ಇರಾನ್‌ನ ನೂತನ ಸರ್ವೋಚ್ಚ ನಾಯಕನಾಗಿ ಖಮೇನಿ ಪುತ್ರ ಮೊಜ್ತಬಾ ಆಯ್ಕೆ

2 Min Read

ಟೆಹ್ರಾನ್‌: ಇಸ್ರೇಲ್‌-ಅಮೆರಿಕದ (Israel – USA) ಪ್ರತೀಕಾರದ ದಾಳಿಯ ನಡುವೆ ಇರಾನ್‌ ಹೊಸ ನಾಯಕನನ್ನ ಆಯ್ಕೆ ಮಾಡಿದೆ. ತಜ್ಞರ ಸಭೆಯು ಆಯತೊಲ್ಲಾ ಅಲಿ ಖಮೇನಿ ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನ ಇರಾನ್‌ನ ಹೊಸ ಸರ್ವೋಚ್ಛ ನಾಯಕನನ್ನಾಗಿ (Irans Supreme Leader) ಆಯ್ಕೆ ಮಾಡಿದೆ ಎಂದು ಇರಾನ್‌ನ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ವರದಿಗಳ ಪ್ರಕಾರ, 56 ವರ್ಷದ ಮೊಜ್ತಬಾ (Mojtaba Khamenei) ಅವರನ್ನ ದೇಶದ ನಿಯಂತ್ರಣ ವಹಿಸಿಕೊಳ್ಳಲು ಆಯ್ಕೆ ಮಾಡಲಾಗಿದ್ದು, ದೀರ್ಘಕಾಲದ ನಾಯಕನಾಗಿ ಮುಂದುವರಿಯಲು ಎದುರು ನೋಡುತ್ತಿದ್ದಾರೆ. ಇದನ್ನೂ ಓದಿ: ವರ್ಷಾನುಗಟ್ಟಲೆ ಟ್ರಾಫಿಕ್‌ ಕ್ಯಾಮೆರಾ‌ ಹ್ಯಾಕ್‌, ಮೊಬೈಲ್‌ ನೆಟ್‌ವರ್ಕ್‌ ಟ್ರ್ಯಾಕ್‌ – ಖಮೇನಿ ಹತ್ಯೆಗೆ ಇಸ್ರೇಲ್‌ ರಣತಂತ್ರ ಹೇಗಿತ್ತು?

Ayatollah Ali Khameneii

ಇದಕ್ಕೂ ಮುನ್ನ ಹಿರಿಯ ಧರ್ಮಗುರು ಅಯತೊಲ್ಲಾ ಅಲಿರೆಜಾ ಅರಾಫಿ (Ayatollah Arafi) ಅವರು ಇರಾನ್‌ನ (Iran) ಮಧ್ಯಂತರ ಸರ್ವೋಚ್ಚ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಇದನ್ನೂ ಓದಿ: 30 ಬಾಂಬ್‌ಗಳಿಂದ ದಾಳಿ – ತನ್ನ ಮನೆಯಲ್ಲೇ ಖಮೇನಿ ಹತ್ಯೆಗೆ ಅಮೆರಿಕ-ಇಸ್ರೇಲ್‌ ರೂಪಿಸಿದ್ದ ರಣತಂತ್ರ ಹೇಗಿತ್ತು?

ಮೊಜ್ತಬಾ ಖಮೇನಿ ಯಾರು?
ಮೊಜ್ತಬಾ ಖಮೇನಿ (56) ಇಸ್ತೇಲ್‌ ದಾಳಿಯಲ್ಲಿ ಹತ್ಯೆಯಾದ ಆಯತೊಲ್ಲಾ ಅಲಿ ಖಮೇನಿ ಅವರ 2ನೇ ಪುತ್ರ. ದೇಶದ ಆಡಳಿತದ ಮೇಲೆ ಪ್ರಬಲ ಹಿಡಿತ ಹೊಂದಿದ್ದರು. ಆದ್ರೆ ಬಹಳ ಹಿಂದಿನಿಂದಲೂ ಇಸ್ಲಾಮಿಕ್‌ ಗಣರಾಜ್ಯವು ವಂಶಪಾರಂಪರ್ಯ ಆಡಳಿತವನ್ನ ವಿರೋಧಿತ್ತು. ಅಲ್ಲದೇ ಮೊಜ್ತಬಾ ಥೀಯೋಲಾಜಿಕಲ್​ ಶಾಸ್ತ್ರ ಹೊಂದಿಲ್ಲ ಅನ್ನೋ ಆರೋಪ ಕೂಡ ಕೇಳಿಬಂದಿತ್ತು. ಆದರೆ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮೊಜ್ತಬಾ ಅವರನ್ನ ಬೆಂಬಲಿಸಲು ಮತ್ತು ಅವರನ್ನೇ ಹೊಸ ನಾಯಕನ್ನಾಗಿ ಆಯ್ಕೆ ಮಾಡಲು ಸಭೆ ಸೇರಿದ್ದ ಧರ್ಮಗುರುಗಳ ಮೇಲೆ ಒತ್ತಡ ಹೇರಿತ್ತು. ಆದ್ದರಿಂದ ಮೊಜ್ತಬಾ ನೂತನ ನಾಯಕನಾಗಿ ಆಯ್ಕೆಯಾಗಿದ್ದಾರೆ ಎನ್ನುತ್ತಿವೆ ವರದಿಗಳು.

Ayatollah Arafi

ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ ಮೊಜ್ತಬಾ, ತೆರೆಮರೆಯಲ್ಲಿದ್ದುಕೊಂಡೇ ಆಡಳಿತದ ಮೇಲೆ ಪ್ರಭಾವ ಬೀರುತ್ತಿದ್ದರು. ತಂದೆ ಅಲಿ ಖಮೇನಿ ಇದ್ದಾಗಲೂ ಪ್ರಾಯೋಗಿಕವಾಗಿ ಸುಪ್ರೀಂ ಲೀಡರ್ ಕಚೇರಿಯನ್ನ ನಿರ್ವಹಿಸುತ್ತಿದ್ದರು. ಅನೇಕ ವಿಶ್ಲೇಷಕರು ವ್ಯವಸ್ಥೆಯೊಳಗೆ ಹಿಡಿತ ಸಾಧಿಸಿದ್ದರು. ಮುಖ್ಯವಾಗಿ ಇರಾನ್‌ – ಇರಾಕ್‌ ಯುದ್ಧದ ಸಮಯದಲ್ಲಿ ಸಶಸ್ತ್ರ ಪಡೆಗಳಲ್ಲಿ ಸೇವೆ ಕೂಡ ಸಲ್ಲಿಸಿದ್ದರೂ ಎಂದು ಹೇಳಲಾಗಿದೆ.

ಇದೆಲ್ಲಕ್ಕಿಂತ ಮುಖ್ಯವಾಗಿ ಅಲಿ ಖಮೇನಿ ಬಹಳ ದಿನಗಳ ಹಿಂದೆಯೇ ಮಗನನ್ನು ಮುಂದಿನ ನಾಯಕನಾಗಿ ರೂಪಿಸುವ ಇಂಗಿತ ವ್ಯಕ್ತಪಡಿಸಿದ್ದರು.

Share This Article