ಶವದ ಮುಂದೆ ಕೋತಿ ಕಿರಿಕ್ – ಅಂತ್ಯ ಸಂಸ್ಕಾರಕ್ಕೆ ಬಿಡದೇ ಕಾಟ

Public TV
1 Min Read

ಕಲಬುರಗಿ: ಜಿಲ್ಲೆಯ ಮಾಲಗತ್ತಿ ಗ್ರಾಮದ ಶ್ಯಾಮಲಾ ಎಂಬುವವರು ನಿನ್ನೆ ಮಧ್ಯಾಹ್ನ ಸಾವನ್ನಪ್ಪಿದರು. ಬಳಿಕ ಸಂಜೆ ಸಾವಿನ ಮನೆಗೆ ಬಂದ ಕೋತಿಯೊಂದು ಶವ ಸಂಸ್ಕಾರ ಮಾಡಲು ಬಿಡದೇ ಸಾವಿನ ಮನೆಯಲ್ಲೇ ಕೂತಿರುವ ವಿಚಿತ್ರ ಘಟನೆಯೊಂದು ನಡೆದಿದೆ.

ಕಾಯಿಲೆಯಿಂದ ಬಳಲುತ್ತಿದ್ದ ಶ್ಯಾಮಲಾ ನಿನ್ನೆ ಮಧ್ಯಾಹ್ನ ಸಾವನ್ನಪ್ಪಿದರು. ಬಳಿಕ ಸಂಜೆ ಕೋತಿಯೊಂದು ಶ್ಯಾಮಲಾ ಮನೆಗೆ ಬಂದಿದೆ. ಈ ವೇಳೆ ಗ್ರಾಮಸ್ಥರು ಹಾಗೂ ಸಂಬಂಧಿಕರು ಶವದ ಮುಂದೆ ಕೂತಿದ್ದರು. ಬಳಿಕ ಕೋತಿ ಕೂಡ ಶವದ ಮುಂದೆ ಬಂದು ಕೂತಿದೆ ಆ ಬಳಿಕ ಯಾರನ್ನು ಕೂಡ ಶವವನ್ನು ಮುಟ್ಟಲು ಬಿಡುತ್ತಿಲ್ಲ. ಇದನ್ನೂ ಓದಿ: ಅರ್ಚಕನ ಜೊತೆ ಪರಾರಿಯಾಗಿದ್ದ ವಿವಾಹಿತೆ ಕಾಡಂಚಿನಲ್ಲಿ ಪ್ರತ್ಯಕ್ಷ – ಮದ್ವೆಯಾಗೋದಾಗಿ ನಂಬಿಸಿ ಮೋಸ

ನಿನ್ನೆ ಮಧ್ಯಾಹ್ನದಿಂದಲೇ ಸಾವಿನ ಮನೆಯಲ್ಲಿ ಶವದ ಪಕ್ಕದಲ್ಲಿ ಬಂದು ಕೂತಿರುವ ಕೋತಿಯಿಂದಾಗಿ ಯಾರೂ ಕೂಡ ಹತ್ತಿರ ಬರಲು ಪ್ರಯತ್ನ ಮಾಡುತ್ತಿಲ್ಲ. ಕೋತಿಯನ್ನು ಶವದ ಬಳಿಯಿಂದ ಓಡಿಸಲು ಪ್ರಯತ್ನಿಸಿದರೂ ಕೂಡ ಕೋತಿ ಮಾತ್ರ ಜಾಗ ಬಿಟ್ಟು ಕದಲುತ್ತಿಲ್ಲ. ಹಾಗಾಗಿ ಅಂತ್ಯ ಸಂಸ್ಕಾರ ಮಾಡೋದಕ್ಕೆ ಶವ ತೆಗೆದುಕೊಂಡು ಹೋಗಲು ಜನ ಭಯ ಪಡುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಇಲಾಖೆಯವರು ಕ್ರಮ ಕೈಗೊಳ್ಳಬೇಕಾಗಿದೆ. ಇದನ್ನೂ ಓದಿ: ಯಾರು ಸ್ತ್ರೀಯರಿಗೆ ಅಪಮಾನ ಮಾಡುತ್ತಾರೋ ಅವರ ಪತನ ನಿಶ್ಚಿತ – ಕಂಗನಾ ಹಳೇ ವೀಡಿಯೋ ವೈರಲ್

ಈ ನಡುವೆ ಕೋತಿಯ ಈ ವಿಚಿತ್ರ ಉಪಟಳದಿಂದಾಗಿ ಸಂಬಂಧಿಕರು ಶವಸಂಸ್ಕಾರ ಮಾಡಲಾಗದೆ ಪರದಾಡುವಂತಾಗಿದೆ. ಜೊತೆಗೆ ಈ ಹಿಂದೆ ಎಲ್ಲೂ ಕೂಡ ಈ ಕೋತಿ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಏಕಾಏಕಿ ಈ ರೀತಿ ನಡೆಯುತ್ತಿರುವುದು ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *