24ರಂದು ಬಿಡುಗಡೆಯಾಗಲಿದೆ ‘ಮೋಕ್ಷ’ ಟೀಸರ್!

Public TV
1 Min Read

ಬೇರೆಬೇರೆ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಕ್ರಿಯೇಟಿವ್ ಮನಸುಗಳೇ ಆಗಾಗ ತಾಜಾ ಅನುಭೂತಿ ತುಂಬುವಂಥಾ ಸಿನಿಮಾಗಳನ್ನು ರೂಪಿಸಿ ಪ್ರೇಕ್ಷಕರ ಮುಂದೆ ಅನಾವರಣಗೊಳಿಸುತ್ತಾ ಬರುತ್ತಿವೆ. ಇದೀಗ ಕಾರ್ಪೊರೇಟ್ ಕಂಪೆನಿಗಳ ಜಾಹೀರಾತುಗಳನ್ನು ರೂಪಿಸುತ್ತಾ ಆ ವಲಯದಲ್ಲಿ ಭಾರೀ ಜನಪ್ರಿಯತೆ, ಬೇಡಿಕೆ ಹೊಂದಿರುವ ಕ್ರಿಯಾಶೀಲ ತಂಡವೊಂದು ಮೋಕ್ಷ ಎಂಬ ಚಿತ್ರದ ಮೂಲಕ ಆಗಮಿಸಿದೆ.

ಈಗಾಗಲೇ ಒಂದಷ್ಟು ಬಗೆಯಲ್ಲಿ ಸುದ್ದಿ ಕೇಂದ್ರದಲ್ಲಿರುವ ಈ ಸಿನಿಮಾದ ಟೀಸರ್ ಇದೇ ತಿಂಗಳ 24ರಂದು ಬಿಡುಗಡೆಯಾಗಲಿದೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಕಥಾನಕವನ್ನೊಳಗೊಂಡಿರುವ ಚಿತ್ರ. ಹಾಗೆಂದಾಕ್ಷಣ ಇದು ಈಜಾನರಿಗೊಳಪಡುವ ಸಿದ್ಧಸೂತ್ರದ ಚಿತ್ರ ಎಂದುಕೊಳ್ಳಬೇಕಿಲ್ಲ. ಹೊಸ ತಂಡವೆಂದ ಮೇಲೆ ಇಲ್ಲಿ ಹೊಸತನ ಇದ್ದೇ ಇರುತ್ತದೆ. ಅಂಥಾದ್ದೊಂದು ಸ್ಪಷ್ಟ ವಿಚಾರಗಳೇ ಚಿತ್ರತಂಡದ ಕಡೆಯಿಂದ ಹೊರಬೀಳುತ್ತಿವೆ.

ಅಂದಹಾಗೆ ಇದು ಸಮರ್ಥ್ ನಾಯಕ್ ನಿರ್ದೇಶನದಲ್ಲಿ ಮೂಡಿಬಂದಿರುವ ಮೊದಲ ಚಿತ್ರ. ಅವರು ಕಾರ್ಪೋರೇಟ್ ವಲಯದಲ್ಲಿ ಕ್ರಿಯಾಶೀಲವಾದ, ಅದ್ದೂರಿ ಜಾಹೀರಾತುಗಳನ್ನು ನಿರ್ದೇಶನ ಮಾಡುವ ಮೂಲಕ ಸೈ ಅನ್ನಿಸಿಕೊಂಡಿರುವವರು. ಹೀಗೆ ಕಾರ್ಪೊರೇಟ್ ವಲಯದಲ್ಲಿ ಚೆಂದದ ಜಾಹೀರಾತುಗಳನ್ನು ನಿರ್ದೇಶನ ಮಾಡುತ್ತಲೇ ಸಮರ್ಥವಾದೊಂದು ತಂಡವನ್ನು ಸಮರ್ಥ್ ಕಟ್ಟಿದ್ದರು. ಅದರ ತುಂಬಾ ಸಿನಿಮಾ ಧ್ಯಾನಹೊಂದಿದ್ದವರೇ ತುಂಬಿಕೊಂಡಿದ್ದರು. ಈ ಕಾರಣದಿಂದಲೇ ಕಾರ್ಪೋರೇಟ್ ಜಾಹೀರಾತನ್ನು ತಾವುಗುರಿ ಸೇರುವ ಹೆಜ್ಜೆಯೆಂದೇ ಪರಿಗಣಿಸಿ ಆ ಕ್ರೇತದಲ್ಲಿ ತನ್ನನ್ನು ತಾನು ಪ್ರೂವ್‍ಮಾಡಿಕೊಂಡಿರುವ ಈ ತಂಡವೀಗ ಮೋಕ್ಷ ಎಂಬ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣಮಾಡಿದೆ. ಇಲ್ಲಿ ಕಥೆಗೇ ಚಿತ್ರತಂಡ ನಾಯಕನ ಸ್ತಾನವನ್ನು ಕೊಟ್ಟಿದೆ. ಮೋಹನ್ ಧನರಾಜ್‍ಮತ್ತು ಆರಾಧ್ಯ ಲಕ್ಷ್ಮಣ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇದೇ 24ರಂದುಮೋಕ್ಷದ ಟೀಸರ್ ಲಾಂಚ್ ಆಗಲಿದೆ.

Share This Article
Leave a Comment

Leave a Reply

Your email address will not be published. Required fields are marked *