ವಿಜಯಪುರ: ಬೀದಿ ನಾಯಿಗಳ ದಾಳಿಯಿಂದ ಮಂಗವೊಂದು ಸಾವನ್ನಪ್ಪಿದ್ದ ಘಟನೆ ವಿಜಯಪುರ ನಗರದ ನಾಗೇಶ್ವರ ಕಾಲೋನಿಯಲ್ಲಿ ನಡೆದಿದೆ.
ಸುಮಾರು 12 ವರ್ಷದಿಂದ ಈ ಮಂಗವು ನಾಗೇಶ್ವರ ಕಾಲೋನಿಯ ವಾಸವಾಗಿತ್ತು. ಹೀಗಾಗಿ ಪ್ರತಿನಿತ್ಯ ಎಲ್ಲರ ಮನೆಯಲ್ಲಿ ಉಪಹಾರ ಸೇವಿಸಿ ಜೀವನ ಸಾಗಿಸುತ್ತಿತ್ತು. ಆದರೆ ಇಂದು ಬೆಳಗ್ಗೆ ರಸ್ತೆಯಲ್ಲಿ ಹೋಗುವಾಗ ಬೀದಿ ನಾಯಿಗಳು ಮಂಗನ ಮೇಲೆ ಏಕಾಏಕಿ ದಾಳಿ ನಡೆಸಿ ಕಚ್ಚಿ ಸಾಯಿಸಿವೆ.
ಮನೆಯ ಮಗನಂತಿದ್ದ ಮಂಗನ ಸಾವಿನಿಂದ ಕಾಲೋನಿಯ ನಿವಾಸಿಗಳು ದು:ಖ ತಪ್ತರಾಗಿದ್ದು, ಕಾಲೋನಿಯ ಸಮಸ್ತ ನಿವಾಸಿಗಳು ಮಂಗನಿಗೆ ಪೂಜೆ ಸಲ್ಲಿಸಿ ನಂತರ ಕಾಲೋನಿಯಲ್ಲಿ ಮೆರವಣಿಗೆ ನಡೆಸಿ ಹಿಂದು ಧರ್ಮದಂತೆ ಅಂತ್ಯಸಂಸ್ಕಾರ ನೆರೆವೇರಿಸಿದ್ದಾರೆ.