ಪಬ್ಲಿಕ್‌ ಟಿವಿ ವಿದ್ಯಾಪೀಠದಲ್ಲಿ ಭಾಗಿಯಾಗಲಿವೆ 120ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು

Public TV
3 Min Read

ಬೆಂಗಳೂರು: ಪಬ್ಲಿಕ್‌ ಟಿವಿಯ 8ನೇ ಆವೃತ್ತಿಯ ವಿದ್ಯಾಪೀಠ (Vidhyapeeta) ಶೈಕ್ಷಣಿಕ ಮೇಳ (Education Expo) ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೇ ಶನಿವಾರ ಮತ್ತು ಭಾನುವಾರ ನಡೆಯಲಿದ್ದು 120ಕ್ಕೂ ಹೆಚ್ಚು ಕಾಲೇಜುಗಳು ಭಾಗಿಯಾಗಲಿದೆ.

‘ಇಂದಿನ ಕಲಿಕೆ, ನಾಳಿನ ದಾರಿ ದೀಪ’ ಎಂಬ ಘೋಷವಾಕ್ಯದೊಂದಿಗೆ ಪಬ್ಲಿಕ್‌ ಟಿವಿ (PUBLiC TV) ಪ್ರಸ್ತುತ ಪಡಿಸುವ Ad6 Advertising ಸಹಯೋಗದಲ್ಲಿ ಆಯೋಜನೆಗೊಂಡಿರುವ ವಿದ್ಯಾಪೀಠ ಶೈಕ್ಷಣಿಕ ಮೇಳ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ನಡೆಯಲಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಚಿತ ಪ್ರವೇಶವಿರುತ್ತದೆ.

ಅನಿಮೇಷನ್, ಮೀಡಿಯಾ ಮತ್ತು ಗೇಮಿಂಗ್ ಆರ್ಕಿಟೆಕ್ಚರ್, ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗಳು, ವಾಣಿಜ್ಯ ಮತ್ತು ಬ್ಯಾಂಕಿಂಗ್, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳು, ಫ್ಯಾಷನ್ ಮತ್ತು ಹೋಟೆಲ್ ಮ್ಯಾನೇಜ್‌ಮೆಂಟ್, ಕಾನೂನು ವಿಶ್ವವಿದ್ಯಾಲಯಗಳು, ಸಮೂಹ ಸಂವಹನ, ಎಂಬಿಎ ಸಂಸ್ಥೆಗಳು ವಿದ್ಯಾಪೀಠದಲ್ಲಿ ಭಾಗಿಯಾಗುತ್ತಿವೆ.

120 ಕ್ಕೂ ಹೆಚ್ಚು ಸಂಸ್ಥೆಗಳು ಭಾಗಿ: ಕರ್ನಾಟಕದ ಅತಿದೊಡ್ಡ ಶೈಕ್ಷಣಿಕ ಮೇಳ ವಿದ್ಯಾಪೀಠದಲ್ಲಿ ರಾಜ್ಯದ ನಾನಾ ಭಾಗಗಳ 120ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪಾಲ್ಗೊಳ್ಳಲಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪದವಿ, ಸ್ನಾತಕೋತ್ತರ ಪದವಿ, ಕೆಸಿಇಟಿ, ನೀಟ್‌ ಮತ್ತು ಕಾಮೆಡ್‌ ಕೆ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಈ ಮೇಳದಲ್ಲಿ ಅವಕಾಶ ಇದೆ.

ಶೈಕ್ಷಣಿಕ ಮೇಳದಲ್ಲಿ ಸೆಮಿನಾರ್‌ ಸೇರಿದಂತೆ ಹಲವು ಕಾರ್ಯಕ್ರಮಗಳು ಇರಲಿವೆ. ಲಕ್ಕಿ ಡ್ರಾ ಮೂಲಕ ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಇದನ್ನೂ ಓದಿ: ಮೀನಿನ ಊಟ ಮಾಡುತ್ತಿರುವಾಗಲೇ ಕಣ್ಣಿಗೆ ಖಾರದ ಪುಡಿ ಹಾಕಿ ಡಿಜಿಪಿ ಕೊಲೆ!

ಲ್ಯಾಪ್‌ಟಾಪ್‌, ಬೈಸಿಕಲ್‌ ಉಡುಗೊರೆ
ವಿವಿಧ ಸ್ಪರ್ಧೆಯಲ್ಲಿ ಗೆದ್ದ ವಿಜೇತರಿಗೆ ಲ್ಯಾಪ್‌ಟಾಪ್ ಹಾಗೂ ಬೈಸಿಕಲ್‌ ಸೇರಿದಂತೆ ವಿಶೇಷ ಉಡುಗೊರೆ ನೀಡಲಾಗುವುದು. ಪ್ರತಿ ಅರ್ಧಗಂಟೆಗೆ ಅಚ್ಚರಿಯ ಉಡುಗೊರೆಗಳು ಸಿಗುತ್ತವೆ. ವಿದ್ಯಾರ್ಥಿಗಳಿಗೆ ಬಂಪರ್‌ ಬಹುಮಾನಗಳಿವೆ. ಸ್ಥಳದಲ್ಲೇ ತಕ್ಷಣ ಪ್ರವೇಶಾತಿಗೂ ಅವಕಾಶ ಇರುತ್ತದೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಅಂಕಪಟ್ಟಿಯ ಫೋಟೋಕಾಪಿ ತಂದು ತೋರಿಸಿದ್ದಲ್ಲಿ ಅವರಿಗೂ ಉಡುಗೊರೆ ಸಿಗಲಿದೆ. ಗೇಮ್ಸ್‌, ಸ್ಲೋ ಸೈಕಲ್‌ ರೇಸ್‌, ಪಿಕ್‌ & ಸ್ಪೀಚ್‌ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳು ತಮ್ಮ ವಿಶೇಷ ಪ್ರತಿಭೆ ಪ್ರದರ್ಶನಕ್ಕೆ ಶೈಕ್ಷಣಿಕ ಮೇಳ ವೇದಿಕೆ ಕಲ್ಪಿಸಿದೆ.

ಪ್ಲಾಟಿನಂ ಆಯೋಜಕರು:
ಗಾರ್ಡನ್‌ ಸಿಟಿ ಯೂನಿರ್ವಸಿಟಿ, ಸಿಎಂಆರ್‌ ಯೂನಿವರ್ಸಿಟಿ, ರಾಮಯ್ಯ ಯೂನಿವರ್ಸಿಟಿ ಆಫ್‌ ಅಪ್ಲೈಡ್‌ ಸೈನ್ಸಸ್‌, ಕೇಂಬ್ರಿಡ್ಜ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಸಪ್ತಗಿರಿ ಎನ್‌ಪಿಎಸ್‌ ಯೂನಿವರ್ಸಿಟಿ, ರೇವಾ ಯೂನಿವರ್ಸಿಟಿ.

ಗೋಲ್ಡ್‌ ಪ್ರಾಯೋಜಕರು:
ಈಸ್ಟ್‌ ಪಾಯಿಂಟ್‌ ಗ್ರೂಪ್‌ ಆಫ್‌ ಎಂಜಿನಿಯರಿಂಗ್‌, ಎಸ್‌ಜೆಬಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ದಿ ಆಕ್ಸ್‌ಫರ್ಡ್‌ ಎಜುಕೇಷನಲ್‌ ಇನ್‌ಸ್ಟಿಟ್ಯೂಟ್,‌ ಆರ್‌ಆರ್‌ ಇನ್‌ಸ್ಟಿಟ್ಯೂಷನ್ಸ್‌, ನಾಗಾರ್ಜುನ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌, ಎಎಂಸಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌, ಈಸ್ಟ್‌ ವೆಸ್ಟ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌.

 

ಕ್ರಿಯೇಟಿವ್‌ ಸ್ಟಾಲ್‌ ಪಾರ್ಟ್ನರ್ಸ್‌:
ರಾಮಯ್ಯ ಇನ್‌ಸ್ಟಿಟಯೂಟ್‌ ಆಫ್‌ ಟೆಕ್ನಾಲಜಿ, ಎಸ್‌ವಿಸಿಇ (ಶ್ರೀ ವೆಂಕಟೇಶ್ವರ ಕಾಲೇಜ್‌ ಆಫ್‌ ಇಂಜಿನಿಯರಿಂಗ್) ಬೆಂಗಳೂರು, ಪ್ರೆಸಿಡೆನ್ಸಿ ಯೂನಿರ್ವಸಿಟಿ, ನ್ಯೂ ಹಾರಿಜನ್‌ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌, ಕೆಎಲ್‌ಇ ಟೆಕ್ನಾಲಜಿ ಯೂನಿವರ್ಸಿಟಿ, ICFAI ಫೌಂಡೇಶನ್‌ ಫಾರ್‌ ಹೈಯರ್‌ ಎಜುಕೇಶನ್‌, ಪಾರುಲ್‌ ಯೂನಿವರ್ಸಿಟಿ, ಪ್ಲಾನ್‌ ಎಡು, ಫ್ಯೂಚರ್‌ ಮೆಡಿಕೊ.

ಸಿಲ್ವರ್‌ ಪ್ರಯೋಜಕರು:
ಚಾಣಕ್ಯ ಯೂನಿವರ್ಸಿಟಿ, ಪಿಇಎಸ್‌ ಯೂನಿವರ್ಸಿಟಿ, ದಯಾನಂದ ಸಾಗರ ಯೂನಿವರ್ಸಿಟಿ, ಬೃಂದಾವನ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಟ್‌, ಜಿಎಂ ಯೂನಿವರ್ಸಿಟಿ, ಎಐಎಂಎಸ್‌ ಇನ್‌ಸ್ಟಿಟ್ಯೂಟಸ್‌, ಎಬಿಬಿಎಸ್‌ ಬೆಂಗಳೂರು ಬಿ ಸ್ಕೂಲ್‌, ಕೃಪಾನಿಧಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್‌, ಎಸ್‌ಇಎ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್, ಸಿಟಿ ಕಾಲೇಜ್‌.

ಬ್ಯಾಂಕಿಂಗ್‌ ಪಾರ್ಟ್ನರ್‌:
ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ

ಬೆವರೇಜ್‌ ಪಾರ್ಟ್‌ನರ್‌
ಬಾಯರ್ಸ್‌ ಕಾಫಿ

ಗಿಫ್ಟ್‌ ಸ್ಪಾನ್ಸರ್‌
ಜೀನಿ ಸ್ಲಿಮ್‌, ವೇಯ್ಟ್‌ ಲಾಸ್‌ & ಎನರ್ಜಿ ಬೂಸ್ಟರ್‌.

ದಿನಾಂಕ: ಏಪ್ರಿಲ್‌ 26 ಮತ್ತು 27
ಸ್ಥಳ: ಗಾಯತ್ರಿ ವಿಹಾರ, ಅರಮನೆ ಮೈದಾನ, ಬೆಂಗಳೂರು
ಸಮಯ: ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 99000 60815/ 99000 60891

Share This Article