ಐಪಿಎಲ್‌ ಅನ್ನು ಪಿಎಸ್‌ಎಲ್‌ ಹಿಂದಿಕ್ಕಿ ವಿಶ್ವದ ನಂ.1 ಲೀಗ್‌ ಆಗುತ್ತೆ: ಮೊಹ್ಸಿನ್‌ ನಖ್ವಿ

1 Min Read

ಇಸ್ಲಾಮಾಬಾದ್: ಐಪಿಎಲ್‌ ಅನ್ನು ಪಿಎಸ್‌ಎಲ್‌ ಹಿಂದಿಕ್ಕಲಿದೆ. ವಿಶ್ವದ ನಂಬರ್‌ 1 ಲೀಗ್‌ ಆಗಲಿದೆ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಮುಖ್ಯಸ್ಥ ಮೊಹ್ಸಿನ್‌ ನಖ್ವಿ ಬಡಾಯಿ ಕೊಚ್ಚಿಕೊಂಡಿದ್ದಾರೆ.

ಪಿಸಿಬಿ ಆಡಳಿತ ಮಂಡಳಿಯ ಸಭೆಯಲ್ಲಿ ನಖ್ವಿ ಮಾತನಾಡಿದ್ದಾರೆ. ಮಂಡಳಿಯು 2024-25ರ ಹಣಕಾಸು ವರ್ಷದ ವಾರ್ಷಿಕ ಲೆಕ್ಕಪರಿಶೋಧಿತ ಹಣಕಾಸು ಹೇಳಿಕೆಗಳನ್ನು ಔಪಚಾರಿಕವಾಗಿ ಅನುಮೋದಿಸಿತು.

ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಹೂಡಿಕೆಗೆ ಪ್ರಮುಖ ತಾಣವಾಗಿದೆ. ಪಿಎಸ್‌ಎಲ್ ವಿಶ್ವದ ಅಗ್ರ ಲೀಗ್ ಆಗುವ ಹಾದಿಯಲ್ಲಿದೆ ಎಂದು ನಖ್ವಿ ಹೇಳಿಕೊಂಡಿದ್ದಾರೆ. ಪಿಎಸ್‌ಎಲ್ ವಿಶ್ವದ ನಂಬರ್ ಒನ್ ಲೀಗ್ ಆಗುವ ಸಮಯ ದೂರವಿಲ್ಲ ಎಂದು ತಿಳಿಸಿದ್ದಾರೆ.

ಲೀಗ್‌ನ ಹಾದಿಯ ಬಗ್ಗೆ ನನಗೆ ವಿಶ್ವಾಸವಿದೆ. ಹೂಡಿಕೆದಾರರ ಪ್ರತಿಕ್ರಿಯೆಯು ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನ ಕ್ರಿಕೆಟ್‌ನ ಉಜ್ವಲ ಭವಿಷ್ಯದ ಸ್ಪಷ್ಟ ಸಂಕೇತವಾಗಿದೆ ಎಂದು ನಖ್ವಿ ಮಾತನಾಡಿದ್ದಾರೆ.

Share This Article