1 ಸಾವಿರಕ್ಕೂ ಹೆಚ್ಚು ಮತಗಳು ಅಸಿಂಧು ಆಗಿವೆ, ಹೇಳಲು ನನಗೆ ನಾಚಿಕೆಯಾಗ್ತಿದೆ: ಹೊರಟ್ಟಿ

Public TV
1 Min Read

ಬೆಳಗಾವಿ: 1 ಸಾವಿರಕ್ಕೂ ಹೆಚ್ಚು ಮತಗಳು ಅಸಿಂಧು ಆಗಿದ್ದು, ಈ ಬಗ್ಗೆ ಹೇಳಲು ನನಗೆ ನಾಚಿಕೆಯಾಗುತ್ತಿದೆ ಎಂದು ಗೆಲುವಿನ ಬಳಿಕ ಬಸವರಾಜ್ ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ.

ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ ಬಳಿಕ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 7,070 ಮತಗಳನ್ನು ನಾನು ಪಡೆದುಕೊಂಡಿದ್ದೇನೆ. 9 ಸಾವಿರ ಮತಗಳು ಬರುತ್ತೆ ಅಂತಾ ಅಂದುಕೊಂಡಿದ್ದೆ. ಆದರೆ ಇನ್ನೂ 2 ಸಾವಿರ ಮತಗಳು ಕಡಿಮೆ ಬಂದಿವೆ. 1 ಸಾವಿರಕ್ಕೂ ಹೆಚ್ಚಿನ ಮತಗಳು ಅಸಿಂಧು ಆಗಿವೆ. ಈ ಬಗ್ಗೆ ಹೇಳಲು ನನಗೆ ನಾಚಿಕೆಯಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸತತ 8ನೇ ಬಾರಿಗೆ ಪರಿಷತ್‍ನಲ್ಲಿ ಗೆಲುವು ಸಾಧಿಸಿ ದಾಖಲೆ ಬರೆದ ಹೊರಟ್ಟಿ

ದೇಶದಲ್ಲೇ ಯಾರೂ 8 ಬಾರಿ ಗೆದ್ದಿಲ್ಲ: ದಾಖಲೆಯ ಗೆಲುವು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಭಾರತ ದೇಶದಲ್ಲೇ ಯಾರು ಸಹ 8 ಭಾರಿ ಗೆದ್ದಿಲ್ಲ. ಆದರೆ ನಾನು ಗೆದ್ದಿದ್ದೇನೆ, ನಾನು ದಾಖಲೆ ಮಾಡಿದ್ದೇನೆ. ರಾಜ್ಯದಲ್ಲಿ ಎರಡು ಸದನದಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ್ದೇನೆ. ಚುನಾವಣೆ ವೇಳೆ ನನ್ನ ಮೇಲೆ ಆರೋಪಗಳು ಕೇಳಿಬಂದಿವೆ. ಆದರೆ ನಾನು ಯಾವಾಗಲೂ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 2 ಶಿಕ್ಷಕ, 2 ಪದವೀಧರ ಕ್ಷೇತ್ರಗಳ ಫಲಿತಾಂಶ ಇಂದು- 3 ಪಕ್ಷಗಳ ಭವಿಷ್ಯ ನಿರ್ಧಾರ

ಸಚಿವ ಮತ್ತು ಸಭಾಪತಿ ವಿಚಾರಕ್ಕೆ, ನಾನು ಇನ್ನು ನಿರ್ಧಾರ ಮಾಡಿಲ್ಲ. ಶಿಕ್ಷಕರ ಸಮಸ್ಯೆಗಳು ಇದ್ದೆ ಇರುತ್ತವೆ. ಅವುಗಳನ್ನ ಸರಿಪಡಿಸುತ್ತಾ ಬಂದಿರುವೆ. ನಮ್ಮ ಅಭಿಲಾಷೆಗಳನ್ನ ದೇವರು ಈಡೇರಿಸಬೇಕು. ಶೀಘ್ರದಲ್ಲೇ ನೇಮಕಾತಿ ಮಾಡಲಾಗುವುದು. ಅಥಿತಿ ಉಪನ್ಯಾಸಕರದ್ದು ಜಟಿಲವಾದ ಸಮಸ್ಯೆ ಆಗಿದ್ದು, ನೇಮಕಾತಿ ಮಾಡಿಕೊಂಡರೆ ಈ ಸಮಸ್ಯೆ ಬರೋದಿಲ್ಲ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *