ಹಟ್ಟಿ ಚಿನ್ನದ ಗಣಿ ಮುಖ್ಯ ದ್ವಾರದ ಬಳಿ 15ಕ್ಕೂ ಹೆಚ್ಚು ಸ್ಫೋಟಕಗಳು ಪತ್ತೆ!

1 Min Read

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದಗಣಿಯ (Hatti Gold Mine) ಮುಖ್ಯದ್ವಾರ ಬಳಿ ಅಪಾಯಕಾರಿ ಸ್ಫೋಟಕಗಳು ಪತ್ತೆಯಾಗಿದ್ದು ಕಾರ್ಮಿಕರು (Labours), ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.

ಸ್ಫೋಟಕ್ಕೆ ಬಳಸುವ 15 ಕ್ಕೂ ಹೆಚ್ಚು ಮದ್ದುಗಳ ಕಾಟ್ರಿಜ್‌ಗಳು ಚಿನ್ನದ ಗಣಿ ಕಂಪನಿ ಗೇಟ್ ಬಳಿ ಮುಖ್ಯರಸ್ತೆಯಲ್ಲಿ ಪತ್ತೆಯಾಗಿವೆ. ಸ್ಫೋಟಕ ವಸ್ತುಗಳು ಯಾರಿಗೆ ಸೇರಿದ್ದು ಅನ್ನೊದು ಇನ್ನೂ ತಿಳಿದು ಬಂದಿಲ್ಲ. ಹಟ್ಟಿ ಚಿನ್ನದಗಣಿ ಭದ್ರತಾ ಸಿಬ್ಬಂದಿ, ಅಧಿಕಾರಿಗಳು ಹಾಗೂ ಪೊಲೀಸರು (Hatti Police) ಈಗ ಅಲರ್ಟ್ ಆಗಿದ್ದಾರೆ. ಸ್ಥಳಕ್ಕೆ ಹಟ್ಟಿ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಸಿನಿಮಾ ಪ್ರಚಾರಕ್ಕಾಗಿ ಕೀಳು ಮಟ್ಟದ ಡ್ರಾಮಾ – FIR ಬೆನ್ನಲ್ಲೇ ʻಅಮುಕು ಡುಮುಕುʼ ಮಂಜು ಯೂಟರ್ನ್‌

ಪಲ್ಸರ್ ಬೈಕ್ ನಲ್ಲಿ ಹೊರಟಿದ್ದ ಸವಾರರು ಮದ್ದುಗಳ ಕಾಟ್ರಿಜ್‌ಗಳನ್ನು ಬೀಳಿಸಿಕೊಂಡು ಹೋಗಿದ್ದಾರೆ ಅಂತ ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ. ಆದ್ರೆ ಅಪಾಯಕಾರಿ ಸ್ಫೋಟಕಗಳನ್ನ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೇ ಬೈಕ್‌ನಲ್ಲಿ ಸಾಗಿಸುತ್ತಿದ್ದ ಬಗ್ಗೆ ಅನುಮಾನಗಳು ಮೂಡಿವೆ.

ಭದ್ರತಾ ದೃಷ್ಟಿಯಿಂದ ಜಿಲ್ಲೆಯ ಸೂಕ್ಷ್ಮ ಪ್ರದೇಶವಾದ ಹಟ್ಟಿ ಚಿನ್ನದಗಣಿ ದ್ವಾರದ ಬಳಿ ಮದ್ದುಗಳು ಪತ್ತೆಯಾಗಿದ್ದರಿಂದ ಪೊಲೀಸರು ಪರಿಶೀಲನೆ ಚುರುಕುಗೊಳಿಸಿದ್ದಾರೆ. ಹಟ್ಟಿ ಚಿನ್ನದಗಣಿಯಲ್ಲಿ ಚಿನ್ನದ ಗಣಿಗಾರಿಕೆಗೆ ಬಳಸುವ ಮದ್ದುಗಳಾ ,ಖಾಸಗಿ ಕಲ್ಲು ಕ್ವಾರೆಗಳಲ್ಲಿ ಕಲ್ಲು ಗಣಿಗಾರಿಕೆಗೆ ಬಳಸುವ ಮದ್ದುಗಳಾ. ಯಾರು ಎಲ್ಲಿಗೆ ಸಾಗಿಸುತ್ತಿದ್ದರು ಅನ್ನೋ ಬಗ್ಗೆ ತನಿಖೆ ಆರಂಭಗೊಂಡಿದೆ. ಇದನ್ನೂ ಓದಿ: ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ – ಅಕ್ರಮ ತಡೆಗೆ ಪರೀಕ್ಷಾ ಬೋರ್ಡ್ ಹದ್ದಿನ ಕಣ್ಣು

Share This Article