ಸಿಂಧೂರ ಕೇವಲ ಸಂಪ್ರದಾಯವಲ್ಲ, ಅದು ಸಂಕೇತ- ಭಾರತೀಯ ಸೇನೆ ಕೊಂಡಾಡಿದ ಮೋಹನ್ ಲಾಲ್

Public TV
1 Min Read

ಡರಾತ್ರಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ 9 ಅಡುಗುತಾಣಗಳ ಮೇಲೆ ಏರ್‌ಸ್ಟ್ರೈಕ್ ಮಾಡಿದ ಭಾರತೀಯ ಸೇನೆ ಕಾರ್ಯವನ್ನು ಮಾಲಿವುಡ್ ನಟ ಮೋಹನ್ ಲಾಲ್ (Mohan Lal) ಹೊಗಳಿದ್ದಾರೆ. ಇದನ್ನೂ ಓದಿ:ಯೋಧರ ಹೋರಾಟ ಶುರುವಾಗಿದೆ: ‘ಆಪರೇಷನ್ ಸಿಂಧೂರ’ಗೆ ಜೈ ಎಂದ ತಲೈವಾ

ಎಕ್ಸ್‌ನಲ್ಲಿ ನಾವು ಸಿಂಧೂರವನ್ನು ಕೇವಲ ಸಂಪ್ರದಾಯಿಕವಾಗಿ ಇಡುತ್ತಿಲ್ಲ. ಬದಲಾಗಿ ಸಂಕೇತವಾಗಿ ಇಡುತ್ತೇವೆ. ನಮಗೆ ಸವಾಲು ಹಾಕಿದ್ರೆ ನಾವು ಎಂದಿಗಿಂತಲೂ ಹೆಚ್ಚು ನಿರ್ಭೀತರಾಗಿ ಮತ್ತು ಬಲಶಾಲಿಯಾಗಿ ನಿಲ್ಲುತ್ತೇವೆ. ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ ಮತ್ತು ಬಿಎಸ್‌ಎಫ್‌ನ ಪ್ರತಿಯೊಬ್ಬ ಧೈರ್ಯಶಾಲಿ ಹೃದಯಗಳಿಗೆ ನಮಿಸುತ್ತೇನೆ. ನಿಮ್ಮ ಧೈರ್ಯ ನಮ್ಮ ಹೆಮ್ಮೆಯನ್ನು ಇಮ್ಮಡಿಗೊಳಿಸುತ್ತದೆ. ಜೈ ಹಿಂದ್.. ಆಪರೇಷನ್ ಸಿಂಧೂರ ಎಂದು ಭಾರತೀಯ ಸೇನೆಗೆ ಮೋಹನ್ ಲಾಲ್ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:ಆಪರೇಷನ್ ಸಿಂಧೂರ: ಪಾಕ್‌ಗೆ ತಕ್ಕ ಪಾಠ ಕಲಿಸಿದ ಭಾರತಕ್ಕೆ ಜೈ ಎಂದ ಬಾಲಿವುಡ್


ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ 26 ಮಂದಿ ಬಲಿಯಾಗಿದ್ದರು. ಅದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸುತ್ತಿರುವ ಆಪರೇಷನ್ ಸಿಂಧೂರ (Operation Sindoora) ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.

Share This Article