105ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು Expoದಲ್ಲಿ ಭಾಗಿ, ಪ್ರವೇಶ ಉಚಿತ: ಸಿ.ಕೆ ಹರೀಶ್ ಕುಮಾರ್

Public TV
1 Min Read

ಬೆಂಗಳೂರು: ಜೂನ್ 3 ಮತ್ತು 4 ರಂದು ಪಬ್ಲಿಕ್ ಟಿವಿ ಪ್ರಸ್ತುತಪಡಿಸುವ ವಿದ್ಯಾಪೀಠ (Vidyapeeta) 6ನೇ ಆವೃತ್ತಿ ನಡೆಯಲಿದ್ದು, 105ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಈ ಎಜುಕೇಶನ್ ಎಕ್ಸ್ ಪೋ (Education Expo) ದಲ್ಲಿ ಭಾಗಿಯಾಗಲಿವೆ ಎಂದು ಸಿಓಓ ಸಿ.ಕೆ ಹರೀಶ್ ಕುಮಾರ್ (C.K Harish Kumar) ಹೇಳಿದ್ದಾರೆ.

ಇದು ರಾಜ್ಯದಲ್ಲೇ ಅತ್ಯಂತ ದೊಡ್ಡ ಶೈಕ್ಷಣಿಕ ಮೇಳವಾಗಿದ್ದು, ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ (Palace Ground) ನ ಗಾಯತ್ರಿ ವಿಹಾರದಲ್ಲಿ ವೇದಿಕೆ ಸಿದ್ಧವಾಗ್ತಿದೆ. 105 ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಈ ಎಜುಕೇಶನ್ ಎಕ್ಸ್ ಪೋನಲ್ಲಿ ಭಾಗಿಯಾಗುತ್ತಿವೆ. ಪೋಷಕರು ಮತ್ತು ಮಕ್ಕಳು ಒಂದೇ ಸೂರಿನಡಿಯಲ್ಲಿ ಇಷ್ಟು ವಿದ್ಯಾಸಂಸ್ಥೆಗಳ ಮಾಹಿತಿ ಪಡೆಯಬಹುದು ಎಂದು ಅವರು ತಿಳಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ‘ವಿದ್ಯಾಪೀಠ’ಕ್ಕೆ ಬನ್ನಿ, On Spot ಗಿಫ್ಟ್ ಪಡ್ಕೊಳ್ಳಿ..!

ಜೊತೆಗೆ ವಿದ್ಯಾರ್ಥಿಗಳಿಗೆ ಸ್ಲೋ ಸೈಕಲ್ ರೇಸ್ ಕಾಂಪಿಟೇಷನ್ (Cycle Race Competition) ಇರಲಿದೆ. ಸೆಕೆಂಡ್ ಪಿಯುಸಿಯಲ್ಲಿ 60% ರಿಂದ 80%, 80% ರಿಂದ 95% ಮತ್ತು 95% ರಿಂದ 100% ಅಂಕ ತೆಗೆದ ವಿದ್ಯಾರ್ಥಿಗಳು ತಮ್ಮ ಮಾರ್ಕ್ಸ್ ಕಾರ್ಡ್ ಅನ್ನು ಡ್ರಾಫ್ ಬಾಕ್ಸ್ ಗೆ ಹಾಕಿದರೆ ಸ್ಪಾಟ್ ನಲ್ಲೇ ಬಹುಮಾನ ಸಿಗಲಿದೆ ಎಂದರು.

ವಿದ್ಯಾರ್ಥಿಗಳಿಗೆ ಪಿಕ್ ಆ್ಯಂಡ್ ಸ್ಪೀಕ್ (Pick And Speak) ಕೂಡ ಇದ್ದು‌, ಇದಕ್ಕೂ ಬಹುಮಾನ ಸಿಗಲಿದೆ. ಇಷ್ಟು ಮಾತ್ರವಲ್ಲದೇ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ಕೂಡ ನಡೆಯಲಿದೆ. ಇವೆಲ್ಲದಕ್ಕೂ ಮುಖ್ಯವಾಗಿ ಎಕ್ಸ್ ಪೋಗೆ ಪ್ರವೇಶ ಉಚಿತವಾಗಿದ್ದು, ಬೆಳಗ್ಗೆ 10 ರಿಂದ ಸಂಜೆ 7 ರವರಗೆ ನಡೆಯಲಿದೆ ಎಂದು ಹರೀಶ್ ಕುಮಾರ್ ವಿವರಿಸಿದರು.

Share This Article