`ವಿದ್ಯಾಮಂದಿರʼದಲ್ಲಿ 40ಕ್ಕೂ ಅಧಿಕ ಉನ್ನತ ಶಿಕ್ಷಣ ಸಂಸ್ಥೆಗಳು ಭಾಗಿ – ಬನ್ನಿ ಭಾಗವಹಿಸಿ, ಮಾಹಿತಿ ಪಡೆದುಕೊಳ್ಳಿ

Public TV
3 Min Read

– ಆ.9, 10 ರಂದು ಕಾರ್ಯಕ್ರಮ; ವಿದ್ಯಾರ್ಥಿಗಳಿಗೆ, ಪೋಷಕರಿಗೆ ಉಚಿತ ಪ್ರವೇಶ
– ಲಕ್ಕಿ ಡಿಪ್, ಲಕ್ಕಿ ಡ್ರಾನಲ್ಲಿ ಬಹುಮಾನ ಗೆಲ್ಲುವ ಅವಕಾಶ

ಬೆಂಗಳೂರು: ಪದವಿ ಮುಗಿದ ನಂತರ ಮುಂದೇನು? ಯಾವ ಕಾಲೇಜು ಬೆಸ್ಟ್? ಯಾವೆಲ್ಲ ಕೋರ್ಸ್‌ಗಳಿವೆ? ಈ ಕೋರ್ಸ್‌ಳಿಗೆ ಎಷ್ಟು ಶುಲ್ಕ ಇರುತ್ತೆ? ಅಲ್ಲಿ ಹಾಸ್ಟೆಲ್ ಸೌಲಭ್ಯ ಇದ್ಯಾ? ಮಕ್ಕಳ ಭವಿಷ್ಯ ಹೇಗೆ? ಈ ರೀತಿ ಪ್ರಶ್ನೆಗಳು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಮೂಡುವುದು ಸಹಜ. ಈ ಎಲ್ಲ ಪ್ರಶ್ನೆಗಳಿಗೆ ನಿಮ್ಮ `ಪಬ್ಲಿಕ್ ಟಿವಿ’ಯ 4ನೇ ಆವೃತ್ತಿಯ `ವಿದ್ಯಾಮಂದಿರ’ ಶೈಕ್ಷಣಿಕ ಮೇಳದಲ್ಲಿ ಉತ್ತರ ಸಿಗಲಿದೆ. ಈ ಮೆಗಾ ಶಿಕ್ಷಣ ಮೇಳದಲ್ಲಿ 40ಕ್ಕೂ ಅಧಿಕ ಉನ್ನತ ಶಿಕ್ಷಣ ಸಂಸ್ಥೆಗಳು ಭಾಗಿಯಾಗಿ, ನಿಮ್ಮ ಮಕ್ಕಳ ಭವಿಷ್ಯ ರೂಪಿಸಲಿದೆ.

ಹೌದು. ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುವ AD6 ಅಡ್ವರ್ಟೈಸಿಂಗ್ ಸಹಯೋಗದಲ್ಲಿ ಇದೇ ಆಗಸ್ಟ್ 9, 10ರಂದು 2 ದಿನಗಳ ಮೆಗಾ `ಪಿಜಿ ಶೈಕ್ಷಣಿಕ ಮೇಳ’ ನಡೆಯಲಿದೆ. ಮಲ್ಲೇಶ್ವರದ ಕೆಸಿ ಜನರಲ್ ಆಸ್ಪತ್ರೆಯ ಮುಂಭಾಗಲ್ಲಿರುವ ಸರ್ಕಾರಿ ಶಾಲಾ ಮೈದಾನದಲ್ಲಿ 4ನೇ ಆವೃತ್ತಿಯ ಕಾರ್ಯಕ್ರಮ ಆಯೋಜನೆಗೊಂಡಿದ್ದು ವಿದ್ಯಾರ್ಥಿಗಳಿಗೆ ಮತ್ತು ಪೋಷಕರು ಉಚಿತ ಪ್ರವೇಶ ಇರಲಿದೆ. ಎರಡೂ ದಿನ ಬೆಳಗ್ಗೆ 9 ರಿಂದ ಸಂಜೆ 6 ಗಂಟೆ ವರೆಗೆ ಶೈಕ್ಷಣಿಕ ಮೇಳ ನಡೆಯಲಿದ್ದು, 40ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿರುವ ಕೋರ್ಸ್‌ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಈ ಹಿಂದೆ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ `ವಿದ್ಯಾಪೀಠ’ಕ್ಕೆ ಶಿಕ್ಷಣ ಸಂಸ್ಥೆಗಳು, ಪೋಷಕರು, ವಿದ್ಯಾರ್ಥಿಗಳಿಂದ ಭಾರೀ ಸ್ಪಂದನೆ ಸಿಕ್ಕಿತ್ತು. ಇದರ ಮುಂದುವರಿದ ಭಾಗವಾಗಿ ಪದವಿ ವಿದ್ಯಾರ್ಥಿಗಳಿಗಾಗಿ `ವಿದ್ಯಾ ಮಂದಿರ’ ಆಯೋಜಿಸಿಕೊಂಡುಬರುತ್ತಿದೆ. ಸತತ 3 ಆವೃತ್ತಿಗಳನ್ನ ಯಶಸ್ವಿಯಾಗಿ ನಡೆಸಿಕೊಟ್ಟಿರುವ `ಪಬ್ಲಿಕ್ ಟಿವಿ’ ಇದೀಗ 4ನೇ ಆವೃತ್ತಿಗೆ ಕಾಲಿಟ್ಟಿದೆ.

40ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಭಾಗಿ
ವಿದ್ಯಾ ಮಂದಿರದಲ್ಲಿ ರಾಜ್ಯದ ನಾನಾ ಭಾಗಗಳ 40ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪಾಲ್ಗೊಳ್ಳಲಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸ್ನಾತಕೋತ್ತರ ಪದವಿ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಇದರೊಂದಿಗೆ ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಈ ಮೇಳದಲ್ಲಿ ಅವಕಾಶ ಇದೆ.

ಅಷ್ಟೇ ಅಲ್ಲದೇ ಹೊಸ ಪಿಜಿ ಕೋರ್ಸ್‌ಗಳು, ಯಾವ ಪಿಜಿ ಮಾಡಿದ್ರೆ ನಿಮ್ಮದೇ ಸ್ಟಾರ್ಟ್ಅಪ್ ಮಾಡಲು ಸೂಕ್ತ? ಯಾವ ಕೋರ್ಸ್‌ ನಿಮಗೆ ವಿದೇಶಗಳಲ್ಲಿ ಉದ್ಯೋಗ ಅವಕಾಶ ಕಲ್ಪಿಸುತ್ತೆ. ಯಾವ `ಸ್ಟೂಡೆಂಟ್ ಫಾರಿನ್ ಎಕ್ಸ್‌ಚೇಂಜ್‌ ಪ್ರೋಗ್ರಾಂ’ ನಿಮಗೆ ಸೂಕ್ತ ಎಂಬೆಲ್ಲ ಪ್ರಶ್ನೆಗಳಿಗೆ ಈ ಶೈಕ್ಷಣಿಕ ಮೇಳದಲ್ಲಿ ಉತ್ತರ ಸಿಗಲಿದೆ.

Public TV Vidhya Mandira Mega Post Graduation Education Expo Inaugurated 6 ಲಕ್ಕಿ ಡಿಪ್‌, ಲಕ್ಕಿ ಡ್ರಾನಲ್ಲಿ ಬಹುಮಾನ ಗೆಲ್ಲುವ ಅವಕಾಶ
ಶೈಕ್ಷಣಿಕ ಮೇಳದಲ್ಲಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಮಾಹಿತಿ, ಉಪನ್ಯಾಸ ಮಾತ್ರವಲ್ಲದೇ ಲಕ್ಕಿಡಿಪ್‌ ಮೂಲಕ ಬಂಪರ್‌ ಬಹುಮಾನ ಗೆಲ್ಲುವ ಅವಕಾಶ ವಿದ್ಯಾರ್ಥಿಗಳಿಗೆ ಇರಲಿದೆ. ಬೆಳಗ್ಗೆ 9 ರಿಂದ 11 ಗಂಟೆ ಒಳಗೆ ಹೆಸರು ನೋಂದಾಯಿಸಿಕೊಂಡವರಿಗೆ ಲಕ್ಕಿ ದಿಪ್‌ ಮೂಲಕ 1 ಲ್ಯಾಪ್‌ಟಾಪ್‌ ಮತ್ತು 2 ಟ್ಯಾಬ್‌ ಗೆಲ್ಲುವ ಅವಕಾಶ ಇರಲಿದೆ. ಅಷ್ಟೇ ಅಲ್ಲದೇ ಲಕ್ಕಿ ಡ್ರಾ ಮೂಲಕ ಪ್ರತಿ ಒಂದು ಗಂಟೆಗೆ 1 ಟ್ಯಾಬ್‌ ಗೆಲ್ಲುವ ಅವಕಾಶ ವಿದ್ಯಾರ್ಥಿಗಳಿಗೆ ಇರಲಿದೆ.

ಪ್ಲಾಟಿನಂ ಪ್ರಾಯೋಜಕರು
ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್, ಸಪ್ತಗಿರಿ ಎನ್‌ಪಿಎಸ್‌ ವಿಶ್ವವಿದ್ಯಾಲಯ, ನಾಗಾರ್ಜುನ ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ, ರೇವಾ ವಿಶ್ವವಿದ್ಯಾಲಯ

Public TV Vidhya Mandira Mega Post Graduation Education Expo Inaugurated 4

ಗೋಲ್ಡ್‌ ಪ್ರಾಯೋಜಕರು
ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್‌ಸ್ಟಿಟೂಷನ್ಸ್‌, CMR ವಿಶ್ವವಿದ್ಯಾಲಯ, BGS ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ, ಚಾಣಕ್ಯ ವಿಶ್ವವಿದ್ಯಾಲಯ, ಪಾರುಲ್ ವಿಶ್ವವಿದ್ಯಾಲಯ, ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ.

ಸಿಲ್ವರ್‌ ಪ್ರಾಯೋಜಕರು
ಗೋಪಾಲನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಆಕ್ಸ್‌ಫರ್ಡ್ ಶಿಕ್ಷಣ ಸಂಸ್ಥೆಗಳು, ಈಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಎಬಿಬಿಎಸ್‌ ಶಿಕ್ಷಣ ಸಂಸ್ಥೆ, ಪಿಇಎಸ್ ವಿಶ್ವವಿದ್ಯಾಲಯ, AMITY ಯೂನಿವರ್ಸಿಟಿ, ರಾಜರಾಜೇಶ್ವರಿ ಕಾಲೇಜ್ ಆಫ್ ಇಂಜಿನಿಯರಿಂಗ್, ಡಾನ್ ಬೋಸ್ಕೋ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಡಿ ಕಿಂಗ್‌ಡಮ್‌ ಕಾಲೇಜು, ಪ್ರೆಸಿಡೆನ್ಸಿ ಯೂನಿವರ್ಸಿಟಿ.

Vidhyamandira Education

ಸ್ಪೆಷಲ್‌ ಪೆವಿಲಿಯನ್‌
ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್

ಕ್ರಿಯೆಟಿವ್‌ ಸ್ಟಾಲ್‌
RR ಸಂಸ್ಥೆಗಳು

ಗಿಫ್ಟ್‌ ಸ್ಪಾನರ್ಸ್‌
ಸಪ್ತಗಿರಿ NPS ವಿಶ್ವವಿದ್ಯಾಲಯ, ಜೀನಿ ಸ್ಲಿಮ್‌

ಕಾಫಿ&ಟೀ ಪ್ರಾಯೋಜಕರು
ಬಾಯರ್ಸ್‌ ಕಾಫಿ

ದಿನಾಂಕ: ಆಗಸ್ಟ್‌ 9 ಮತ್ತು ಆಗಸ್ಟ್‌ 10
ಸ್ಥಳ: ಸರ್ಕಾರಿ ಶಾಲಾ ಮೈದಾನ, ಕೆಸಿ ಜನರಲ್‌ ಆಸ್ಪತ್ರೆ ಎದುರು, ಮಲ್ಲೇಶ್ವರಂ ಬೆಂಗಳೂರು
ಸಮಯ: ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ

Share This Article