BBK 11: ತ್ರಿವಿಕ್ರಮ್‌ ಕೊಟ್ಟ ಟ್ವಿಸ್ಟ್‌- ಮೋಕ್ಷಿತಾ, ಐಶ್ವರ್ಯಾಗೆ ‌’ಬಿಗ್‌‌ ಬಾಸ್’ ಶಾಕ್

Public TV
1 Min Read

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ (Bigg Boss Kannada 11) ಸ್ಪರ್ಧಿಗಳ ನಡುವೆ ಜಗಳವೇ ಹೆಚ್ಚಾಗಿದೆ. ಈ ನಡುವೆ ಮನೆಯ ದಿನಸಿ ವಸ್ತುಗಳು ಖಾಲಿ ಆಗಿವೆ. ಮತ್ತೆ ದಿನಸಿ ವಸ್ತುಗಳನ್ನು ಮರಳಿ ನೀಡಬೇಕು ಎಂದರೆ ಬಿಗ್ ಬಾಸ್ ಕೆಲವು ಷರತ್ತುಗಳನ್ನು ಹೇಳಿದ್ದಾರೆ. ದಿನಸಿ ಬೇಕು ಅಂದರೆ ಕೆಲವು ಸ್ಪರ್ಧಿಗಳು ಒಂದಷ್ಟು ವಸ್ತುಗಳನ್ನು ತ್ಯಾಗ ಮಾಡಬೇಕು. ಈ ಹಿನ್ನೆಲೆ ಮೋಕ್ಷಿತಾ ಪೈ (Mokshitha Pai) ಮತ್ತು ಐಶ್ವರ್ಯಾಗೆ (Aishwary) ಬಿಗ್‌ ಬಾಸ್‌ ಶಾಕ್‌ ಕೊಟ್ಟಿದ್ದಾರೆ. ಇದನ್ನೂ ಓದಿ:ದೀಪಿಕಾ ಪಡುಕೋಣೆ ಜೊತೆ ಕೆಲಸ ಮಾಡುವುದು ಸುಲಭ- ಹೊಗಳಿದ ಇಮ್ತಿಯಾಜ್ ಅಲಿ

ಕಳೆದ ಎರಡು ಎಪಿಸೋಡ್‌ನಿಂದ ಬಿಗ್ ಬಾಸ್ ಆದೇಶಗಳು ಟೆಲಿಫೋನ್ ಮೂಲಕ ಬರುತ್ತಿವೆ. ಒಬ್ಬೊಬ್ಬರನ್ನು ಕರೆದು ಒಂದೊಂದು ರೀತಿಯಲ್ಲಿ ಸೂಚನೆಗಳನ್ನು ನೀಡಿದ್ದಾರೆ. ತ್ರಿವಿಕ್ರಮ್ ಅವರನ್ನು ಕರೆದು, ಈ ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದ ಇಬ್ಬರ ಹೆಸರನ್ನು ಸೂಚಿಸಿ ಎಂದಿದ್ದಾರೆ. ಅದಕ್ಕೆ ತ್ರಿವಿಕ್ರಮ್ ಅವರು ಮೋಕ್ಷಿತಾ ಪೈ ಮತ್ತು ಐಶ್ವರ್ಯಾ ಅವರ ಹೆಸರನ್ನು ತಿಳಿಸಿದರು.

ಮೋಕ್ಷಿತಾ ಪೈ ಮತ್ತು ಐಶ್ವರ್ಯಾಗೆ ಸಂಬಂಧಿಸಿದ ಯಾವುದೇ ವಸ್ತುಗಳು ಕೂಡ ಈ ಮನೆಯಲ್ಲಿ ಇರಬಾರದು. ಎಲ್ಲವನ್ನೂ ತಂದು ಸ್ಟೋರ್ ರೂಮ್‌ನಲ್ಲಿ ಇರಿಸಿ ಎಂದು ಬಿಗ್ ಬಾಸ್ ಕಡೆಯಿಂದ ಆದೇಶ ಬಂತು. ಒಂದು ಕ್ಲಿಪ್ ಕೂಡ ಇರಬಾರದು ಎಂದು ತ್ರಿವಿಕ್ರಮ್ ಹೇಳಿದರು. ಬಿಗ್‌ ಬಾಸ್‌ ಆದೇಶದಂತೆ ಮೋಕ್ಷಿತಾ ಹಾಗೂ ಐಶ್ವರ್ಯಾ ತಮ್ಮ ಎಲ್ಲಾ ವಸ್ತುಗಳನ್ನು ನೀಡಿದ್ದಾರೆ. ಇದಾದ ಬಳಿಕ ಮನೆಮಂದಿಗೆ ದಿನಸಿ ಪದಾರ್ಥಗಳನ್ನು ಬಿಗ್‌ ಬಾಸ್‌ ನೀಡಿದ್ದಾರೆ.  ಆದರೆ ಅವರ ಬಟ್ಟೆಯ ಬ್ಯಾಗ್‌ಗಳನ್ನಾದರೂ ಬಿಗ್‌ ಬಾಸ್‌ ವಾಪಸ್‌ ನೀಡುತ್ತಾರಾ? ಕಾದುನೋಡಬೇಕಿದೆ.

Share This Article