ಭಿಕ್ಷುಕನ ಜೊತೆ ಪತ್ನಿ ರೊಮ್ಯಾನ್ಸ್ ನೋಡಿ ಬೆಚ್ಚಿಬಿದ್ದ ಪತಿ

Public TV
2 Min Read

ಬ್ರೆಸಿಲಿಯಾ: ಭಿಕ್ಷುಕನ ಜೊತೆ ಪತ್ನಿ ರೊಮ್ಯಾನ್ಸ್ ಮಾಡುತ್ತಿರುವುದನ್ನು ನೋಡಿದ ಪತಿ ಶಾಕ್ ಆಗಿರುವ ಘಟನೆ ಬ್ರೆಜಿಲ್‍ನಲ್ಲಿ ನಡೆದಿದ್ದು, ಸಂಪೂರ್ಣ ದೃಶ್ಯಗಳು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.

ಜಿಮ್ ಟ್ರೈನರ್ ಎಡ್ವರ್ಡೊ ಅಲ್ವೆಸ್ ಪತ್ನಿಯನ್ನು ಹುಡುಕುತ್ತ ಕಾರನ್ನು ಕಂಡು ಪಾರ್ಕ್ ಮಾಡಿದ್ದ ಕಡೆ ಬಂದಿದ್ದಾನೆ. ಕಾರಿನ ವಿಂಡ್‍ಶೀಲ್ಡ್ ಇಣುಕಿದಾದ ಪತ್ನಿ ಬೇರೆ ವ್ಯಕ್ತಿ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ನೋಡಿದ್ದಾನೆ. ಈ ದೃಶ್ಯ ನೋಡಿ ಆತ ಕೋಪಗೊಂಡು ವಿಂಡ್‍ಶೀಲ್ಡ್ ಒಡೆದು ಹಾಕಲು ಪ್ರಯತ್ನ ಮಾಡಿದ್ದಾನೆ. ಹೊರಗಡೆಯಿಂದಲೇ ಪತ್ನಿ ಜೊತೆಗಿಂದ್ದ ವ್ಯಕ್ತಿಯನ್ನು ಒಡೆಯಲು ಪ್ರಯತ್ನ ಮಾಡಿದ್ದಾನೆ. ಇದನ್ನೂ ಓದಿ: ‘ದಿ ಕಾಶ್ಮೀರ್‌ ಫೈಲ್ಸ್’ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸಹಾಯ ಮಾಡುವುದಿಲ್ಲ: ಸಂಜಯ್ ರಾವತ್

Personal trainer finds church-going wife 'cheating on him' with homeless man [Video] | Daily Mail Online

ಪತಿ ತನ್ನನ್ನು ನೋಡಿರುವುದನ್ನು ತಿಳಿದ ಪತ್ನಿ ಅಲ್ಲಿಂದ ಓಡಲು ಪ್ರಯತ್ನ ಮಾಡಿದ್ದು, ಭಿಕ್ಷುಕ ಅರೆಬೆತ್ತಲೆಯಾಗೇ ಕಾರಿನಿಂದ ಪರಾರಿಯಾಗಲು ಪ್ರಯತ್ನ ಮಾಡುತ್ತಾನೆ. ಆದರೆ ಮೊದಲೇ ಕೋಪದಲ್ಲಿದ್ದ ಅಲ್ವೆಸ್ ಆತನನ್ನು ಹಿಡಿದು ಥಳಿಸುತ್ತಾನೆ. ನಂತರ ಪತ್ನಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ. ಈ ಇಡೀ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.

ಈ ಘಟನೆ ಮಾ.10ರಂದು ನಡೆದಿದ್ದು, ಬ್ರೆಜಿಲ್‍ನ ಫೆಡರಲ್ ಜಿಲ್ಲೆಯ ಜರ್ದಿಮ್ ರೊರಿಝ್‍ನಲ್ಲಿ ನಡೆದಿದೆ. ಅಲ್ವೇಸ್ ಪತ್ನಿ ಭಕ್ತಿ ಹೆಚ್ಚಿದ್ದು, ಚರ್ಚಿಗೆ ಹೆಚ್ಚು ಹೋಗುತ್ತಿದಳು ಎಂದು ಖಾಸಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಈ ವೇಳೆಯೇ ಪತ್ನಿ, ನಾನು ದೇವರಿಂದ ನನಗೆ ಒಂದು ಸಂದೇಶ ಕೇಳಿಸಿತು. ಈ ಭಿಕ್ಷುಕನಿಗೆ ಸಹಾಯ ಮಾಡುವಂತೆ ದೇವರು ನನಗೆ ಹೇಳಿದರು. ಅದಕ್ಕೆ ಈ ಕೆಲಸ ಮಾಡಿದ್ದೇನೆ ಎಂದು ಪತಿಗೆ ತಿಳಿಸಿದ್ದಾಳೆ. ಸುದ್ದಿ ತಿಳಿದ ಪತಿ ತೀವ್ರ ಆಘಾತಗೊಂಡಿದ್ದಾನೆ.

ಘಟನೆ ವಿವರ: ಅಲ್ವೆಸ್ ಪತ್ನಿ ಮತ್ತು ತಾಯಿ ಭಿಕ್ಷುಕನಿಗೆ ಆಶ್ರಯ ನೀಡಬೇಕು ಎಂದು ಮನೆಯಿಂದ ಬಂದಿದ್ದಾರೆ. ಆದರೆ ಇಬ್ಬರು ಒಟ್ಟಿಗೆ ಇಲ್ಲದೆ ಬೇರೆಕಡೆ ಇರುವುದು ತಿಳಿದುಬಂದಿದೆ. ಪತ್ನಿಗೆ ಎಷ್ಟೇ ಫೋನ್ ಟ್ರೈ ಮಾಡಿದ್ರೂ ಆಕೆ ಫೋನ್ ರಿಸಿವ್ ಮಾಡಿಲ್ಲ. ನಂತರ ಆಕೆಯನ್ನು ಹುಡುಕಿಕೊಂಡು ಬರುತ್ತಿದ್ದ ಪತಿಗೆ ಆಕೆಯ ಕಾರ್ ಕಾಣಿಸಿದೆ. ಇದನ್ನೂ ಓದಿ: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿವೆ ಡೇಜರಸ್ ಫ್ಲೈ ಓವರ್‌ಗಳು

ಕಾರನ್ನು ಇಣುಕಿ ನೋಡಿದಾಗ ಪತ್ನಿ ಭಿಕ್ಷುಕನ ಜೊತೆ ಲೈಂಗಿಕ ಕ್ರಿಯೆಯಲ್ಲಿ ಇದ್ದಳು. ಇದನ್ನ ನೋಡಿ ಪತಿ ಶಾಕ್ ಆಗಿದ್ದಾನೆ. ಈ ವೇಳೆ ಅಲ್ವೆಸ್ ಹಿಗ್ಗಮುಗ್ಗ ಭಿಕ್ಷುಕನನ್ನು ಥಳಿಸಿದ್ದಾನೆ. ಪರಿಣಾಮ ಭಿಕ್ಷುಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಡರಲ್ ಜಿಲ್ಲೆಯ ಸಿವಿಲ್ ಪೊಲೀಸ್ ತನಿಖೆಯನ್ನು ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *