ಫುಡ್ ಪಾಯಿಸನ್ ಆಗಿ 40ಕ್ಕೂ ಅಧಿಕ ಮಂದಿ ಅಸ್ವಸ್ಥ

1 Min Read

ಬೀದರ್: ಜಿಲ್ಲೆಯ ಭಾಲ್ಕಿಯ (Bhalki) ಜಾಂತಿ ಗ್ರಾಮದಲ್ಲಿ ಫುಡ್ ಪಾಯಿಸನ್ (Food Poison) ಆಗಿ 40ಕ್ಕೂ ಅಧಿಕ ಜನರು ಅಸ್ವಸ್ಥರಾಗಿದ್ದಾರೆ.

ಹೊಸ ಮನೆಯ ಮೇಲ್ಛಾವಣಿ ಹಾಕಿದ ಖುಷಿಗೆ ರಾಜಕುಮಾರ್ ಎಂಬುವವರು ಹುಗ್ಗಿ, ಅನ್ನ, ಸಾಂಬಾರ್ ಮಾಡಿಸಿ, ಗ್ರಾಮಸ್ಥರಿಗೆ ಊಟ ಹಾಕಿಸಿದ್ದರು. ಇದನ್ನು ತಿಂದು ಗ್ರಾಮದ ಜನರು ಬೆಳಗಿನ ಜಾವ ಫುಡ್ ಪಾಯಿಸನ್ ಆಗಿ ವಾಂತಿ, ಭೇದಿಯಿಂದ ಅಸ್ವಸ್ಥರಾಗಿದ್ದಾರೆ. 40ಕ್ಕೂ ಅಧಿಕ ಜನರು ಅಸ್ವಸ್ಥರಾಗಿದ್ದು, 5 ರಿಂದ 6 ಜನರ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ – ಇಬ್ಬರು ಮಕ್ಕಳು ದುರ್ಮರಣ, ತಾಯಿಗೆ ಗಾಯ

ಆಂಬುಲೆನ್ಸ್ ಮೂಲಕ ಜನರನ್ನು ಬೀದರ್‌ನ ಬ್ರಿಮ್ಸ್ ಆಸ್ಪತ್ರೆಗೆ ಕರೆತರಲಾಗಿದ್ದು, 10 ರಿಂದ 15 ಜನರಿಗೆ ಬ್ರಿಮ್ಸ್‌ನ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಮನೆಯ ಮಾಲೀಕರಾದ ರಾಜಕುಮಾರ್, ಸಂಗೀತಾ, ಈರಮ್ಮ, ಶಿವಾನಂದ್ ಮತ್ತು ಅಂಬಿಕಾ ಸೇರಿದಂತೆ ಹಲವರ ಸ್ಥಿತಿ ಕೂಡ ಗಂಭೀರವಾಗಿದ್ದು, ಉಳಿದ ಜನರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Share This Article