ಮೇ 31ರಿಂದ ದೇಶದಲ್ಲಿ ಮುಂಗಾರು ಆರಂಭ – ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಎಂಟ್ರಿ

Public TV
1 Min Read

ಬೆಂಗಳೂರು: ಬಿರು ಬಿಸಿಲಿನಿಂದ ತತ್ತರಿಸಿದ ಜನತೆಗೆ ಭಾರತೀಯ ಹವಾಮಾನ ಇಲಾಖೆ (IMD) ಶುಭಸುದ್ದಿ ನೀಡಿದೆ. ಮೇ 31ರಿಂದ ದೇಶದಲ್ಲಿ ಮುಂಗಾರು ಮಳೆ (Monsoon Rain) ಆರಂಭವಾಗುವ ನಿರೀಕ್ಷೆಯಿದೆ ಎಂದು ಐಎಂಡಿ ತಿಳಿಸಿದೆ.

ಮೇ 19ರಂದು ನೈಋತ್ಯ ಮುಂಗಾರು ಮಾರುತವು ದಕ್ಷಿಣ ಅಂಡಮಾನ್, ಬಂಗಾಳಕೊಲ್ಲಿಯ ಆಗ್ನೇಯ ಭಾಗ ಹಾಗೂ ನಿಕೋಬಾರ್ ದ್ವೀಪಗಳನ್ನು ಪ್ರವೇಶಿಸಲಿದ್ದು, ಮೇ 31ಕ್ಕೆ ಮೊದಲಿಗೆ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ ಎನ್ನಲಾಗಿದೆ. ಈ ದಿನಾಂಕದಿಂದ ಮೂರ್ನಾಲ್ಕು ದಿನ ಮುಂಚಿತವಾಗಿಯೂ ಅಥವಾ ನಂತರ ಮುಂಗಾರು ಬರುವ ಸಾಧ್ಯತೆಯಿದೆ. ಇದನ್ನೂ ಓದಿ: ಮಹಾರಾಷ್ಟ್ರ ಸಿಎಂಗೆ ಸಚಿವ ಖಂಡ್ರೆ ಖಡಕ್ ವಾರ್ನಿಂಗ್

ಜೂನ್ ಮೊದಲ ವಾರದಲ್ಲಿ ಮುಂಗಾರು ರಾಜ್ಯಕ್ಕೆ ಎಂಟ್ರಿ ಕೊಡಲಿದೆ. ಜೂನ್ 7 ಅಥವಾ 8 ರಂದು ರಾಜ್ಯದಲ್ಲಿ ಮುಂಗಾರು ಮಳೆ ಪ್ರಾರಂಭವಾಗಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಇದನ್ನೂ ಓದಿ: ತಿಮಿಂಗಿಲ ಪರಮೇಶ್ವರ್ ಪಕ್ಕದಲ್ಲೇ ಕುಳಿತಿದೆ: ಹೆಚ್‌ಡಿಕೆ

Share This Article