ಮಲಯಾಳಂ ನಟ ಮೇಘನಾಥನ್ ವಿಧಿವಶ

Public TV
1 Min Read

ಮಾಲಿವುಡ್‌ನಲ್ಲಿ (Mollywood) ವಿಲನ್‌ ಮತ್ತು ಹಲವು ಬಗೆಯ ಪಾತ್ರಗಳ ಮೂಲಕ ಗಮನ ಸೆಳೆದ ನಟ ಮೇಘನಾಥನ್ (Meghanathan) ಅವರು ವಿಧಿವಶರಾಗಿದ್ದಾರೆ. ಪತ್ನಿ ಸುಶ್ಮಿತಾ, ಮಗಳು ಪಾರ್ವತಿ ಅವರನ್ನು ನಟ ಅಗಲಿದ್ದಾರೆ. ಇದನ್ನೂ ಓದಿ:ಗುಂಪು ಕಟ್ಟಿಕೊಂಡು ಬರಲ್ಲ, ಸಿಂಗಲ್ ಸಿಂಹದ ರೀತಿ ಹೊಡೆಯುತ್ತೇನೆ: ಗುಡುಗಿದ ಚೈತ್ರಾ

ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ನಟ ಮೇಘನಾಥ್‌ನ್ (60) ಬಳಲುತ್ತಿದ್ದರು. ಅವರನ್ನು ಕೋಝಿಕ್ಕೋಡ್‌ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇಂದು (ನ.21) ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ನಟನ ನಿಧನಕ್ಕೆ ಮಾಲಿವುಡ್ ಚಿತ್ರರಂಗ ಸಂತಾಪ ಸೂಚಿಸಿದೆ.

ಇನ್ನೂ ಮೇಘನಾಥನ್ ಹೆಸರಾಂತ ನಟ ಬಾಲನ್ ಕೆ. ನಾಯರ್ ಅವರ ಮಗ. ಚಮಯಂ, ಚೆಂಕೋಲ್, ಮತ್ತು ಈ ಪೂಝಯುಂ ಕಡನ್ನು ಸೇರಿದಂತೆ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಅಸ್ತ್ರಮ್‌’ ಸಿನಿಮಾ ಮೂಲಕ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

Share This Article