ಮಂಡ್ಯ| ಹಣಕಾಸು ವಿಚಾರಕ್ಕೆ ಹಲ್ಲೆಗೊಳಗಾಗಿದ್ದ ಯುವಕ 13 ದಿನಗಳ ಬಳಿಕ ಸಾವು

Public TV
1 Min Read

ಮಂಡ್ಯ: ಹಣಕಾಸು ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಹಲ್ಲೆಗೊಳಗಾಗಿದ್ದ ಯುವಕ 13 ದಿನಗಳ ಬಳಿಕ ಸಾವನ್ನಪ್ಪಿರುವ ಘಟನೆ ಮದ್ದೂರು ತಾಲೂಕಿನ ಮುಟ್ಟನಹಳ್ಳಿಯಲ್ಲಿ ನಡೆದಿದೆ.

ಮುಟ್ಟನಹಳ್ಳಿಯ ಸುಮಂತ್ ಮೃತ ಯುವಕ. ಗ್ರಾಮದ ಅಂಬರೀಶ್ ಹೆಂಡತಿ ಜೊತೆ ಹಣಕಾಸು ವಿಚಾರಕ್ಕೆ ಯುವಕ ಗಲಾಟೆ ಮಾಡಿಕೊಂಡಿದ್ದ. ಘಟನೆ ಬಳಿಕ ಸುಮಂತ್‌ನನ್ನ ಕರೆಸಿಕೊಂಡಿದ್ದ ಅಂಬರೀಶ್ ಬೆಂಬಲಿಗರು ಹಲ್ಲೆ ನಡೆಸಿದ್ದರು.

ಅಂಬರೀಶ್, ರಜನಿಕಾಂತ್ ಹಾಗೂ ಲೋಕೇಶ್ ಹಣಕಾಸು ವಿಚಾರವಾಗಿ ಜಗಳ ತೆಗೆದಿದ್ದರು. ಮಾತಿನ ಚಕಮಕಿ ವೇಳೆ ಸುಮಂತ್ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದರು. ಗಲಾಟೆಯಲ್ಲಿ ಗಾಯಗೊಂಡು ಸುಮಂತ್ ಕೋಮಾ ಸ್ಥಿತಿ ತಲುಪಿದ್ದ. ಗಾಯಾಳುಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೇ ನಿನ್ನೆಯಷ್ಟೇ ಯುವಕ ಮೃತಪಟ್ಟಿದ್ದಾನೆ. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article