೆ ರಕ್ತದಾನ ಶಿಬಿರ ಮಾಡಲಾಗುತ್ತಿದೆ. ಕಳೆದ ವರ್ಷ 60ಕ್ಕೂ ಅಧಿಕ ಜನರು ರಕ್ತದಾನ ಮಾಡಿದ್ದರು. ಇದನ್ನೂ ಓದಿ: ಬಿಜೆಪಿ ಸಮಾಜ ಒಡೆಯೋ ಕೆಲಸ ಮಾಡುತ್ತಿದ್ರೆ ಕಾಂಗ್ರೆಸ್ ಅದನ್ನು ಹೊಲಿಯುತ್ತಿದೆ: ಡಿಕೆಶಿ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್