ಮೋಹನ್‍ಲಾಲ್ ಅಭಿನಯದ ವೃಷಭ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

Public TV
1 Min Read

ಮಾಲಿವುಡ್ ಸೂಪರ್‌ಸ್ಟಾರ್‌ ಮೋಹನ್‍ಲಾಲ್ (Mohanlal) ಅಭಿನಯದ ವೃಷಭ (Vrushabha) ಸಿನಿಮಾ ಬೆಳ್ಳೆತೆರೆಗೆ ಅಪ್ಪಳಿಸೋಕೆ ಸಜ್ಜಾಗಿದೆ. ಸದ್ಯ ತುದಿಗಾಲಿನಲ್ಲಿ ನಿಂತು ಕಾಯ್ತಿದ್ದ ಅಭಿಮಾನಿ ಬಳಗಕ್ಕೆ ಗುಡ್‍ನ್ಯೂಸ್ ಸಿಕ್ಕಿದೆ. ಇದೇ ವರ್ಷ ನವೆಂಬರ್ 5ರಂದು ಸಿನಿಮಾ ತೆರೆಕಾಣಲು ಮುಹೂರ್ತ ಫಿಕ್ಸ್ ಮಾಡಿಕೊಂಡಿದೆ. ಈ ಸುದ್ದಿ ಕೇಳಿ ಮೋಹನ್ ಲಾಲ್ ಭಕ್ತಗಣ ಕೇಕೆಹಾಕಿ ಕುಣಿದಾಡಿದೆ.

ಬಹುಕೋಟಿ ವೆಚ್ಚದಲ್ಲಿ ಬಹುಭಾಷೆಯಲ್ಲಿ ತಯಾರಾಗಿರುವ ವೃಷಭ ಸಿನಿಮಾ ಫಸ್ಟ್‌ಲುಕ್ ಪೋಸ್ಟರ್ ಹಾಗೂ ಟೀಸರ್‍ನಲ್ಲೇ ಚಿತ್ರ ರಸಿಕರ ಗಮನ ಸೆಳೆದಿದೆ. ನಂದಕಿಶೋರ್ ನಿರ್ದೇಶನದ ಈ ಸಿನಿಮಾದಲ್ಲಿ ಬಹುತಾರಾಗಣವಿದೆ. ಕನ್ನಡದ ತಾರೆಯರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಂದಹಾಗೆ ನಟಿ ರಾಗಿಣಿ ದ್ವಿವೇದಿ ಹಾಗೂ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಈ ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ. ಇದನ್ನೂ ಓದಿ: ಲಿವ್‌ಇನ್‌ ರಿಲೇಶನ್‌ಶಿಪ್‌ ಸುತ್ತ ‘ಪ್ರೇಮಿಗಳ ಗಮನಕ್ಕೆ’ – ಟ್ರೈಲರ್ ರಿಲೀಸ್

ಇದೇ ತಿಂಗಳು ತೆರೆಗೆ ಬರಬೇಕಿದ್ದ ವೃಷಭ ಸಿನಿಮಾ ನವೆಂಬರ್‍ನಲ್ಲಿ ರಿಲೀಸ್ ಆಗ್ತಿದೆ. ಇದನ್ನೂ ಓದಿ: ಮಹಾಲಯ ಚಿತ್ರದ ಮೊದಲ ಚಿತ್ರಕ್ಕೆ ಶ್ರೀಮುರಳಿ ಕ್ಲ್ಯಾಪ್

Share This Article