ಮನೆಗೆ ನುಗ್ಗಿ ಕುಕ್ಕರ್ ಓಪನ್ ಮಾಡಿ ರೈಸ್ ತಿನ್ನುತ್ತೆ ಕೋತಿ -ವಿಡಿಯೋ ನೋಡಿ

Public TV
1 Min Read

ಮೈಸೂರು: ಕೋತಿಗಳು ಪ್ರಯಾಣಿಕರಿಗೆ, ದೇವಾಲಯದಲ್ಲಿ ಭಕ್ತರಿಗೆ ತೊಂದರೆ ಕೊಡುವುದು ನಿಮಗೆ ಗೊತ್ತೇ ಇದೆ. ಆದರೆ ಈಗ ಮಂಗಗಳ ಹಾವಳಿ ಮತ್ತಷ್ಟು ಹೆಚ್ಚಾಗಿದ್ದು ಮನೆ ಒಳಗಡೆ ನುಗ್ಗಿ ಅಡುಗೆ ಮನೆಯ ಕುಕ್ಕರ್ ಓಪನ್ ಮಾಡಿ ಅನ್ನವನ್ನು ತಿನ್ನುವನ್ನು ತಿಂದಿದೆ.

ಮೈಸೂರಿನ ಜೆಪಿ ನಗರದಲ್ಲಿ ಮಂಗಗಳು ಮನೆಗೆ ನುಗ್ಗಿ ಸ್ಥಳೀಯರಿಗೆ ಕಿರಿಕಿರಿ ಕೊಡುತ್ತಿವೆ. ಮನೆಗೆ ನುಗ್ಗುವ ಕೋತಿಗಳು ವಸ್ತುಗಳನ್ನ ಚೆಲ್ಲಾಪಿಲ್ಲಿ ಮಾಡಿ ಹೋಗುತ್ತವೆ. ಇನ್ನೂ ಮಂಗಗಳನ್ನು ಓಡಿಸಲು ಹೋದವರ ಮೇಲೆ ಎರಗಲು ಬರುತ್ತವೆ. ಈ ಸಂಬಂಧ ಪುರುಷೋತ್ತಮ್ ಎಂಬವರು ಪಾಲಿಕೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಸ್ಥಳೀಯರು ಪಾಲಿಕೆಗೆ ಪತ್ರ ಬರೆದರೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಮಂಗಗಳ ಸಮಸ್ಯೆಯನ್ನು ಬಗೆಹರಿಸುವಂತೆ ಸ್ಥಳೀಯರು ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

https://youtu.be/K7Efo7GLcts

Share This Article
Leave a Comment

Leave a Reply

Your email address will not be published. Required fields are marked *