ಕೇವಲ 2 ತಿಂಗಳಿನಲ್ಲಿ ಟೆಕ್ ಕಂಪನಿಗಳಿಂದ 1.2 ಲಕ್ಷಕ್ಕೂ ಮಂದಿ ವಜಾ

Public TV
1 Min Read

ನವದೆಹಲಿ: ಜನವರಿ-ಫೆಬ್ರವರಿ ತಿಂಗಳಿನಲ್ಲಿ 417 ಕಂಪನಿಗಳು 1.2 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು (Employees) ಜಾಗತಿಕವಾಗಿ ವಜಾಗೊಳಿಸಿದೆ (Lay Off).

ಬಿಗ್ ಟೆಕ್‌ನಿಂದ ಸ್ಟಾರ್ಟ್ಅಪ್‌ನವರೆಗೆ 1,046 ಕಂಪನಿಗಳು 1.61 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು 2022ರಲ್ಲಿ ವಜಾಗೊಳಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಕಳೆದ ವರ್ಷದಿಂದ ಈ ಫೆಬ್ರವರಿವರೆಗೆ ಒಟ್ಟು 3 ಲಕ್ಷ ಟೆಕ್ (Tech) ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ವರ್ಗಾವಣೆ, ಅಧಿಕ ನೇಮಕ, ಕಂಪನಿಯ ಆರ್ಥಿಕ ಪರಿಸ್ಥಿತಿ, ಕೋವಿಡ್ 19 ಸಾಂಕ್ರಮಿಕದಿಂದ ಆದ ನಷ್ಟದಿಂದಾಗಿ ಟೆಕ್ ಕಂಪನಿಗಳು (Tech Company) ಹೆಚ್ಚು ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿವೆ.

ಕಳೆದ ವರ್ಷ ನವೆಂಬರ್‌ನಲ್ಲಿ ಘೋಷಿಸಿದಂತೆಯೇ ಕಾರ್ಯಕ್ಷಮತೆಯ ಆಧಾರದ ಮೇಲೆ ಮುಂದಿನ ತಿಂಗಳ ಆರಂಭದಲ್ಲಿ ಮತ್ತೊಂದು ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು ಎಂದು ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ ತಿಳಿಸಿದೆ. ಇದನ್ನೂ ಓದಿ: ಪುಟಿನ್‌ನನ್ನು ಅವರ ಆಪ್ತ ವಲಯದವರೇ ಕೊಲ್ತಾರೆ: ಝೆಲೆನ್ಸ್ಕಿ ಭವಿಷ್ಯ

ವೆಚ್ಚವನ್ನು ಕಡಿತಗೊಳಿಸಲು ಸ್ವೀಡಿಷ್ ಟಿಲಿಕಾಂ ಕಂಪನಿ ಎರಿಕ್ಸನ್ ಸುಮಾರು 8,500 ಉದ್ಯೋಗಿಗಳ ಪೈಕಿ 8% ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ.

ಜಾಗತಿಕ ಸಲಹಾ ಸಂಸ್ಥೆಯಾದ McKinsey & Co ಸುಮಾರು 2,000 ಉದ್ಯೋಗಗಳನ್ನು ಕಡಿತಗೊಳಿಸಲು ಯೋಚಿಸುತ್ತಿದೆ. ಮತ್ತೊಂದು ಪ್ರಮುಖ ಸಂಸ್ಥೆಯಾದ ಕೆಪಿಎಮ್‌ಜಿ ತನ್ನ ಉದ್ಯೋಗಿಗಳ ಪೈಕಿ ಶೇ.2ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದು ಇದು ಯುಎಸ್ ನಲ್ಲಿ ಸುಮಾರು 700 ಉದ್ಯೋಗಿಗಳ ಮೇಲೆ ಪರಿಣಾಮವನ್ನು ಬೀರಲಿದೆ. ಇದನ್ನೂ ಓದಿ: ನೆಟ್‌ನಲ್ಲಿ ಬೆವರಳಿಸಿದ ಕೊಹ್ಲಿ – ನಿರ್ಣಾಯಕ ಪಂದ್ಯದ ಗೆಲುವಿಗೆ ಭಾರತ ಭರ್ಜರಿ ತಯಾರಿ

Share This Article
Leave a Comment

Leave a Reply

Your email address will not be published. Required fields are marked *