ಕೊನೆಗೂ ತನ್ನ ಮಗುವಿನ ತಂದೆ ಬಗ್ಗೆ ಗುಟ್ಟು ರಟ್ಟು ಮಾಡಿದ ಇಲಿಯಾನಾ

Public TV
2 Min Read

ಟಿ ಇಲಿಯಾನಾ (Ileana D’cruze) ಅವರು ಬಾಲಿವುಡ್‌ನ (Bollywood) ಹಾಟ್ ಟಾಪಿಕ್ ಆಗಿದ್ದಾರೆ. ಮದುವೆಯಾಗದೇ ಚೊಚ್ಚಲ ಮಗುವನ್ನ ಸ್ವಾಗತಿಸುತ್ತಿರುವ ನಟಿ ಇದೀಗ ತನ್ನ ಬಾಯ್‌ಫ್ರೆಂಡ್ ಫೋಟೋವನ್ನ ಹಂಚಿಕೊಂಡಿದ್ದಾರೆ. ಕೊನೆಗೂ ಮಗುವಿನ ತಂದೆ ಯಾರು ಎಂದು ಇಲಿಯಾನಾ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಖ್ಯಾತ ನಟ ಧನುಷ್ ಮೇಲೆ ನಿಷೇಧದ ತೂಗುಕತ್ತಿ

ಕೆಲ ವರ್ಷಗಳಿಂದ ಸಿನಿಮಾ ರಂಗದಿಂದಲೇ ದೂರವಿದ್ದ ನಟಿ ಇಲಿಯಾನಾ, ಇದೀಗ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಿಂದಿ, ತೆಲುಗು, ತಮಿಳು, ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದ ಇವರು, ಇನ್ನೂ ಮದುವೆ ಆಗಿಲ್ಲ. ಆದರೂ, ತಾಯಿ ಆಗ್ತಿದ್ದೀನಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಇತ್ತೀಚಿಗೆ ಅಚ್ಚರಿ ಮೂಡಿಸಿದ್ದರು.

ತಾವು ತಾಯಿಯಾಗುತ್ತಿರುವ ವಿಚಾರವನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಫೋಟೋದಲ್ಲಿ ಚಿಕ್ಕದೊಂದು ಟೀ ಶರ್ಟ್‌ ಹಾಗೂ ಕುತ್ತಿಗೆಯಲ್ಲಿ ಮಾಮಾ ಎನ್ನುವ ಲಾಕೆಟ್ ಇದೆ. ಆ ಟೀ ಶರ್ಟ್‌ನಲ್ಲಿ ಅಂಡ್ ಸೋ ದಿ ಅಡ್ವೆಂಚರ್ ಬಿಗಿನ್ಸ್ ಎಂದು ನಟಿ ಪೋಸ್ಟ್ ಮಾಡಿದ್ದರು. ಬಳಿಕ ಈ ಜೀವದಲ್ಲಿ ಮತ್ತೊಂದು ಜೀವ ಸೃಷ್ಟಿಯಾಗುವುದು ಅದ್ಬುತ ಹಾಗೂ ತಾಯಿಯಾಗುವುದೇ ಶ್ರೇಷ್ಠ ಎಂದು ಇಲಿಯಾನಾ ಹೇಳಿದ್ದರು. ಗರ್ಭಿಣಿಯಾಗಿರುವುದು ನಮಗೆ ಸಿಗುವ ತುಂಬಾ ಸುಂದರವಾದ ಆಶೀರ್ವಾದ. ನಾನು ಅದೃಷ್ಟಶಾಲಿ. ನನ್ನೊಳಗೆ ಒಂದು ಜೀವ ಬೆಳೆಯುತ್ತದೆ ಎಂದು ಅರಿತುಕೊಳ್ಳುವುದೇ ಎಷ್ಟು ಸುಂದರವಾಗಿದೆ ಎಂದು ಎಮೋಷನಲ್ ಆಗಿ ನಟಿ ಬರೆದುಕೊಂಡಿದ್ದರು.

ಇದೀಗ ಮತ್ತೆ ಮಿಸ್ಟರಿ ಮ್ಯಾನ್ ಬಾಯ್‌ಫ್ರೆಂಡ್ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ. ಇಷ್ಟು ದಿನ ಇಲಿಯಾನಾ ಪ್ರೆಗ್ನೆಂಟ್‌ ಆಗಲು ಕಾರಣ ಯಾರು ಎನ್ನುವ ವಿಚಾರ ತಿಳಿಸಿರಲಿಲ್ಲ. ಇದೀಗ ಇಲಿಯಾನಾ ಬಾಯ್ ಫ್ರೆಂಡ್ ಫೋಟೋ ಹಂಚಿಕೊಂಡಿದ್ದಾರೆ. ಆದ್ರೆ ಆತನ ಮುಖ ಮಾತ್ರ ಕಾಣಿಸಿಲ್ಲ. ಮುಖ ಕಾಣದ ರೀತಿ ಫೋಟೋ ಹಾಕಿದ್ದಾರೆ.

ಅಂದ್ಹಾಗೆ, ನಟಿ ಕತ್ರಿನಾ ಕೈಫ್ ಸಹೋದರ ಸಭಾಸ್ಟಿನ್ ಜೊತೆ ಇಲಿಯಾನಾ ಎಂಗೇಜ್ ಆಗಿದ್ದಾರೆ ಎನ್ನಲಾಗಿದೆ. ಸಾಕಷ್ಟು ಸಮಯದಿಂದ ಇಬ್ಬರು ಡೇಟ್‌ ಮಾಡ್ತಿದ್ದಾರೆ. ಕೆಲ ತಿಂಗಳುಗಳ ಹಿಂದೆ ಕತ್ರಿನಾ- ವಿಕ್ಕಿ ಕೌಶಲ್‌ ಕುಟುಂಬದ ಜೊತೆ ನಟಿ ಟ್ರಿಪ್‌ ಮಾಡಿದ್ದರು. ಈ ಕುರಿತ ಫೋಟೋ ಸಖತ್‌ ವೈರಲ್‌ ಆಗಿತ್ತು. ಗ್ರೂಪ್‌ ಫೋಟೋದಲ್ಲಿ ಕತ್ರಿನಾ ಸಹೋದರ ಸಭಾಸ್ಟಿನ್‌, ಇಲಿಯಾನಾ ಹೈಲೆಟ್‌ ಆಗಿದ್ರು.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್