ತಮನ್ನಾ ಮೇಲೆ ಹೆಚ್ಚು ಪ್ರೀತಿ ಆಗಿದೆ: ಮತ್ತೆ ಡೇಟಿಂಗ್ ಖಚಿತ ಪಡಿಸಿದ ವಿಜಯ್

By
2 Min Read

ಕ್ಷಿಣದ ಖ್ಯಾತ ನಟಿ ತಮನ್ನಾ (Tamannaah) ಮತ್ತು ಬಾಲಿವುಡ್ ನಟ ವಿಜಯ್ ವರ್ಮಾ (Vijay Varma) ಲವ್ವಿಡವ್ವಿ ವಿಚಾರ ಗುಟ್ಟಿನ ಸಂಗತಿಯೇನೂ ಅಲ್ಲ. ಆದರೂ, ಈ ವಿಚಾರವಾಗಿ ಆಗಾಗ್ಗೆ ಇಬ್ಬರೂ ಸುದ್ದಿ ಆಗುತ್ತಾರೆ. ನಿನ್ನೆಯಷ್ಟೇ ಮಾಧ್ಯಮಗಳ ಜೊತೆ ಮಾತನಾಡಿರುವ ವಿಜಯ್ ವರ್ಮಾ, ‘ನನಗೆ ತಮನ್ನಾ ಮೇಲೆ ಮತ್ತಷ್ಟು ಪ್ರೀತಿಯಾಗಿದೆ (Love). ಹೆಚ್ಚೆಚ್ಚು ಪ್ರೀತಿ ಮೂಡುತ್ತಿದೆ’ ಎಂದು ಹೇಳುವ ಮೂಲಕ ತಮ್ಮಿಬ್ಬರ ನಡುವಿನ ಡೇಟಿಂಗ್ ಅನ್ನು ಖಚಿತ ಪಡಿಸಿದ್ದಾರೆ.

ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ವರ್ಮಾ ಜೊತೆ ತಮನ್ನಾ ಲಿಪ್ ಲಾಕ್ ಮಾಡಿಕೊಂಡ ವೀಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ವಿಜಯ್‌ ವರ್ಮಾ ಜೊತೆಗಿನ ಡೇಟಿಂಗ್ (Dating) ವಿಚಾರವನ್ನು ತಳ್ಳಿ ಹಾಕಿದ್ದರು ತಮನ್ನಾ. ನಾವಿಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ಇಂಥ ವದಂತಿಗಳು ಎಲ್ಲಾ ಕಡೆ ಹರಿದಾಡುತ್ತಲೇ ಇರುತ್ತದೆ. ಇಂಥ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಮತ್ತು ಸ್ಪಷ್ಟೀಕರಣ ಕೊಡುವ ಅನಿವಾರ್ಯತೆ ಇಲ್ಲ. ಅದರ ಬಗ್ಗೆ ನಾನು ಹೆಚ್ಚು ಏನು ಹೇಳಲ್ಲ ಎಂದಿದ್ದರು.

ಆದರೆ, ನಂತರದ ದಿನಗಳಲ್ಲಿ ಡೇಟಿಂಗ್ ಕುರಿತು ಭಿನ್ನ ಪ್ರತಿಕ್ರಿಯೆ ನೀಡಿದ್ದರು ತಮನ್ನಾ. ವಿಜಯ್ ವರ್ಮಾ ಜೊತೆ ತಾವು ಲವ್ ಮಾಡುತ್ತಿರುವ ವಿಚಾರವನ್ನು ಒಪ್ಪಿಕೊಂಡಿದ್ದರು. ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ ʻಲಸ್ಟ್ ಸ್ಟೋರಿ -2′ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಸೆಟ್‌ನಲ್ಲಿ ಮೊದಲು ಭೇಟಿಯಾಗಿದ್ದರು. ಅಲ್ಲಿಂದ ಪ್ರಾರಂಭವಾದ ಇವರ ಸ್ನೇಹ ಬಳಿಕ ಪ್ರೀತಿಯಾಗಿದೆ ಎಂದು ಹೇಳಿದ್ದರು. ಅದರ ಮುಂದುವರೆದ ಭಾಗವಾಗಿ ಹೊಸ ವರ್ಷಾಚರಣೆ ವೇಳೆ ಇಬ್ಬರೂ ತಬ್ಬಿಕೊಂಡು, ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನೂ ಓದಿ:ರಿಷಬ್ ನಿರ್ಮಾಣದ ‘ಶಿವಮ್ಮ’ನಿಗೆ ಮತ್ತೆ ಅಂತಾರಾಷ್ಟ್ರೀಯ ಪ್ರಶಸ್ತಿ

ಪ್ರೇಮಿಗಳ ದಿನದಂದು ತಮನ್ನಾಗೆ ವಿಜಯ್ ವರ್ಮಾ ವಿಶೇಷವಾಗಿ ವಿಶ್ ಮಾಡಿದ್ದರು. ತನ್ನ ಪ್ರೇಮಿಯ ಜೊತೆಗಿನ ಫೋಟೋವನ್ನು ವಿಜಯ್ ವರ್ಮಾ ಶೇರ್ ಮಾಡಿದ್ದರು. ವಿಜಯ್ ಅವರು ಕಾಲೊಂದರ ಫೋಟೋವನ್ನು ಶೇರ್ ಮಾಡಿ ಹಾರ್ಟ್ ಇಮೋಜಿ ಇರಿಸಿದ್ದರು. ಅದು ತಮನ್ನಾ ಕಾಲು ಎಂದು ಹೇಳಲಾಗಿತ್ತು. ತಮನ್ನಾ ಧರಿಸಿದ್ದ ಶೋ ಮತ್ತು ಜರ್ಕಿನ್ ಫೋಟೋಗಳನ್ನು ಶೇರ್ ಮಾಡಿ ಇದು ಪಕ್ಕಾ ತಮನ್ನಾ ಅವರ ಕಾಲು ಎಂದಿದ್ದರು.

ವಿಜಯ್ ವರ್ಮಾ ತಮ್ಮ ಪ್ರೀತಿಯ ವಿಷಯದಲ್ಲಿ ಸ್ಪಷ್ಟವಾಗಿದ್ದರೂ, ತಮನ್ನಾ ಮಾತ್ರ ಅದನ್ನು ಹೇಳಿಕೊಳ್ಳಲು ತಯಾರು ಇರಲಿಲ್ಲ. ಯಾರೇ ಕೇಳಿದರೂ ಅದನ್ನು ಗಾಸಿಪ್ ಎಂದು ತೇಲಿಸಿ ಬಿಡುತ್ತಿದ್ದರು. ನಂತರ ವಿಜಯ್ ಜೊತೆಗಿನ ಪ್ರೀತಿಯನ್ನು ಒಪ್ಪಿಕೊಂಡಿದ್ದರು. ಒಂದು ಸಲ ಒಪ್ಪಿಕೊಂಡು ಮತ್ತೊಂದು ಸಲ ಗಾಸಿಪ್ ಎಂದು ಹೇಳುತ್ತಾ ಡೇಟಿಂಗ್ ವಿಚಾರದಲ್ಲಿ ಇಬ್ಬರೂ ಸದಾ ಸುದ್ದಿಯಲ್ಲಿರುತ್ತಾರೆ ಈ ಸ್ಟಾರ್ ಜೋಡಿ.

Web Stories

Share This Article
ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್ ಬೋಲ್ಡ್ ಅವತಾರ ತಾಳಿದ ಪ್ರಣೀತಾ ಮಲ್ಲಿಗೆ ಹೂವಿನ ರವಿಕೆ ಧರಿಸಿ ರಾಗಿಣಿ ಮಿಂಚಿಂಗ್