ಇಬ್ಭಾಗವಾಯ್ತು ದೊಡ್ಮನೆ- ಅಧಿಕಾರಕ್ಕಾಗಿ ಯುವರಾಣಿ ಮೋಕ್ಷಿತಾ, ಮಂಜು ನಡುವೆ ಬಿಗ್‌ ಫೈಟ್‌

Public TV
2 Min Read

ಬಿಗ್ ಬಾಸ್ ಸಾಮ್ರಾಜ್ಯದ (Bigg Boss Kannada 11) ಆಟದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಉಗ್ರಂ ಮಂಜು ಸಾಮ್ರಾಜ್ಯ ಪತನದತ್ತ ಸಾಗುತ್ತಿದ್ದು, ಗದ್ದುಗೆ ಮೇಲೆ ಯುವರಾಣಿ ಮೋಕ್ಷಿತಾ ಕಣ್ಣೀಟ್ಟಿದ್ದಾರೆ. ಸಾಮ್ರಾಜ್ಯದ ಮೇಲೆ ಯುವರಾಣಿ ಮೋಕ್ಷಿತಾರ (Mokshitha Pai) ಕಣ್ಣು ಬಿದ್ದಿದೆ. ಮಹಾರಾಜರು ಮಂಜುಗಾಗಿ  ಅಲಂಕರಿಸಿರುವ ಕುರ್ಚಿ ಮೇಲೆ ಮೋಕ್ಷಿತಾ ಹೋಗಿ ಕೂತಿದ್ದಾರೆ. ಇದರಿಂದ ದೊಡ್ಮನೆ ಇದೀಗ ಇಬ್ಭಾಗವಾಗಿದ್ದು, ಅಧಿಕಾರಕ್ಕಾಗಿ ಕಿತ್ತಾಟ ನಡೆದಿದೆ.

ಬಿಗ್ ಬಾಸ್ ಸಾಮ್ರಾಜ್ಯಕ್ಕೆ ಇದೀಗ ಮೋಕ್ಷಿತಾ ಯುವರಾಣಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಮಂಜು ಅವರ ಮನೆಯ ಅಧಿಕಾರವನ್ನು ಕಸಿದುಕೊಳ್ಳಲು ಬರುತ್ತಿದ್ದಾರೆ ಅಂತಾ ಬಿಗ್ ಬಾಸ್ ಧ್ವನಿ ಕೇಳಿಸಿದೆ. ಈ ಬೆನ್ನಲ್ಲೇ ಉಗ್ರಂ ಮಂಜು (Ugramm Manju) ಅಧಿಕಾರ ನಮ್ಮದೇ ಎಂದು ತೊಡೆ ತಟ್ಟಿದ್ದಾರೆ. ಯುವರಾಣಿ ಮೋಕ್ಷಿತಾ ಕೂಡ ಮಾತಿಗೆ ಮಾತು ಕೊಟ್ಟಿದ್ದಾರೆ. ಇದನ್ನೂ ಓದಿ:ನಿಮ್ಮ ಬುದ್ಧಿವಂತಿಕೆಯಿಂದ ನಾವು ಯಾರು ಆಟ ಆಡಲಿಲ್ಲ: ಶೋಭಾ, ಹನುಮಂತ ನಡುವೆ ಕಿರಿಕ್

ಇತ್ತ ಮೋಕ್ಷಿತಾ ಈ ಸಾಮ್ರಾಜ್ಯದ ಯುವರಾಣಿ ನಾನು ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಅದೇ ರೀತಿ ಪ್ರಜೆಗಳಿಂದ ಯುವರಾಣಿಗೆ ಜಯವಾಗಲಿ ಎಂಬ ಘೋಷಣೆ ಕೂಡ ಮೊಳಗಿದೆ. ಅಷ್ಟರಲ್ಲೇ ಮೋಕ್ಷಿತಾ ಕ್ಯಾಪ್ಟನ್ಸಿ ರೂಮ್ ಒಳಗೆ ಹೋಗುವ ಅಧಿಕಾರ ನನಗೆ ಇದೆ ಎಂದು ನುಗ್ಗಿದ್ದಾರೆ. ಆ ಅಧಿಕಾರ ನಿಮಗೆ ಇಲ್ಲ. ಬಾಗಿಲು ಕ್ಲೋಸ್ ಮಾಡಿ ಎಂದು ಮಂಜು ಹೇಳಿದ್ದಾರೆ. ನಂತರ ಮತ್ತೆ ಕುರ್ಚಿ ವಿಚಾರಕ್ಕೆ ಮೋಕ್ಷಿತಾ ಮತ್ತು ಮಂಜು ನಡುವೆ ಹೋರಾಟ ನಡೆದಿದೆ. ಈ ಗದ್ದುಗೆ ಕಿತ್ತಾಟದಲ್ಲಿ ಯಾರು ಗೆದ್ದಿದ್ದಾರೆ ಅನ್ನೋದು ಇವತ್ತಿನ ಎಪಿಸೋಡ್‌ನಲ್ಲಿ ಗೊತ್ತಾಗಲಿದೆ. ಸದ್ಯ ವಾಹಿನಿ ಹಂಚಿಕೊಂಡಿರುವ ಪ್ರೋಮೋ ವೈರಲ್‌ ಆಗಿದೆ.

ಅಂದಹಾಗೆ, ಕಳೆದ ವಾರಾಂತ್ಯ ಬಿಗ್‌ ಬಾಸ್‌ನಿಂದ ಧರ್ಮ ಎಲಿಮಿನೇಟ್‌ ಆಗಿ ಹೊರಬಂದಿದ್ದಾರೆ. ವೈಲ್ಡ್‌ ಕಾರ್ಡ್‌ ಸ್ಪರ್ಧಿ ಶೋಭಾ ಮತ್ತು ರಜತ್‌ ಆಗಮಿಸಿದ್ಮೇಲೆ ಆಟ ಮತ್ತಷ್ಟು ಹೊರ ತಿರುವು ಪಡೆಯುತ್ತಿದೆ. ಈ ವಾರ ದೊಡ್ಮನೆಯಿಂದ ಯಾರು ಎಲಿಮಿನೇಟ್‌ ಆಗಲಿದ್ದಾರೆ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ನಿರೀಕ್ಷೆಯಿದೆ.

Share This Article